
Why do we needed rain?
ಕವನ,:

ನಮಗ ಮಳೆ ಯಾಕ ಬೇಕು

ಫಲವತ್ತಾದ ಭೂಮಿ ರಿಯಲ್ ಎಸ್ಟೇಟ್ ಮಾಡಿವಿ
ಹೊಲ ಗದ್ದೆ ಮುಚ್ಚಿ ಬಂಗಲೆ ,ಬಾರ್ ಕಟ್ಟಿವಿ
ಕೆರೆ,ಬಾವಿ ಮುಚ್ಚಿ ಮೆಟ್ರೋಮಾಲ್ ಕಟ್ಟಿವಿ
ಇನ್ವೆಸ್ಟ್ ಕರ್ನಾಟಕ ಹೆಸರಲ್ಲಿ ಬಂಡವಾಳ ಶಾಹಿಗಳಿಗೆ ಸಾವಿರಾರು ಎಕರೆ ಭೂಮಿ ಕೊಟ್ಟಿವಿ ಹಿಂಗಿದ್ದಾಗ
ನಮಗ ಮಳೆ ಯಾಕೆ ಬೇಕು?
ವಿಂಡ್ ಪ್ಯಾನ್ , ಸೋಲಾರ್,
ರಿಯಲ್ ಎಸ್ಟೇಟ್ , ರೇಸಾಲ್ಟ್ ಫ್ಯಾಕ್ಟರಿಗಳ ಹೆಸರಲಿ ಹೊಲ ಬರಡು ಮಾಡಿವಿ
ಅಭಿವೃದ್ಧಿ ಹೆಸರಲ್ಲಿ ಸಿಕ್ಕ ಸಿಕ್ಕಂಗ ಗಿಡ ಮರಗಳ ಕಡದಿವಿ
ಹಿಂಗಿದ್ದಾಗ ನಮಗ ಮಳೆ ಯಾಕೆ ಬೇಕು?
ಹಳ್ಳಿ ಯಾರಿಗೆ ಬೇಕಾಗೈತಿ?
ಊರು ಗೌಡನಿಗೆ ನಗರದಲ್ಲಿ ಸೆಕ್ಯೂರಿಟಿ ಗಾರ್ಡ ನೌಕರಿ ಸಿಕ್ಕೈತಿ
ನಾಯಕರು ನೀರಾವರಿ ಇಲಾಖೆ ಬೇಡ , ನಗರಾಭಿವೃದ್ಧಿ ಇಲಾಖೆ ಬೇಕು ಅಂತಾರ ಹಿಂಗಿದ್ದಾಗ ನಮಗ ಮಳೆ ಯಾಕ ಬೇಕು?
ದನ ಕರು , ಹೈನದ ಚಿಂತಿಯಾಕ,
ಹಾಲು ಮೊಸರು ತುಪ್ಪ ಪ್ಯಾಕೇಜ್ ನಲ್ಲಿ ಸಿಗತೈತೆ
ಹಬ್ಬದಾಗ ಸೆಗಣಿ ಬೇಕೆಂದರೆ online ನಲ್ಲಿ ಸಿಗತೈತೆ
ಒಕ್ಕಲುತನ ಎಲ್ಲರಿಗೂ ಬ್ಯಾಡ ಆಗೈತೆ ಹಿಂಗಿದ್ದಾಗ ನಮಗ ಮಳೆ ಯಾಕೆ ಬೇಕು?
ಯೋಚಿಸುವುದಕ್ಕೆ AI ,ChatGPT ಐತೆ
ಕೆಲಸ ಮಾಡಾಕ Robots ಅದಾವು
ಬದುಕಲು ಸರಕಾರ ಉಚಿತ ಭಾಗ್ಯಗಳ ಕೊಟ್ಟೈತೆ,
ಮಹಿಳೆಯರು ತಿರಿಗ್ಯಾಡಲು ಬಸ್ ಫ್ರೀ ಬಿಟ್ಟೈತೆ
ಅಡಿಗೆ ಮಾಡೋದೆ ಬೇಕಿಲ್ಲ , Zomato ,Swiggy ಹೊಟ್ಟೆ ತುಂಬಿಸಿ ಬಿಡತಾವು
ಹಿಂಗಿದ್ದಾಗ ನಮಗ ಮಳೆ ಯಾಕ ಬೇಕು?
ರೊಕ್ಕ ಬೇಕೆಂದರೆ ಪೊನ್ ಪೇ , ಗೂಗಲ್ ಪೇ ಐತೆ
ಟೈಮ್ ಪಾಸ್ ಮಾಡಾಕ WhatsApp ,FB , Instagram ಐತೆ ,reels ಮಾಡಿ ಬಿಡಾಕ social media ಐತೆ
ಕುಡಿಯಾಕ ನೀರು ಬೇಕೆಂದರೆ
ಖಗ್ರಾಸ ಹಳ್ಯಾಗು ಬಾಟಲ್ ನೀರು ಸಿಗತೈತೆ
ನೀರ ಸಿಗದಿದ್ದರೂ ಬೀರಂತು ಸಿಕ್ಕ ಸಿಗತೈತೆ
ಸರಕಾರ ಮುಜರಾಯಿ , ಸರಾಯಿ ಹಣ ಮೇಲೆ ನೆಡಿತೈತೆ ಅಂದರೆ ನಮಗ ಮಳೆ ಯಾಕ ಬೇಕು?
ಜನರು ಜಗಳಾಡಾಕ ಜಾತಿ ಧರ್ಮ ಅದಾವು
ಹಸಿರು , ಕೆಸರಿನಲ್ಲಿ ನಾಯಕರಿಗೆ ಅಧಿಕಾರ ಸಿಗತೈತೆ
ಬರಗಾಲ ಬಂದರೂ ಅನುದಾನ ಸಿಗತೈತೆ ಹಿಂಗಿದ್ದಾಗ ನಮಗ ಮಳೆ ಯಾಕ ಬೇಕು?

ಡಾ.ಶಿವಕುಮಾರ್ ಮಾಲಿಪಾಟೀಲ ದಂತ ವೈದ್ಯರು , ಪರಿಸರ ಪ್ರೇಮಿಗಳು
ಗಂಗಾವತಿ, 9448302775
