Breaking News

ಬೆಂಗಳೂರಿಗೆಮತ್ತೊಂದು ಏರ್‌ಪೋರ್ಟ್‌ ಖಚಿತ.. ಕರ್ನಾಟಕ, ತಮಿಳುನಾಡುಮಹತ್ವದ ನಿರ್ಧಾರ; ಏನದು?




ಬೆಂಗಳೂರು ಸುತ್ತಮುತ್ತ ಮತ್ತೊಂದು ಏರ್‌ಪೋರ್ಟ್ ಸ್ಥಾಪನೆಗೆ ಮೆಗಾ ಪ್ಲಾನ್‌

ಜಾಹೀರಾತು

ಹೊಸೂರಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ನಿರ್ಧಾರ

ದೆಹಲಿ, ಗೋವಾ, ಮುಂಬೈ ಮಾದರಿಯಲ್ಲಿ ಮತ್ತೊಂದು ಏರ್‌ಪೋರ್ಟ್!

ರಾಜಧಾನಿ ಬೆಂಗಳೂರಿಗೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಗತ್ಯವಿದೆ. ಸಿಲಿಕಾನ್ ಸಿಟಿ ಬೆಳೆಯುತ್ತಿರುವ ವೇಗಕ್ಕೆ ಸಾಥ್ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರಲ್ಲಿ ಮತ್ತೊಂದು ಏರ್‌ಪೋರ್ಟ್ ನಿರ್ಮಾಣಕ್ಕೆ ಸ್ಥಳ ಹುಡುಕಾಟ, ಮೂಲಸೌಕರ್ಯ ಅಭಿವೃದ್ದಿಗೆ ಸರ್ಕಾರ ಪ್ಲ್ಯಾನ್ ಮಾಡುತ್ತಿದೆ.

ಬೆಂಗಳೂರಿಗೆ ಮತ್ತೊಂದು ಏರ್‌ಪೋರ್ಟ್ ನಿರ್ಮಾಣದ ಸುದ್ದಿ ಹೊರ ಬಂದ ಬಳಿಕ ತಮಿಳುನಾಡು ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಸಿಎಂ ಎಂ.ಕೆ ಸ್ಟಾಲಿನ್ ಅವರು ಬೆಂಗಳೂರಿನ ಗಡಿಭಾಗವಾದ ತಮಿಳುನಾಡಿನ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯ ಘೋಷಣೆ ಮಾಡಿದ್ದಾರೆ.

ಬೆಂಗಳೂರು ಗಡಿಭಾಗದಲ್ಲಿ ವರ್ಷಕ್ಕೆ 3 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯದ ಏರ್‌ಪೋರ್ಟ್ ನಿರ್ಮಾಣ ಮಾಡಲಾಗುತ್ತದೆ. ತಮಿಳುನಾಡು ವಿಧಾನಸಭೆಯಲ್ಲಿ ಇಂದು 2 ಸಾವಿರ ಎಕರೆ ಜಾಗದಲ್ಲಿ ಏರ್‌ಪೋರ್ಟ್ ನಿರ್ಮಾಣ ಮಾಡುವ ಘೋಷಣೆಯನ್ನು ಸಿಎಂ ಎಂ.ಕೆ ಸ್ಟಾಲಿನ್ ಅವರು ಮಾಡಿದ್ದಾರೆ.

ಎಂ.ಕೆ ಸ್ಟಾಲಿನ್ ಹೇಳಿದ್ದೇನು?
ಇತ್ತೀಚೆಗೆ ಹೊಸೂರಿಗೆ ಹೆಚ್ಚಿನ ಬಂಡವಾಳ ಹೂಡಿಕೆ ಹರಿದು ಬರುತ್ತಿದೆ. ಹೊಸೂರಿನಲ್ಲಿ ಆಧುನಿಕ ಮೂಲಸೌಕರ್ಯಗಳ ಅಭಿವೃದ್ದಿಗೆ ವಿವಿಧ ಯೋಜನೆಯನ್ನು ಜಾರಿ ಮಾಡಿದ್ದೇವೆ. ಹೊಸೂರು ಜಿಲ್ಲೆಯನ್ನು ಪ್ರಮುಖ ಆರ್ಥಿಕ ಸೆಂಟರ್ ಆಗಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ, ಆರ್ಥಿಕ ಅಭಿವೃದ್ದಿಯ ಉತ್ತೇಜನಕ್ಕೆ ಹೊಸೂರಿನಲ್ಲಿ ಏರ್‌ಪೋರ್ಟ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಹೊಸೂರು, ಕೃಷ್ಣಗಿರಿ, ಧರ್ಮಪುರಿ ಜಿಲ್ಲೆಗಳ ಅಭಿವೃದ್ಧಿಗೆ ಏರ್ ಪೋರ್ಟ್ ಸಹಕಾರಿಯಾಗಲಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.

