Breaking News

ಶಂಕರಪ್ಪಬಳ್ಳೇಕಟ್ಟೆ ರವರಿಗೆ ರಾಷ್ಟ್ರೀಯ ಕನ್ನಡ ಸಾಹಿತ್ಯ ಪುರಸ್ಕಾರ

National Kannada Literary Award to Shankarappaballekatte

ತಿಪಟೂರು: “ಕರ್ನಾಟಕ ಕನ್ನಡ ಸಾಹಿತ್ಯ ಲೋಕ” ನೆಲಮಂಗಲ ಪವಾಡ ಬಸವಣ್ಣ ದೇವರ ಮಠದಲ್ಲಿ ಪ್ರಜಾ ಕವಿ ನಾಗರಾಜು ಅವರ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಕನ್ನಡ ಸಾಹಿತ್ಯ ಸಂಭ್ರಮ ಕವಿ ಗೋಷ್ಠಿಯನ್ನು ಶ್ರೀಮಠದ ಪೀಠಾದ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಉದ್ಘಾಟಿಸಿ ,ಕೃತಿಗಳ ಬಿಡುಗಡೆ ಮಾಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಕಲ್ಪತರು ನಾಡಿನ ‘ರೈತಕವಿ’ ಡಾ.ಪಿ ಶಂಕರಪ್ಪ ಬಳ್ಳೇಕಟ್ಟೆ ರವರನ್ನು ಅವರ ಸಾಹಿತ್ಯ ಕೃಷಿ ಹಾಗೂ ಸಮಾಜಸೇವೆಗಾಗಿ ಹಲವು ಸಾಧಕರೊಂದಿಗೆ “ರಾಷ್ಟ್ರೀಯ ಕನ್ನಡ ಕವಿಗೋಷ್ಠಿ ಪುರಸ್ಕಾರ” ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಕಾರ್ಯಕ್ರಮ ಆಯೋಜಕರಾದ ಪ್ರಜಾಕವಿ ನಾಗರಾಜ್ ಅದ್ಯಕ್ಷತೆ ವಹಿಸಿದ್ದರು ,ಮುಖ್ಯ ಅತಿಥಿಗಳಾಗಿ ವೇದಬ್ರಹ್ಮ ಗುರು ಜಿ. ವಿ .ಕೆ ಎಸ್ ಮೂರ್ತಿ, ಕಲ್ಬುರ್ಗಿ ಕರ್ನಾಟಕ ಕೇಂದ್ರ ವಿಶ್ವವಿದ್ಯಾನಿಲಯದ ವಿಜಯ್ ಕುಮಾರ್ , ಕಿಸಾನ್ ಪ್ರದೀಪ್ ಕುಮಾರ್ ,ಸಿದ್ದಗಂಗಾ ಕಾಲೇಜು ಪ್ರಾಧ್ಯಾಪಕ ಡಾ. ಜಿ ಗಂಗರಾಜು, ಕಾದಂಬರಿಕಾರ ಡಾ.ಎನ್ ಮುರುಳಿಧರ್, ಕಾಳೆನಳ್ಳಿ ಲಿಂಗರಾಜ್ ಮೇಷ್ಟ್ರು, ಕಾನೂನು ತಜ್ಞ ದೊಡ್ಡೇರಿ ಬೈಲಪ್ಪ, ಸಿನಿಮಾ ನಟ ನಿರ್ದೇಶಕ ರಾದ ದೀಪಿಕಾ, ದೇವನಹಳ್ಳಿ ದೇವರಾಜ್ , ಕನ್ನಡಕವಿ ತ್ಯಾಗರಾಜ್ ಮೈಸೂರು,ಯುವ ಸಂಘಟಕಿ ಪ್ರತಿಮಾ ಹಾಸನ್, ಕುಂಚ ಕಲಾವಿದ ಶಿವಪ್ರಸಾದ್ ಆರಾದ್ಯ ಪ್ರಖ್ಯಾತ ಸಾಹಿತಿಗಳಾದ ,ಪೋಲಿಸ್ ಬಸವರಾಜ್, ಶ್ರೀಧರ್ , ವಿ.ಕೆ ಗೀತಾ. ಹಾವೇರಿ ಮಾರುತಿ,ಬ್ಯಾಡನ್ನೂರು ವೀರಭದ್ರಪ್ಪ ಶಿವಶರಣ ಹಾಗು 9 ವೇದಿಕೆಗಳ ಅಧ್ಯಕ್ಷರು, ಅಂತರ್ ರಾಜ್ಯ ಕವಿ ಕಲಾವಿದರು ,ಮಹಿಳಾ ಸಂಘಟಕರಿಂದ,ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

About Mallikarjun

Check Also

ಆಶಾಕಾರ್ಯಕರ್ತೆಯರ  ಪ್ರಥಮ  ಸಮ್ಮೇಳನ:

 ಗಂಗಾವತಿ: ನಗರದಲ್ಲಿ  ನಗರ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ  ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಘದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.