
Former MLA R Narendra will give good news to the farmers of Hanur constituency after the budget.
ಹನೂರು ಕ್ಷೇತ್ರದ ರೈತಾಪಿ ವರ್ಗಕ್ಕೆ ಬಜೆಟ್ ನಂತರ ಸಿಹಿ ಸುದ್ದಿಯನ್ನು ಸರ್ಕಾರ ನೀಡುತ್ತದೆ ಮಾಜಿ ಶಾಸಕ ಆರ್ ನರೇಂದ್ರ

ವರದಿ: ಬಂಗಾರಪ್ಪ .ಸಿ.
ಹನೂರು :ಕ್ಷೇತ್ರದ ರೈತಾಪಿ ವರ್ಗ ಸೇರಿದಂತೆ ಸಾರ್ವಜನಿಕರಿಗೆ ಸರ್ಕಾರವು ಮಂಡಿಸಲಿರುವ ಬಜೆಟ್ ನಲ್ಲಿ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ ಎಂದು ಮಾಜಿ ಶಾಸಕರಾದ ಆರ್ ನರೇಂದ್ರ ತಿಳಿಸಿದರು.
ಹನೂರು ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಮಾತನಾಡಿದ ಅವರು ನಮ್ಮ ಕ್ಷೇತ್ರದ ಪ್ರಮುಖ ಸಮಸ್ಯೆಗಳಾದ ಮೂರು ವಿಷಯಗಳನ್ನು ಮಾದ್ಯಮದ ಮೂಲಕ ಜನತೆಗೆ ತಿಳಿಸಲು ಇಚ್ವಿಸುವೆ ಎನ್ನುತ್ತ ಮೊದಲನೆಯದಾಗಿ ನಮ್ಮ ಕ್ಷೇತ್ರದಲ್ಲಿ ಇತ್ತಿಚಿನ ದಿನಗಳಲ್ಲಿ
ಕುಡಿಯುವ ನೀರಿನ ಬರ ಹೆಚ್ಚಾಗಿದೆ ಅದನ್ನು ಮನಗಂಡು ನಮ್ಮ ಸರ್ಕಾರದ ಉಸ್ತುವಾರಿ ಸಚಿವರಾದಿಯಾಗಿ ,ನಮ್ಮ ಸಂಸದರು ಸಹ ಹನೂರು ಕ್ಷೇತ್ರದ ಅಭಿವೃದ್ಧಿಗೆ ಸಂಬಂದಿಸಿದ ಕೆಲಸ ಮಾಡುತ್ತಿದ್ದಾರೆ ,ಹಾಗೇಯೆ ನಮ್ಮ ಭಾಗದಲ್ಲಿ ಹೆಚ್ಚು
ಕೇರೆಗಳಿದ್ದು ಅವುಗಳ ತುಂಬಿಸುವ ಕೆಲಸವನ್ನು ನಾನು ಹಿಂದೆಯೆ ಮಾಡಿದ್ದೆ ಮುಂದೆಯು ಮಾಡುತ್ತೆನೆ ಎಂದರು , ಇನ್ನೂಳಿದಂತೆ ಕಾಡಂಚಿನ ಪ್ರದೇಶದಲ್ಲಿರುವ ರೈತರ ಜಮೀನುಗಳಿಗೆ
ಕಾಡು ಪ್ರಾಣಿಗಳ ಹಾವಳಿಯ ಕಾಟ ಹೆಚ್ಚಿನ ಪ್ರಮಾಣದಲ್ಲಿದ್ದು ಅದನ್ನು ತಡೆಗಟ್ಟುವ ಕಾರ್ಯಮಾಡಲಾಗುತ್ತದೆ,ಈಗಾಗಲೆ ಹನೂರು
ಕ್ಷೇತ್ರದ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ತಲೆ ದೂರಿದ್ದು ಅದನ್ನು ಸರಿಪಡಿಸುವ ಕಾರ್ಯವು ಜನಪ್ರತಿನಿಧಿಗಳ ಕರ್ತವ್ಯವಾಗಿದೆ, ಅದೇ ರೀತಿಯಲ್ಲಿ
ಅಧಿಕಾರಿಗಳು ಸಹ ನೀರಿನ ಸಮಸ್ಯೆ ನಿಬಾಯಿಸಬೇಕು .ಕಾಡಂಚಿನ ಜಮಿನುಗಳಿಗೆ ಕಾಡು
ಪ್ರಾಣಿಗಳ ಹಾವಳಿ ಹೆಚ್ಚಾಗಿದೆ ,ನಮ್ಮದೆ ಕ್ಷೇತ್ರದ ಚೆಂಗಡಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಹುಲಿಗಳ ಒಡಾಟವು ಹೆಚ್ಚಾಗಿದ್ದು
ಆನೆಗಳಿಂದ ಬೆಳೆ ನಾಶವಾಗಿದೆ ,ಯಾವುದೇ ಸರ್ಕಾರವು ಬರಲಿ ರೈತರಿಗೆ ಬರ ಪರಿಹಾರ ಕೊಡುವಾಗ ಬೀಜ ಬಿತ್ತನೆ ಮಾಡಿದ ಖರ್ಚನ್ನು ಸಹ ಕೊಡಲು ಸಾದ್ಯವಾಗುತ್ತಿಲ್ಲ, ಮುಂದಿನ ದಿನಗಳಲ್ಲಿ ಪರಿಹಾರವನ್ನು ಹೆಚ್ಚು ಮಾಡಲು
ಸರ್ಕಾರವನ್ನು ಕೇಳುತ್ತೆನೆ ,ನಾನು ಒತ್ತಾಯಿಸುವುದೆನಂದರೆ ಬೆಳೆ ನಾಶಕ್ಕೆ ಕೊಡುವ ಪದಾರ್ಥಗಳ ಕನಿಷ್ಠ ಬೆಲೆಯಿಲ್ಲ .