ಏರ್‌ಪೋರ್ಟ್‌ಗೆ ಅನುಮತಿ ಸಿಗುತ್ತಾ?
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸರ್ಕಾರ ಹಾಗೂ ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ ನಡುವೆ ಒಂದು ಷರತ್ತಿನ ಒಪ್ಪಂದ ಆಗಿದೆ. ಮುಂದಿನ 25 ವರ್ಷಗಳ ಕಾಲ ಬೆಂಗಳೂರು ಏರ್‌ಪೋರ್ಟ್‌ನಿಂದ 150 ಕಿ.ಮೀ ವ್ಯಾಪ್ತಿಯಲ್ಲಿ ಬೇರೆ ಏರ್‌ಪೋರ್ಟ್‌ಗೆ ಅನುಮತಿ ನೀಡಬಾರದು. ಕೇಂದ್ರ ಸರ್ಕಾರ ಹಾಗೂ ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್‌ನ ಒಪ್ಪಂದವು 2033ಕ್ಕೆ ಪೂರ್ಣವಾಗುತ್ತಿದೆ.

ಕರ್ನಾಟಕ ಸರ್ಕಾರದಿಂದಲೂ ಸಿದ್ಧತೆ!
ಮತ್ತೊಂದೆಡೆ ಕರ್ನಾಟಕ ಸರ್ಕಾರದಿಂದಲೂ ಬೆಂಗಳೂರು ಸುತ್ತಮುತ್ತ ಮತ್ತೊಂದು ಏರ್‌ಪೋರ್ಟ್ ಸ್ಥಾಪನೆಗೆ ಸ್ಥಳ ಹುಡುಕಾಟ ನಡೆಸಿದೆ. ಏರ್‌ಪೋರ್ಟ್ ನಿರ್ಮಾಣಕ್ಕೆ ಕನಿಷ್ಠ 8ರಿಂದ 10 ವರ್ಷಗಳೇ ಬೇಕಾಗುತ್ತೆ. ಹೀಗಾಗಿ ಈಗಿನಿಂದಲೇ ಸ್ಥಳ ಹುಡುಕಾಟ, ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಪ್ಲಾನ್ ಮಾಡುತ್ತಿದೆ.

ಇದನ್ನೂ ಓದಿ: UNESCO- ವಿಶ್ವದ ಅತ್ಯಂತ ಸುಂದರ ಏರ್​​ಪೋರ್ಟ್​ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಇತ್ತೀಚೆಗೆ ಬೆಂಗಳೂರಿಗೆ ದೆಹಲಿ, ಗೋವಾ, ಮುಂಬೈ ಮಾದರಿಯಲ್ಲಿ ಮತ್ತೊಂದು ಏರ್ ಪೋರ್ಟ್ ನಿರ್ಮಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದರು. ಇದೀಗ ಬೆಂಗಳೂರು ಗಡಿಯ ತಮಿಳುನಾಡಿನ ಹೊಸೂರಿನಲ್ಲಿ ಏರ್‌ಪೋರ್ಟ್ ನಿರ್ಮಾಣದ ಘೋಷಣೆ ಮಾಡಿರೋದು ಕುತೂಹಲಕ್ಕೆ ಕಾರಣವಾಗಿದೆ.

About Mallikarjun

Check Also

ಜ್ಞಾನಾಕ್ಷಿರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

Gnanakshi Rajarajeshwari Music Video Album Title Unveiled ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.