ವರದಿ : ಬಂಗಾರಪ್ಪ. ಸಿ .
ಹನೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷಕಳೆದಿದೆ ಆದರೆ ಬಡವರಿಗೆ ದೊರಕುವ ಸೌಲಭ್ಯಗಳನ್ನು ದುಪ್ಪಟ ಮಾಡಿದ್ದಾರೆ ಎಂದು ಮಂಡಲ ಅಧ್ಯಕ್ಷರಾದ ವೃಷೆಬೇಂದ್ರ ತಿಳಿಸಿದರು .
ಹನೂರು ಪಟ್ಟಣದ ತಹಸಿಲ್ದಾರ್ ಕಛೇರಿಯ ಮುಂಬಾಗದಲ್ಲಿ ರಾಜ್ಯ ಸರ್ಕಾರದ ವಿರುದ್ದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಹನೂರು ಮೂರ್ತಿಯವರು ನಮ್ಮ
ರಾಜ್ಯದ್ಯಕ್ಷರ ಹಾಗೂ ಜಿಲ್ಲಾದ್ಯಕ್ಷರ ಸೂಚನೆ ಮೆರೆಗೆ ಇಂದು ಪ್ರತಿಭಟನೆ ಮಾಡುತ್ತಿದ್ದೆವೆ ಇಂತಹ ಸರ್ಕಾರವನ್ನು ಈ ಕೂಡಲೆ ರಾಜ್ಯಪಾಲರು ವಜಾ ಮಾಡಿ ನೂತನ ಸರ್ಕಾರಕ್ಕೆ ಅನುವು ಮಾಡಿಕೊಡಲಿ, ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಬಡವರ ಉದ್ದಾರ ಮಾಡಲಿಲ್ಲ ಮೊದಲು ಗ್ಯಾರಂಟಿ ಯೋಜನೆಗಳಿಗೆ ಮೊದಲು ಯಾವುದೇ ಷರತ್ತುಗಳಲ್ಲದೆ ಅನುಷ್ಠಾನ ಮಾಡುತ್ತೆವೆ ಎಂದು ಭರವಸೆ ನೀಡಿ ನಂತರ ಗ್ಯಾರಂಟಿ ಯೋಜನೆಯ ಜಾರಿಯ ಸಮಯದಲ್ಲಿ ಆದಾಂತಹ ಅವಘಡಗಳಿಗೆ ಯಾರು ಹೊಣೆಯಾಗಿದ್ದಾರೆ ಎಂಬುದು ನೀಗೂಡವಾಗಿದೆ
ಜನಪ್ರಿಯ ಯೋಜನೆಯ ಎಂದು ಹೇಳುತ್ತ ಸುಲಿಗೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿ
ಅಭಿವೃದ್ಧಿ ಕಾರ್ಯದಲ್ಲಿ ಕುಂಠಿತವಾಗಿದೆ ಎಂದು ತಿಳಿಸಿದರು.
ಇವರ ಯೋಜನೆಯು ಜನ ವಿರೋದಿಯಾಗಿದೆ
ಹನೂರು ಬಂಡಳ್ಳಿ ರಸ್ತೆಯು ಹಾಳಗಿದೆ , ಅಭಿವೃದ್ಧಿ ಕಡೆ ಗಮನ ಹರಿಸಿಲ್ಲ ಘೋಷಣೆ ಮಾಡಿದ ಅಕ್ಕಿಬಾಗ್ಯ ವಿತರಣೆ ಮಾಡಿಲ್ಲ. ಪೆಟ್ರೊಲಿಯಂ ಡೀಸೆಲ್ ದರ ಹೆಚ್ಚಿಸಲಾಗಿದೆ ಕಳೆದ ಚುನಾವಣಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಶಾಸಕರು ಆಯ್ಕೆಯಾಗಿ ಸರ್ಕಾರ ರಚಿಸಿದರು ಬ್ರಷ್ಟಚಾರದಲ್ಲಿ ಮುಳುಗಿದೆ ಎಂದು ಶ್ಯಾಗ್ಯ ಕೆಂಪಣ್ಣ ತಿಳಿಸಿದರು .
ಇದೇ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಚಂಗವಾಡಿ ರಾಜು,,ಶ್ಯಾಗ್ಯ ಕೆಂಪಣ್ಣ , ಒಬಿಸಿ ಅಧ್ಯಕ್ಷರಾದ ಮಾದೇಶ್ ಮ ಬೆಟ್ಟ, ಮಾತೃಭೂಮಿ ಮೂರ್ತಿ ,ಜನಧ್ವನಿ ಲೋಕೇಶ್ ಜತ್ತಿ ,ರಾಮು ,ಸೇರಿದಂತೆ ಇನ್ನಿತರರು ಹಾಜರಿದ್ದರು .