ಒಂದು ಏಕ್ಟೇರ್ ಕೊಡುವ ಪರಿಹಾರ ಹೆಚ್ಚಿಸುವಂತ ಕಾರ್ಯವಾಗಬೇಕು ,
ನನ್ನ ಒಂಬತ್ತು ವರ್ಷದ ಹೋರಾಟದ ಫಲವಾಗಿ ,ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವು ಇಂದು ನನಸಾಗಿದೆ , ಈಗಾಗಲೇ
ರೈತ ಸಂಘದ ಮಿತ್ರರುಗಳು ಹಾಗೂ ನಮ್ಮಗಳ ಹೊರಾಟದ ಫಲವಾಗಿ ಇಂದು ನಾನುರು ತೊಂಬತ್ತು ಕೋಟಿ ರೂಗಳಷ್ಟು ಬಜೇಟ್ ಮಂಡಿಸುವ ಕೆಲಸಕ್ಕೆ ಸಮಯ ಕೂಡಿ ಬಂದಿದೆ , ಮುಂದಿನ ದಿನಗಳಲ್ಲಿ ಕ್ಷೇತ್ರವು ಅಭಿವೃದ್ಧಿಯಾಗಲಿದೆ ,
ಗುಂಡಾಲ್ ಡ್ಯಾಂ ನಿಂದ ಹುಬ್ಬೆಹುಣಸೆ ನೀರು ಹರಿಸುವುದು ಬೇಡ ಕಾರಣ ಅದರಲ್ಲಿ ನೀರಿನ ಕೊರತೆ ಕಾಣುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ , ಬಲದಂಡೆ ಮತ್ತು ಎಡದಂಡೆಯಾಗಿ ಎರಡುಗಡೆ ವಿಭಾಗಿಸಿ , ನೀರನ್ನು ಬಂಡಳ್ಳಿ ಭಾಗಕ್ಕೆ ಸೇರಿದಂತೆ, ಕ್ಷೇತ್ರ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿ ಅಭಿವೃದ್ಧಿಗೆ ಸಹಕಾರ ನೀಡಲಾಗಿದೆ,
ಹುಬ್ಬೆ ಹುಣಸೆ ಕೆರೆಗೆ ಎರಡು ಇಂಚು ನೀರಿನ ಸರಬರಾಜು ಮಾಡಲು ಅಂದೆ ನನ್ನ ಅವಧಿಯಲ್ಲಿ ಶಂಕುಸ್ಥಾಪನೆ ಮಾಡಲಾಯಿತು, ನಮ್ಮ ಭಾಗದ
ಇಂಜಿನಿಯರ್ ಗಳಾದ ಮಹೇಶ್ ಹೆಚ್ಚು ಮತುವರ್ಜಿವಹಿಸಿ ನಮ್ಮ ಭಾಗದ ಜನರಿಗೆ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಿದ್ದಾರೆ, ಅಜ್ಜಿಪುರದಂತಹ ಗುಡ್ಡಗಾಡು ಪ್ರದೇಶದಲ್ಲಿ ನೀರಿನ ಪಂಪು ಮಾಡಿದರೆ ಅದರ ಮುಂದಿನ ಭಾಗ ನೀರು ಸರಾಗವಾಗಿ ಹರಿದು ಹೋಗಲು ಮಾಡಲಾಗುವುದು. ಈ ಯೋಜನೆಯನ್ನು ಮೊದಲಿಗೆ ಸಚಿವ ಸಂಪುಟದಲ್ಲಿ ಮಂಡಿಸಿದರೆ ಅನುಕೂಲವಾಗುವುದು.ದಂಟಳ್ಳಿ ಹಾಗೂ ಆಲೇರಿ ಕೆರೆಗಳಿಗೆ ಹೆಚ್ಚುವರಿಯಾಗಿ ನಾವು ಮಾಡಿದ ಕಾಮಗಾರಿಗಳ ಮುಂದುವರಿದೆ ಬಾಗವಾಗಿ ಕೆಲಸ ಮಾಡಿದ್ದಾರೆ , ಹಿಂದಿನ ಅವದಿಯಲ್ಲಿ ನಡೆದ ಅಭಿವೃದ್ಧಿಗೆ ನಮ್ಮ ಕೊಡುಗೆ ಅಪಾರವಾಗಿದೆ ,
ರೈತಸಂಘಗಳು ಹೋರಾಟ ಮಾಡುತ್ತಿರುವ ವಿಷಯವಾಗಿ ಈ ಬಜೆಟ್ ನಲ್ಲಿ ಮಂಡಿಸಿದರೆ , ನಮ್ಮ ರೈತರ
ಎಲ್ಲಾ ಹೋರಾಟಗಳನ್ನು ಅವರ ಜೋತೆಯಲ್ಲಿ ಸೇರಿ ನಿಲ್ಲಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಚಾಮುಲ್ ಅಧ್ಯಕ್ಷರಾದ ನಂಜುಂಡಸ್ವಾಮಿ ಮಧುವನಳ್ಳಿ ಶಿವಕುಮಾರ್ ,ಹನೂರು ಪಟ್ಟಣ ಪಂಚಾಯತಿಯ ಮಾಜಿ ಉಪಾಧ್ಯಕ್ಷರುಗಳಾದ ಗೀರಿಶ್ ,ಹರೀಶ್ , ಮಾದೇಶ್. ಹಾಗೂ ಮುಖಂಡರುಗಳಾದ ಸ್ವಾಮಿ ,ಸೇರಿದಂತೆ ಇನ್ನಿತರರು ಹಾಜರಿದ್ದರು.




