
ವರದಿ : ಬಂಗಾರಪ್ಪ. ಸಿ .
ಹನೂರು:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29ನೇ ಸಾಲಿನ ಅವಧಿಗೆ ಎಲ್ಲಾ ಹಂತದ ಚುನಾವಣಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸಂಘದ ಬೈಲಾ ನಿಯಮ 47ರ ರೀತ್ಯಾ ಕರಡು ಮತದಾರರ ಪಟ್ಟಿ ಹೊರಡಿಸಲು ಸಂಘದ ಸದಸ್ಯರು ಹೆಸರು ನೋಂದಾಯಿಸುವಂತೆ ಹನೂರು ತಾಲೂಕು ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ. ಜೂನ್ 28ರ ಒಳಗೆ ತಾಲೂಕಿನ ಎಲ್ಲಾ ಇಲಾಖೆಗಳ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಪಟ್ಟಿಯನ್ನು ಸರ್ಕಾರಿ ನೌಕರರ ಸಂಘಕ್ಕೆ ಒಳಪಡುವ ಇಲಾಖೆಗಳ ಮುಖ್ಯಸ್ಥರು ತಯಾರಿಸಿ ಬಟವಾಡೆ ಅಧಿಕಾರಿ ಅವರಿಂದ ದೃಢೀಕರಣ ಪಡೆದು ಸಂಘದ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಬೇಕೆಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ ಗುರುಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ 9449937744/9113282733 ಸಂಪರ್ಕಿಸುವಂತೆ ಕೋರಿದೆ.
Kalyanasiri Kannada News Live 24×7 | News Karnataka
