Breaking News

ಕೃಷಿ ಚಟುವಟಿಕೆಗಳಲ್ಲಿ ಡ್ರೋಣ್ ತಾಂತ್ರಿಕತೆ ಬಳಕೆ ಅತ್ಯವಶ್ಯಕ – ಕೃಷಿ ವಿವಿ ಕುಲಪತಿ ಡಾ.ಎಸ್ ವಿ ಸುರೇಶ

ಬೆಂಗಳೂರು; ಭಾರತ ಈಗ ಆಹಾರೋತ್ಪಾನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು, ಇದಕ್ಕೆ ಕೃಷಿ ಚಟುವಟಿಕೆಗಳಲ್ಲಿ ತಾಂತ್ರಿಕತೆ ಬಳಕೆ ಮುಖ್ಯವಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಎಸ್ ವಿ ಸುರೇಶ ಹೇಳಿದ್ದಾರೆ.
ಚಿಕ್ಕಬಾಣಾವರದ ಧನ್ವಂತರಿ ಶಿಕ್ಷಣ ಸಮೂಹ ಸಂಸ್ಥೆ ಆವರಣದಲ್ಲಿ ಧನ್ವಂತರಿ ಡ್ರೋಣ್ ಪೈಲಟ್ ಅಕಾಡೆಮಿ ಉದ್ಘಾಟಿಸಿ ಮಾತನಾಡಿ, ಕೃಷಿ ವಲಯದಲ್ಲಿ ಕೃಷಿ ಕಾರ್ಮಿಕರ ಕೊರತೆ ಇದೆ. ಗ್ರಾಮೀಣ ಯುವಕರು ನಗರ, ಪಟ್ಟಣಗಳತ್ತ ಮುಖಮಾಡಿರುವುದೇ ಇದಕ್ಕೆ ಕಾರಣವಾಗಿದೆ. ಈಗ ಹಳ್ಳಿಗಳು ನಿವೃತ್ತರು , ಹಿರಿಯರಿಗೆ ಸೀಮಿತವಾಗುತ್ತಿವೆ. ಕೃಷಿ ಜಮೀನುಗಳು ಕೃಷಿಯೇತರ ಚಟುವಟಿಕೆಗಳಿಗೆ ಪರಿವರ್ತನೆಯಾಗುತ್ತಿರುವುದು ಆತಂಕದ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿ ಕ್ಷೇತ್ರದಲ್ಲಿ ಡ್ರೋಣ್ ಸಾಧನ ಬಳಕೆ ಅತ್ಯವಶ್ಯಕವಾಗಿದ್ದು, ಡ್ರೋಣ್ ನಂತಹ ತಾಂತ್ರಿಕತೆಯನ್ನು ಬಳಸುವಾಗ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ, ಯಾವ ಬೆಳೆಗೆ ಎಷ್ಟು ಎತ್ತರದಿಂದ ಔಷಧಿ ಸಿಂಪಡಿಸಬೇಕು, ಅಕ್ಕಪಕ್ಕದಲ್ಲಿನ ಜಮೀನುಗಳಲ್ಲಿ ಯಾವ ರೀತಿಯ ಬೆಳೆಗಳಿವೆ ಎಂಬುದನ್ನು ಸಹ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಕೃಷಿ ವಿಶ್ವವಿದ್ಯಾಲಯ ಉಪಕುಲಪತಿ ಸುರೇಶ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಮಿಳುನಾಡು ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಉಪಾಧ್ಯಕ್ಷ ಡಾ.ಮೈಲಾಸ್ವಾಮಿ ಅಣ್ಣಾದೊರೈ ಮಾತನಾಡಿ, ಡ್ರೋಣ್ ಎಂಬುದು ಸಾಧನ ಕೇವಲ ಗ್ಯಾಜೆಟ್ ಅಲ್ಲ. ಇದು ಕ್ರಾಂತಿಕಾರಕ ಸಾಧನ. ಈಗ ತಾಂತ್ರಿಕತೆಗೆ ಹೆಚ್ಚು ಆದ್ಯತೆ ಸಿಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲೂ ಬಹುತೇಕ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ರೋಬೆಟಿಕ್ ಸರ್ಜರಿ ಸೇರಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ ತಾಂತ್ರಿಕತೆಯನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ, ಕೃಷಿ ಕ್ಷೇತ್ರದಲ್ಲಿ ಡ್ರೋಣ್, ಅತ್ಯವಶ್ಯಕ ತಾಂತ್ರಿಕ ಸಾಧನವಾಗಿದೆ ಎಂದು ತಿಳಿಸಿದರು.
ಅಣ್ಣಾ ಮಲೈ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್ ವೇಲ್ ರಾಜ್ ಮಾತನಾಡಿ, ದೇಶದಲ್ಲಿ ಡ್ರೋನ್ ತಂತ್ರಜ್ಞಾನಕ್ಕೆ ಪ್ರತ್ಯೇಕ ನೀತಿ ರೂಪಿಸಿದ್ದು, ಈ ಕ್ಷೇತ್ರ ವ್ಯಾಪಕವಾಗಿ ಬೆಳವಣಿಗೆಯಾಗುತ್ತಿದೆ. ದೇಶದಲ್ಲಿ ಲಕ್ಷಾಂತರ ಡ್ರೋಣ್ ಪೈಲಟ್ ಗಳಿಗೆ ಬೇಡಿಕೆ ಇದೆ. ಕೌಶಲ್ಯಾಧಾರಿತ ಶಿಕ್ಷಣಕ್ಕೆ ಈಗ ಸಾಕಷ್ಟು ಅವಕಾಶಗಳಿಗೆ ಎಂದು ಹೇಳಿದರು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಮುಖ್ಯ ಸಂಶೋಧನಾ ವಿಜ್ಞಾನಿ ಡಾ.ಎಸ್ ಎನ್ ಓಂಕಾರ ಮಾತನಾಡಿ, ಸಮಾಜದಲ್ಲಿ ಕೆಲ ಅನಾರೋಗ್ಯಕರ ಡ್ರೋಣ್ ಪೈಲಟ್ ಗಳಿದ್ದಾರೆ, ಅಂತಹವರಿಂದ ಅನೇಕ ಅನಾಹುತಗಳು ಸಂಭವಿಸಿವೆ. ಆದ್ದರಿಂದ ಆರೋಗ್ಯಕರ ಡ್ರೋಣ್ ಪೈಲಟ್ ಗಳ ಅವಶ್ಯಕತೆ ಇದೆ. ಹಾಗಾಗಿ ತರಬೇತಿ ಪಡೆದ ಪೈಲಟ್ ಗಳು ಹೊರಹೊಮ್ಮಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಧನ್ವಂತರಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಆರಿಫ್ ಅಹ್ಮದ್, ಶೈಕ್ಷಣಿಕ ನಿರ್ದೇಶಕ ಪಿ ಬಿ ಗಣೇಶ್, ವಿಂಗ್ ಕಮಾಂಡರ್ ಕೆ.ಆರ್. ಶ್ರೀಕಾಂತ್, ಫ್ಲೈಟ್ ಲೆಪ್ಟಿನೆಂಟ್ ಎ.ಟಿ. ಕಿಶೋರ್, ಕೇಂದ್ರದ ವಿಮಾನಯಾನ ಮಹಾ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಸಂಜಯ್ ಕೆ ಬ್ರಹ್ಮಾನೆ ಮೊದಲಾದವರು ವೇದಿಕೆಯಲ್ಲಿದ್ದರು.

ಜಾಹೀರಾತು

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.