
ತ್ರಿವಳಿ ಜಿಲ್ಲಾ ಮಟ್ಟದ ಕವನ ಸ್ಪರ್ಧೆ
Tri-district level poetry competition

ಗಂಗಾವತಿ : ದಿವಂಗತ ಪಿ.ಮುರುಗೇಶ, ದಿವಂಗತ ಮಧುರ ಸ್ಮರಣಾರ್ಥ ತ್ರಿವಳಿ ಜಿಲ್ಲಾ(ಕೊಪ್ಪಳ ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳು) ಮಟ್ಟದ ಸ್ವರಚಿತ ಕವನ ಸ್ಪರ್ಧೆ ಏರ್ಪಡಿಸಲಾಗಿದೆ.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಸ್ಪರ್ಧೆ ಆಯೋಜಿಸಿದ್ದು ಕವಿ ಕವಯಿತ್ರಿಯರಿಂದ ಕವನಗಳನ್ನು ಆಹ್ವಾನಿಸಿದೆ.
30 ಸಾಲುಗಳ ಒಳಗಿರುವ ಕವನ ಟೈಪ್ ಮಾಡಿ ಹೆಸರು, ಸಂಪರ್ಕ ದೂರವಾಣಿ, ಪೋಟೋ ಜೊತೆ ಮಾ.20 ಒಳಗೆ 6366694264 ಸಂಖ್ಯೆಗೆ ವಾಟ್ಸಾಪ್ ನಲ್ಲಿ ಕಳಿಸಬೇಕು.
ಸ್ಪರ್ಧೆಗೆ 100ರೂ. ಶುಲ್ಕವಿದ್ದು 8105990065(ಕೃಷ್ಣ) ಸಂಖ್ಯೆಗೆ ಫೋನ್ ಫೇ ಮಾಡಬೇಕು.
ವಿಜೇತರಿಗೆ 1001ರೂ. ನಗದು, ಫಲಕ, ಪ್ರಶಸ್ತಿ ಪತ್ರ (ಪ್ರಥಮ), 751ರೂ. ನಗದು, ಫಲಕ, ಪ್ರಶಸ್ತಿ ಪತ್ರ (ದ್ವಿತೀಯ), 501ರೂ. ನಗದು, ಫಲಕ, ಪ್ರಶಸ್ತಿ ಪತ್ರ ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
ಮೂರು ಜಿಲ್ಲೆಗಳ ಕವಿ ಕವಯಿತ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಜಿಲ್ಲಾಧ್ಯಕ್ಷ ಎಂ.ಪರಶುರಾಮ ಪ್ರಿಯ ಮನವಿ ಮಾಡಿದ್ದಾರೆ.





