ಎ ಎಸ್ ಐ ಕೆ ಕರಿವೀರಪ್ಪ ನಿವೃತ್ತಿ ಹಿನ್ನೆಲೆಯಲ್ಲಿ ಬಿಳ್ಕೊಡುಗೆ ಹಾಗೂ ಸನ್ಮಾನ ಕರಿವೀರಪ್ಪ ಅವರ ಆರೋಗ್ಯ ಇತರೆ ಸಿಬ್ಬಂದಿಗಳಿಗೆ ಮಾದರಿ ಡಿ ವೈ ಎಸ್ ಪಿ ಮುರಳಿಧರ್…

ಹೊಸಪೇಟೆ.. ಕಾನೂನು ರಕ್ಷಕರಾಗಿ ಸಮಾಜದಲ್ಲಿ ಶಾಂತಿ ಸು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ಸೇವೆ ಸಲ್ಲಿಸುವ ಪೊಲೀಸ್ ಇಲಾಖೆಯಲ್ಲಿ ಇಂದು ಸೇವಾ ನಿವೃತ್ತಿ ಹೊಂದುತ್ತಿರುವ ಹೊಸಪೇಟೆ ಟೌನ್ ಪೊಲೀಸ್ ಸ್ಟೇಷನ್ ಏ ಎಸ್ ಐ ಕರಿವೀರಪ್ಪ ಅವರ ಆರೋಗ್ಯ ಇಂದಿಗೂ ಅತ್ಯಂತ ಸದೃಢವಾಗಿದ್ದು ಅವರ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಅತ್ಯಂತ ಪೂರಕವಾಗಿದೆ ಎಂದು ವಿಜಯನಗರ ಹೊಸಪೇಟೆಯ ಡಿ ವೈ ಎಸ್ ಪಿ ಮುರಳಿಧರ ಹೇಳಿದರು. ಅವರು ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ನಿವೃತ್ತಿ ಪ್ರಯುಕ್ತ ಬಿಳ್ಕೊಡಿಗೆ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸತತ 33 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ನಿಂದ ಹಿಡಿದು ಇಂದು ಹೊಸಪೇಟೆಯಲ್ಲಿ ಏ ಎಸ್ ಐ ಆಗಿ ನಿವೃತ್ತಿಗೊಳುತ್ತಿರುವುದು ಅತ್ಯಂತ ಸಂತಸದಾಯಕ ಎಂದು ತಿಳಿಸಿದರು. ನಗರದ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಫೈಯ್ ಜುಲ್ಲಾ ಮಾತನಾಡಿ ಸರಳ ಸಜ್ಜನಿಕೆಯ ಎಲ್ಲಾ ಸಿಬ್ಬಂದಿಗಳಿಗೆ ಅಣ್ಣ ಎಂಬ ಮಾತಿನಿಂದ ಪ್ರೀತಿ ವಿಶ್ವಾಸದಿಂದ ಕಾಣುತ್ತಾ ಬಂದಿರುವ ಕೆ ಕರವೀರಪ್ಪ ಅವರು ಅತ್ಯುತ್ತಮ ಕಬ್ಬಡಿ ಆಟಗಾರರಾಗಿ ಹಲವು ಪ್ರಶಸ್ತಿಗಳನ್ನು ಪೊಲೀಸ್ ಇಲಾಖೆಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ನಿವೃತ್ತಿಯಾಗುತ್ತಿದ್ದರು ಅವರು ಅತ್ಯುತ್ತವಾದ ಆರೋಗ್ಯದಿಂದಾಗಿ ನವ ಯುವಕರಂತೆ ಕಂಗೊಳಿಸುತ್ತಿದ್ದಾರೆ ಎಂದು ಅವರ ಕಾರ್ಯಕ್ಷಮತೆ ದಕ್ಷತೆ ಕುರಿತು ಮಾತನಾಡಿದರು. ಗಂಗಾವತಿ ರಾಮುಲು ಕಾಲೇಜಿನ ಹಳೆ ವಿದ್ಯಾರ್ಥಿಗಳ ಪರ ವಾಗಿ ನಬಿ ಸಾಬ್ ಲಾಟಿ ಮಾತನಾಡಿ ಸಂಕಷ್ಟದಲ್ಲಿದ್ದ ಆತ್ಮೀಯ ಮಿತ್ರರಿಗೆ ವಿದ್ಯಾರ್ಥಿ ದೆಸೆಯಲ್ಲಿ ನಿಸ್ಸಾರ್ಥವಾಗಿ ಸೇವಾ ಮನೋಭಾವನೆ ಮಾಡಿದ್ದನ್ನು ಸ್ಮರಿಸಿ ಭಾವುಕರಾದರು.. ಈ ಸಂದರ್ಭದಲ್ಲಿ ನಿವೃತ್ತ ನೌಕರರಾದ ಕುಮಾರಸ್ವಾಮಿ ಶರಣಪ್ಪ ಮೇಟಿ ಅಂಜನಪ್ಪ ಪಿಎಸ್ಐ ಪರಮೇಶ್ವರಪ್ಪ ಸೇರಿದಂತೆ ಟಿಬಿ ಡ್ಯಾಮ್ , ಬಳ್ಳಾರಿ ಕಂಪ್ಲಿ ಹಾಗೂ ಗಂಗಾವತಿಯ ಗೆಳೆಯರು ಇಲಾಖೆಯ ಸಿಬ್ಬಂದಿ ವರ್ಗದವರು ಭಾಗವಹಿಸಿ ಸನ್ಮಾನಿಸಿದರು…
