ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಸಮುದಾಯಕ್ಕೆ ಆರೋಗ್ಯ, ಶಿಕ್ಷಣ ಸೇವೆಯನ್ನು ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಯಾಗಿದೆ ಎಂದು ಗಂಗಾವತಿ ರೋಟರಿ ಅಧ್ಯಕ್ಷರಾದ ಎ.ಶಿವಕುಮಾರ ರವರು ಉಚಿತ ಹೃದಯ ರೋಗ, ಕ್ಯಾನ್ಸರ್ ರೋಗ, ನರರೋಗ, ಮತ್ತು ಮೂತ್ರಪಿಂಡದಲ್ಲಿ ಕಲ್ಲು ತಪಾಸಣೆ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು
ರೋಟರಿ ಸಂಸ್ಥೆ ಉಚಿತವಾಗಿ ಗಂಗಾವತಿ ಮತ್ತು ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಆರೋಗ್ಯದ ಸೇವೆ ಒದಗಿಸಿದೆ ಎಂದು ತಿಳಿಸಿದರು
ಬೆಂಗಳೂರು ಸಪ್ತಗಿರಿ ಆಸ್ಪತ್ರೆಯ ವೈದ್ಯರಾದ ಡಾ. ಶಶಾಂಕ್ ರವರು ನಮ್ಮ ಆಸ್ಪತ್ರೆ ಹಾಗೂ ಗಂಗಾವತಿ ರೋಟರಿ ಸಂಸ್ಥೆ ಆಶ್ರಯದಲ್ಲಿ ಇಂದು ನಡೆದ ಆರೋಗ್ಯ ಶಿಬಿರದಲ್ಲಿ ಸಾರ್ವಜನಿಕರು ಮುಂಚಿತವಾಗಿ ಆರೋಗ್ಯದ ತೊಂದರೆಯ ಲಕ್ಷಣಗಳನ್ನು ಕಂಡುಕೊಂಡರೆ ಆ ಸಮಸ್ಯೆಗೆ ಪರಿಹಾರ ರೂಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು
ಈ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಅಧಿಕ ಜನರು ಹೃದಯ ರೋಗ, ನರರೋಗ, ಕ್ಯಾನ್ಸರ್, ಮತ್ತು ಮೂತ್ರಪಿಂಡದ ಕಾಯಿಲೆಗಳ ಉಚಿತ ತಪಾಸಣೆ ಮತ್ತು ಈ ಸಿ ಜಿ, ಎಕೋ ಪರೀಕ್ಷೆ ನಡೆಸಿ ಉಚಿತ ಔಷಧಿ ವಿತರಿಸಲಾಯಿತು
ವೇದಿಕೆಯಲ್ಲಿ ರೋಟರಿ ಹಿರಿಯ ಸದಸ್ಯರಾದ ಅಜಿತ್ ರಾಜ
ಸುರಾನಾ, ಮಹೇಶ್ ಸಾಗರ್,ಡಾ.ಶಶಾಂಕ, ವಿಶ್ವನಾಥ ರೆಡ್ಡಿ, ಅಧ್ಯಕ್ಷರಾದ ಶಿವಕುಮಾರ,ಕಾರ್ಯದರ್ಶಿ ದಿಲೀಪ್ ಕುಮಾರ್ ಉಪಸ್ಥಿತರಿದ್ದರು
ರೋಟರಿ ಮಾಜಿ ಅಧ್ಯಕ್ಷರಾದ ವಾಸು ಕೊಳಗದವರು ಸ್ವಾಗತಿಸಿದರು.ಟಿ.ಆಂಜನೇಯ ರೋಟರಿ ಸೇವೆ ಕುರಿತು ಮಾತನಾಡಿದರು
ಈ ಶಿಬಿರದಲ್ಲಿ ರೋಟರಿ ಸದಸ್ಯರಾದ ಪ್ರಕಾಶ್ ಚೋಪ್ರ ,ಉಗಮ ರಾಜ,ಸುರೇಶ್ , ದೊಡ್ಡಯ್ಯ, ಡಾಕ್ಟರ್ ವೀರನಗೌಡ ,ಡಾ. ಮಗಧಾಳ್, ಎಚ್ ಎಮ್ ಮಂಜುನಾಥ್ ,ಸದಾನಂದ ಶೇಟ್, ಬಸವರಾಜ
ಮತ್ತು ಇನ್ನಿತರ ಸದಸ್ಯರು ಉಪಸ್ಥಿತರಿದ್ದರು
ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಪ್ತಗಿರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಅಲ್ಲದೆ ಬಿ ಬಿ ಸಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಕೊನೆಯಲ್ಲಿ ಕಾರ್ಯದರ್ಶಿ ದಿಲೀಪ್ ಕುಮಾರ್ ವಂದಿಸಿದರು
ರೋಟರಿ ಕ್ಲಬ್ ಆಶ್ರಯದಲ್ಲಿ ಉಚಿತ ಹೃದಯರೋಗ,ನರರೋಗ,ಕ್ಯಾನ್ಸರ್ ,ಎಲುಬು, ಕೀಲು ಮೂತ್ರಪಿಂಡದಲ್ಲಿ ಕಲ್ಲು ತಪಾಸಣಾ ಶಿಬಿರ
ಜಾಹೀರಾತು