ವರದಿ :ಬಂಗಾರಪ್ಪ .ಸಿ .
ಹನೂರು:ಇದೆ ತಿಂಗಳು 27ರಂದು
ನಡೆಯುವ ನಾಡಪ್ರಭು ಕೆಂಪೇಗೌಡರವರ 515ನೇ ಜನ್ಮದಿನಾಚರಣೆ ಕಾರ್ಯಕ್ರಮ ಅಂಗವಾಗಿ ನಡೆಯಬೇಕಿದ್ದ ಜಯಂತಿಗಾಗಿ ಇದುವರೆಗೂ ಪೂರ್ವಭಾವಿ ಸಭೆ ನಡೆಸದೇ ಇರುವುದಕ್ಕೆ ,ಪಟ್ಟಣದ ಒಕ್ಕಲಿಗ ಸಮಾಜದ ಹಲವು ನಾಯಕರುಗಳು ತಾಲೂಕು ಆಡಳಿತ ಮಂಡಳಿಯ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ ಅದ್ದರಿಂದ ಮುಂದಿನ ದಿನಗಳಲ್ಲಿ ಒಕ್ಕಲಿಗ ಸಮಾಜದ ಮುಖಂಡರ ನೇತೃತ್ವದಲ್ಲಿ ಸಭೆಯ ತಿರ್ಮಾನದಂತೆ ನೆಡಸಲಾಗುವುದು ಎಂದು ಶಾಸಕರಾದ ಎಮ್ ಆರ್ ಮಂಜುನಾಥ್ ತಿಳಿಸಿದರು.
ನಂತರ ಮಾತನಾಡಿದ ಅವರು
ಕಳೆದ ಹಲವಾರು ವರ್ಷಗಳಿಂದ ದೇಶದ ಮಹಾ ನಾಯಕರುಗಳ ಜಯಂತಿ ಕಾರ್ಯಕ್ರಮ ಸಂಬಂಧ ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ತಹಸಿಲ್ದಾರ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಕರೆದು ಸಮಾಜದ ಮುಖಂಡರು ಹಾಗೂ ಇನ್ನಿತರ ಅಭಿಪ್ರಾಯ ಕೇಳಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು .
ನಾಡಪ್ರಭು ಕೆಂಪೇಗೌಡ ಜಯಂತಿಗೆ ಬೆರಳಿಣಿಕೆ ದಿನ ಇದ್ದರೂ ಪೂರ್ವಭಾವಿ ಸಭೆ ಕರೆಯದಿರುವುದರಿಂದ ನಮಗೆ ಕಾರ್ಯಕ್ರಮ ಮಾಡಲು ಸಮಯದ ಅಭಾವವಿರುತ್ತದೆ ಎಂದು ಸಮುದಾಯದ ಸಂಘ ಸಂಸ್ಥೆ ಮುಖಂಡರ ಬೇಸರಕ್ಕೆ ಕಾರಣವಾಯಿತು .
ಈ ಬಗ್ಗೆ ಹನೂರು ತಾಲೂಕು ತಹಸಿಲ್ದಾರ್ ವೈ.ಕೆ.ಗುರುಪ್ರಸಾದ್ ಪ್ರತಿಕ್ರಿಯಿಸಿ,ನಾಡಿನ ಎಲ್ಲಾ ಮಹನೀಯರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಿಲ್ಲಾಧಿಕಾರಿಯವರು ಹಾಗೂ ಶಾಸಕರು ನೇತೃತ್ವದ ಪ್ರಗತಿ ಪರಿಶೀಲನ ಸಭೆ ಸೇರಿದಂತೆ ಕಚೇರಿಯಲ್ಲಿ ಇಲಾಖೆಯ ಇನ್ನಿತರ ಕೆಲಸ ಕಾರ್ಯಗಳ ಒತ್ತಡವಿದ್ದ ಹಿನ್ನಲೆ ಪೂರ್ವಭಾವಿ ಸಭೆಯಾಗಿಲ್ಲ. ಶನಿವಾರ (ಇಂದು) ಬೆಳಗ್ಗೆ ಪಟ್ಟಣದಲ್ಲಿ ಸಭೆ ಕರೆಯಲಾಗಿದೆ ಎಂದು ಎಲ್ಲಾರಿಗೂ ಮಾಹಿತಿ ನೀಡಿದರು.
ಒಕ್ಕಲಿಗ ಜನಾಂಗದ ಮುಖಂಡರು ಮಾತನಾಡಿ ಶಾಸಕರಿಗೆ ಕೆಂಪೇಗೌಡ ವೃತ್ತ ಹಾಗೂ ಅದರ ಸಾಧಕ ಬಾಧಕಗಳನ್ನು ವಿವರವಾಗಿ ತಿಳಿಸಿದರು .
ಇದೇ ಸಮಯದಲ್ಲಿ ಪಟ್ಟಣ ಪಂಚಾಯತಿ ಮಾಜಿ ಉಪಾಧ್ಯಕ್ಷರುಗಳಾದ ಗೀರಿಶ್ ಕುಮಾರ್ ,ಹರೀಶ್ ಕುಮಾರ್ ,ಸದಸ್ಯರುಗಳಾದ ಆನಂದ ಕುಮಾರ್ , ಮುಖಂಡರುಗಳಾದ ನಾಗೇಂದ್ರ ,ನಟರಾಜು ,ಮಂಜೇಶ್ , ರಾಜೂಗೌಡ್ರು. ಶಶಿಕುಮಾರ್ ,ಸತೀಶ್, ಕಾರ್ ನಟರಾಜು ,ರವಿ , ನಿರ್ದೇಶಕ ಮಂಜೇಶ್ ,ಚೇತನ್ ,ಪ್ರಸನ್ನ ಮಾದೇಶ್ ,ಸೋಮಶೇಖರ್ ,ಬಂಗಾರಪ್ಪ ,ಅಭಿಲಾಷ್ ,ಪ್ರವೀಣ್ ಸೇರಿದಂತೆ ಅಧಿಕಾರಿಗಳಾದ. ನಂಜಮ್ಮಾಣಿ ,ಮಂಜುನಾಥ್ ಪ್ರಸಾದ್ , ನಾಗೇದ್ರ, ಶೇಷಣ್ಣ ,ಸೌಮ್ಯ, ಇನ್ನಿತರರು ಹಾಜರಿದ್ದರು.