Breaking News

ಅನಿಲ ಬಡಚಿರವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

ಅಥಣಿ:-*ವಿಪತ್ತುಗಳಂತ ತುರ್ತು ಸಂದರ್ಭದಲ್ಲಿ ಅತ್ಯುತ್ತಮ ಸೇವೆಗಾಗಿ ಅಥಣಿ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕ ಅನಿಲ ಬಡಚಿರವರಿಗೆ ಮುಖ್ಯ ಮಂತ್ರಿ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ. ಅಗ್ನಿ ಅವಗಡ ಮತ್ತು ವಿಪತ್ತುಗಳಂತ ತುರ್ತು ಸೇವೆಗಳ ಸಂದರ್ಭದಲ್ಲಿ ನಾಗರಿಕರ ಜೀವ ರಕ್ಷಣೆ ಹಾಗೂ ಆಸ್ತಿ ಸಂರಕ್ಷಣಾ ಕಾರ್ಯದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಅತ್ಯುತ್ತಮ ಸೇವೆ ಸಲ್ಲಿಸಿದ ಅಗ್ನಿಶಾಮಕ ಮತ್ತು ಅಧಿಕಾರಿ ಹಾಗೂ ಸಿಬ್ಬಂದಿ ಗಳಿಗೆ ಮುಖ್ಯ ಮಂತ್ರಿ ಚಿನ್ನದ ಪದಕ ನೀಡಿ ಗೌರವಿಸಲಾಗಿರುತ್ತದೆ. ಮಂಗಳವಾರ ಬೆಂಗಳೂರಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಿಲ ಬಡಚಿ ಅವರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಚಿನ್ನದ ಪದಕ ನೀಡಿ ಸನ್ಮಾನಿಸಿದರು.

About Mallikarjun

Check Also

ಅಧಿಕಾರಿಗಳು ಭೂಗಳ್ಳರಿಗೆ ಸಾತ್ ತಡೆಯುವಂತೆ ಒತ್ತಾಯಿಸಿ ಮನವಿ

ಗಂಗಾವತಿ: ನಗರದ ಸರ್ವೇ ನಂಬರ್ ೫೩ರಲ್ಲಿ (ಸಾಯಿನಗರದಲ್ಲಿ) ಎಸ್ಸಿ ಎಸ್ಟಿಗೆ ವಸತಿ ನಿಲಯಕ್ಕೆ ಮೀಸಲಿಟ್ಟದ್ದ ಹತ್ತು ಗುಂಟೆ ಜಮೀನನ್ನು ಕೊಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.