
ಸಿಲಿಂಡರ್ ವಿತರಣೆ ವಿತರಣೆ ಮಾಡುವ ಹುಡಗನ ಸಂಪಾದನೆ
Earnings of a boy who distributes cylinders

ಒಬ್ಬ ವ್ಯಕ್ತಿ ಅಟೋ ಅಥವಾ ವ್ಯಾನ್ ಮೂಲಕವಾದರೆ ದಿನವೊಂದಕ್ಕೆ ಗರಿಷ್ಠ ಮೂವತ್ತು ಸಿಲೆಂಡರ್ ವಿತರಿಸಬಹುದು. (ಗಂಟೆಗೆ ನಾಲ್ಕರಂತೆ) ಸೈಕಲ್ ಅಥವಾ ಸ್ಕೂಟರ್ ಗಳಲ್ಲಾದರೆ ಹದಿನೈದು ಸಿಲಿಂಡರ್ ವಿತರಣೆ ಮಾಡಬಹುದು. (ಸರಾಸರಿ ಲೆಕ್ಕ)
- ಒಂದು ಸಿಲಿಂಡರ್ ಗೆ ಹತ್ತು ರೂ ನಿಂದ ಐವತ್ತು ರೂ ತನಕ ಹೆಚ್ಚು ಹಣ ಪಡೆಯುತ್ತಾರೆ. ಕೆಲವರು ಅದನ್ನೂ ಕೊಡುವುದಿಲ್ಲ. ಕಾನೂನು ಮಾತನಾಡಿ ಕಳುಹಿಸುತ್ತಾರೆ. ಹೀಗೆ ಪಡೆಯುವ ಹಣದ ಸರಾಸರಿ ಲೆಕ್ಕವನ್ನು ಮೂವತ್ತು ರೂ ಅಂದುಕೊಂಡರೆ ಗರಿಷ್ಠ 900.00 ರೂ ಸಂಪಾದಿಸುತ್ತಾರೆ. ಇದಷ್ಟೂ ಅವರ ಲಾಭ ಅಲ್ಲ. ಅದರಲ್ಲೇ ಅವರ ವಾಹನದ ಮೆಂಟೇನನ್ಸ್ ಗೆ , ಸಾಲದ ಮರುಪಾವತಿಗೆ ಇಟ್ಟುಕೊಳ್ಳಬೇಕು. ಜೊತೆಗೆ ವಿತರಣಾ ಏಜೆನ್ಸಿಯವರಿಗೂ ಪಾಲು ಕೊಡಬೇಕು. ಇವನ್ನೆಲ್ಲ ಕಳೆದರೆ ಆತನಿಗೆ ಉಳಿಯುವುದು 300.00 ರೂ ನಿಂದ 350.00 ರೂ ಮಾತ್ರ. ಅದರಲ್ಲಿಯೇ ಆತ ತನ್ನ ಚಟದ ಖರ್ಚನ್ನೂ ತೂಗಿಸಿಕೊಳ್ಳಬೇಕು. ಅಂದರೆ ತಿಂಗಳಿಗೆ 7500.00 ರೂ ನಿಂದ 9000.00 ರೂ ನಷ್ಟು ಹೆಚ್ಚು ಹಣ ಉಳಿಸಿಕೊಳ್ಳಬಹುದು.
- ಅವರಿಗೆ ಕೊಡುವ ಸಂಬಳ 400.00 ರೂ ನಿಂದ 600.00 ರೂ ಪ್ರತಿ ದಿನಕ್ಕೆ.. (ತಿಂಗಳಿಗೆ 10000.00 ರೂ ನಿಂದ 15000.00 ರೂ )
ಇದು ಇವರ ಸಂಪಾದನೆ.
ಕಾನೂನಿನ ದೃಷ್ಟಿಯಲ್ಲಿ ಇವರು ಹೆಚ್ಚುವರಿ ಹಣ ಕೇಳುವುದು ಮತ್ತು ನಾವು ಕೊಡುವುದು ಎರಡೂ ತಪ್ಪು. ಯಾಕೆಂದರೆ ಡೆಲಿವರಿ ಚಾರ್ಜನ್ನು ಬಿಲ್ ನಲ್ಲಿಯೇ ಸೇರಿಸಿರುತ್ತಾರೆ. ಆದ್ದರಿಂದ ಹೆಚ್ಚುವರಿ ಹಣವನ್ನು ಕೊಡಬೇಕಿಲ್ಲ.
- ಆದರೆ, ಅದೇಕೊ ನಮಗೆ ಇಂತಹುದರ ಮೇಲೆಯೇ ಕೆಟ್ಟ ಕುತೂಹಲ. ಗ್ಯಾಸ್ ವಿತರಣೆ ಮಾಡುವವರ ಸಂಪಾದನೆ , ಫುಡ್ ಡೆಲಿವರಿ ಮಾಡುವವರ ಸಂಪಾದನೆ, ಕೊರಿಯರ್ ಡೆಲಿವರಿ ಮಾಡುವವರ ಸಂಪಾದನೆ , ಅಟೋ ಅಥವಾ ಟ್ಯಾಕ್ಸಿ ಚಾಲಕರ ಸಂಪಾದನೆ, ಪಾನಿ ಪುರಿ ಮಾರವವನ ಸಂಪಾದನೆ ಇತ್ಯಾದಿ. ದಿನವೆಲ್ಲ ದೇಹದಂಡನೆ ಮಾಡಿ ಇವರು ಸಂಪಾದಿಸುವುದು ಅವರ ಕುಟುಂಬ ನಿರ್ವಹಣೆಗಷ್ಟೇ ಸಾಕಾಗುತ್ತದೆ. ಅದರಿಂದ ಅವರು ಯಾವುದೇ ಮಹಲು ಖರೀದಿಸಲಾಗದು.
