
ಗಂಗಾವತಿ,: ಇಂದು ದಿನಾಂಕ 30/6/2024 ರಂದು ನಗರದ ಶ್ರೀ ಚನ್ನಮಲ್ಲಿಕಾರ್ಜುನ ಮಠದ ಆವರಣದಲ್ಲಿ ವೀರಶೈವ ಲಿಂಗಾಯತ ನೌಕರ ಸಂಘದ ವತಿಯಿಂದ ಎಸ್. ಎಸ್. ಎಲ್. ಸಿ ಮತ್ತು ಪಿ.ಯು.ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಲಿಂಗಾಯತ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಗಂಗಾವತಿಯ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿ ಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯೋಗ ಗುರುಗಳಾದ ಶಾಂತವೀರ ಸ್ವಾಮಿಗಳು ವೀರಶೈವ ಲಿಂಗಾಯತ ನೌಕರ ಸಂಘದ ಅಧ್ಯಕ್ಷರಾದ ಶರಣಪ್ಪ ಹಕ್ಕಂಡಿ, ಗೌರವಾಧ್ಯಕ್ಷರಾದ ಶರಣಯ್ಯ, ಉಪಾಧ್ಯಕ್ಷರಾದ ಶರಣಯ್ಯ ವಸ್ತ್ರದ, ಕಾರ್ಯದರ್ಶಿಗಳಾದ ಶಿವಪ್ರಸಾದ್, ಬಸ್ಸಟ್ಟೆಪ್ಪ, ಖಜಾಂಚಿ ಮಲ್ಲಿಕಾರ್ಜುನ ಹಟ್ಟಿ, ಸಹಕಾರದರ್ಶಿ ಶ್ರೀಮತಿ ನಾಗರತ್ನ, ಪದಾಧಿಕಾರಿಗಳಾದ ರವಿಕುಮಾರ್, ಅಮೃತೇಶ್ ಸಜ್ಜನ್, ಕಲ್ಲನಗೌಡ, ಶ್ರೀಮತಿ ಚಂದ್ರಮ್ಮ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
