
124th day of anti-Baldota factory sit-in is a success; MLAs' move welcomed
೧೨೪ನೇ ದಿನದ ಬಲ್ಡೋಟ ಕಾರ್ಖಾನೆ ವಿರೋಧಿ ಧರಣಿ ಯಶಸ್ವಿ;ಶಾಸಕರ ನಡೆಗೆ ಸ್ವಾಗತ

ಕೊಪ್ಪಳ: ನಗರಸಭೆ ಮುಂದೆ ೧೨೪ನೇ ದಿನದಲ್ಲಿ ಕೊಪ್ಪಳ
ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ
ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆದಿರುವ
ಬಲ್ಡೋಟ ಕಾರ್ಖಾನೆ ಹಟಾವೋ ಧರಣಿಯನ್ನು ಉದ್ದೇಶಿಸಿ
ಕರ್ನಾಟಕ ರೈತ ಸಂಘ (ಎಐಯುಕೆಎಸ್) ರಾಜ್ಯಾಧ್ಯಕ್ಷ
ಡಿ.ಎಚ್.ಪೂಜಾರ ಮಾತನಾಡಿ ಫೆ.೨೪ರ ಬಂದ್ ಹೋರಾಟದಲ್ಲಿ ಎಲ್ಲಾ
ರಾಜಕೀಯ ಪಕ್ಷಗಳ ನಾಯಕರು ಇದ್ದರು. ಅವರು ತಮ್ಮ
ಮನಃಪರಿವರ್ತನೆ ಮಾಡಿಕೊಂಡು ಬಾಧಿತ ಜನರನ್ನು ಹಳ್ಳಿಗಳಿಗೆ
ಹೋಗಿ ಮಾತನಾಡಿಸುತ್ತಿರುವುದು ಸಂತೋಷದ ವಿಚಾರ. ಮಾಲಿನ್ಯ
ಮಾಡುವ ಕಾರ್ಖಾನೆಗಳನ್ನು ಮುಚ್ಚಿ ಜನರ ಜೀವ, ಆರೋಗ್ಯ,
ಮಕ್ಕಳ ಭವಿಷ್ಯ ಉಳಿಸಬೇಕು. ಇದೇ ಅಧಿವೇಶನ ಅವಧಿಯಲ್ಲಿ
ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಕೊಪ್ಪಳ
ಸರ್ವಪಕ್ಷದ ಮುಖಂಡರನ್ನು ಮತ್ತು ಹೋರಾಟ ವೇದಿಕೆಯ
ಪ್ರಮುಖರ ನಿಯೋಗವನ್ನು ಕೊಂಡೊಯ್ದು ಸಮಸ್ಯೆಗೆ
ಶೀಘ್ರ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದರು.
ಇದೇ ವೇಳೆ ಜಂಟಿ ಕ್ರಿಯಾ ವೇದಿಕೆ ಶಾಸಕ ಕೆ. ರಾಘವೇಂದ್ರ
ಹಿಟ್ನಾಳ ಮತ್ತು ಮಾಜಿ ಸಂಸದ ಸಂಗಣ್ಣ ಕರಡಿ ಅವರು ಬಾಧಿತ
ಗ್ರಾಮಗಳ ಭೇಟಿ ಮಾಡಿ ಸಮಸ್ಯೆ ಆಲಿಸಿರುವದು ಬಂದ್ ನಂತರದ
ಯಶಸ್ಸು, ಹಾಗೂ ಅವರ ನಡೆಯನ್ನು ವೇದಿಕೆ ಸ್ವಾಗತಿಸಿದೆ.
ಧರಣಿಯಲ್ಲಿ ಮಾನವ ಬಂಧುತ್ವ ವೆದಿಕೆಯ ವಿಭಾಗೀಯ
ಸಂಚಾಲಕ ಭೀಮಪ್ಪ ಹವಳಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ.
ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ,
ಪ್ರಮುಖರಾದ ಎಸ್.ಬಿ.ರಾಜೂರು, ಎಸ್.ಎಂ. ಕಂಬಾಳಿಮಠ, ಮೂಕಪ್ಪ
ಮೇಸ್ತ್ರಿ ಬಸಾಪುರ, ದಿಗಮಟ್ಟಿ ಗವಿಸಿದ್ದಪ್ಪ, ಯಲ್ಲಪ್ಪ ಸಿದ್ದರ್,
ಪಂಪಣ್ಣ ಚಿಂತಪಲ್ಲಿ, ಶಂಭುಲಿAಗಪ್ಪ ಹರಗೇರಿ, ಶಿವಪ್ಪ
ಬನಪ್ಪನವರ, ರವಿ ಕಾಂತನವರ, ಬಿ.ಜಿ. ಕರಿಗಾರ, ಡಾ. ಬಸವರಾಜ
ಪೂಜಾರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಶಿವರಾಜ ಪೂಜಾರ,
ಶರಣು ಗಡ್ಡಿ , ವೈ. ಸತ್ಯನಾರಾಯಣ, ಬಸವರಾಜ ನರೇಗಲ್,
ಗವಿಸಿದ್ದಪ್ಪ ಚಿಕೇನಕೊಪ್ಪ, ಹನುಮಂತ ಜಂತ್ಲಿ, ಸಂಜೀವಮ್ಮ,
ಶಿವಪ್ಪ ಜಲ್ಲಿ, ಮಂಜುನಾಥ ಕವಲೂರು, ಗಂಗಮ್ಮ, ನಾಗರಾಜ
ಕುಷ್ಟಗಿ, ರಾಜಶೇಖರ ಏಳುಬಾವಿ, ಚನ್ನವೀರಯ್ಯ ಹಿರೇಮಠ
ಮುಂತಾದವರು ಇದ್ದರು.