ಈ ವಿಚಾರದಲ್ಲಿ ಕಾನೂನು ಮಾತನಾಡುವ ನಾವು,
- ಒಬ್ಬ ರಾಜಕಾರಣಿಯು ಸಂಬಳವನ್ನೇ ಪಡೆಯದೇ ಇದ್ದರೂ ಹೇಗೆಲ್ಲ ಆಸ್ತಿ ಸಂಪಾದಿಸಬಹುದು ಎಂದು ಯೋಚಿಸುತ್ತೇವೆಯೆ?
- ಸರಕಾರಿ ಸಂಬಳ ಪಡೆಯುವ ಒಬ್ಬ MLA, MP ಅಥವಾ ಮಂತ್ರಿಯ ಆಸ್ತಿ ಕೆಲವೇ ವರ್ಷಗಳಲ್ಲಿ ಹೇಗೆ ನೂರಾರು ಕೋಟಿ ಆಗುತ್ತದೆ ಎಂದು ಕೇಳುತ್ತೇವೆಯೆ?
- 30.00 ರೂ ಬೆಲೆಯ ಪೆಟ್ರೋಲ್ ಗೆ ಕಾನೂನಿನ ಚೌಕಟ್ಟಿನಲ್ಲಿಯೇ ಅದರ ಬೆಲೆಯ ದುಪ್ಪಟ್ಟು ತೆರಿಗೆಯನ್ನು ಇಷ್ಟ ಬಂದಂತೆ ಹೆಚ್ಚಿಸಿ ಮೋಸ ಮಾಡುತ್ತಿರುವುದನ್ನ ಕಾನೂನಿನ ವ್ಯಾಪ್ತಿಯಲ್ಲಿಯೇ ಪ್ರಶ್ನಿಸುವ ಎದೆಗಾರಿಕೆ ನಮಗಿದೆಯೇ?
- ಕೋಟ್ಯಾಧೀಶರ ಖಜಾನೆ ತುಂಬಿಸಲು ಕಾರ್ಪೊರೇಟ್ ತೆರಿಗೆ ಕಡಿಮೆ ಮಾಡಿದರಲ್ಲ , ಅದನ್ನ ಪ್ರಶ್ನಿಸಿದ್ದೇವೆಯೆ?
- PM care ಫಂಡ್ ನ ಹಣದ ಲೆಕ್ಕಾಚಾರದ ಮಾಹಿತಯನ್ನ ಏಕೆ ಕೊಡುತ್ತಿಲ್ಲ ಎಂದು ಕೇಳುತ್ತೇವೆಯೆ?
- ನ್ಯಾಯವಾಗಿ ಆದಾಯ ತೆರಿಗೆ ಕಟ್ಟಿ, ಗಾಡಿ ಖರೀದಿಸುವಾಗ ರೋಡ್ ಟ್ಯಾಕ್ಸ್ ಕಟ್ಟಿ, ರಸ್ತೆ ಉಪಯೋಗಿಶುವಾಗ ಟೋಲ್ ಕೂಡಾ ಕಟ್ಟುತ್ತೇವೆ. ಅದರ ಬಗ್ಗೆ ಕೇಳುತ್ತೇವೆಯೆ?
- ಹೋಗಲಿ, ಉತ್ತಮವಾದ ರಸ್ತೆಯನ್ನಾದರೂ ಮಾಡಿದ್ದಾರೆಯೆ? ಅಗತ್ಯ ನೂಲ ಸೌಕರ್ಯಗಳಾದರೂ ಇದೆಯೆ ? ಅದನ್ನೂ ಕೇಳುವುದಿಲ್ಲ.
ನಮಗೆ ಕಾಣುವುದು ಕೇವಲ ಈ ಪುಡಿಗಾಸು ಸಂಪಾದನೆ ಮಾಡಿಕೊಳ್ಳುವವರು ಮಾತ್ರ. ಕೋಟಿ ಕೋಟಿ ಸಂಪಾದನೆ ಮಾಡುವವರು ಕಾಣಿಸುವುದೇ ಇಲ್ಲ. ಯಾಕೆಂದರೆ ನಾವು ಬ್ರಹ್ಮಾಸ್ತ್ರ ಬಿಡುವುದು ಕೇವಲ ಗುಬ್ಬಿಯ ಮೇಲೆ ಮಾತ್ರವೇ !
ನಮ್ಮ ವ್ಯವಸ್ಥೆಯೇ ಹಾಗಿದೆ. ಇದು ನಮ್ಮ. ತಪ್ಪಲ್ಲ.
ನನಗೆ ಅನಿಸಿದ್ದನ್ನ ಹೇಳಿದ್ದೇನೆ. ತಪ್ಪಿದ್ದರೆ ಕ್ಷಮಿಸಿಬಿಡಿ.
ವಂದನೆಗಳು.


