
ಲಿಂಗದಹಳ್ಳಿ ಇಂದು ಶ್ರೀ ಅಮರೇಶ್ವರ ರಥೋತ್ಸವ
Lingadahalli celebrates Sri Amareshwara Chariot Festival today

ಕುಷ್ಟಗಿ:ತಾಲ್ಲೂಕಿನ ಸುಕ್ಷೇತ್ರ ಲಿಂಗದಹಳ್ಳಿ ಅಮರೇಶ್ವರ ದೇವರ ಜಾತ್ರಾ ಮಹೋತ್ಸವ ನಿಮಿತ್ತ ದಿನಾಂಕ 3/3/2026 ರಂದು ಮಂಗಳವಾರ ಸಂಜೆ ಸಂಭ್ರಮದಿಂದ ಜರುಗಲಿದೆ ಮಹಾ ರಥೋತ್ಸವವನ್ನು ಬರುವ ಭಕ್ತರು ಕಣ್ತುಂಬಿಕೊಳ್ಳುವವರು ಗ್ರಾಮದ ಆರಾಧ್ಯ ದೇವರು, ಭಕ್ತರಿಗೆ ಕೇಳಿದ ವರವನ್ನು ಕೊಡುವ ಉದ್ಭವ ಲಿಂಗಮೂರ್ತಿಯಲ್ಲಿರುವ ಶ್ರೀ ಗುರು ಅಮರೇಶ್ವರ ದೇವರ ರಥೋತ್ಸವ ಮಂಗಳವಾರ ಹೋಳಿಹುಣ್ಣಿಮೆಯ ದಿನ ಸಾಂಪ್ರದಾಯಿಕವಾಗಿ ಅಮರೇಶ್ವರ ದೇವರಿಗೆ ಮಹಾರುದ್ರಾಭಿಷೇಕ, ವೈವಿಧ್ಯಮಯ ಹೂಗಳು, ರಜತ ಕವಚದ ಅಲಂಕಾರ, ಪೂಜಾ ಸಲ್ಲಿಸವುದರ ಮೂಲಕ ಪ್ರಾರಂಭವಾಗುತ್ತದೆ ಹಾಗೂ ಡೋಳ್ಳು ಕುಳಿತ ಭಜನೆ ಮಾಡುವ ಭಕ್ತರು ದೇವರಿಗೆ ಎರಡು ದಿನಗಳಕಾಲ ಭಕ್ತಿ ಸೇವೆ ಸಲ್ಲಿಸುವವರು.ನಂತರ 5:00 ಘಂಟಗೆ ಶ್ರೀ ಅಮರೇಶ್ವರ ದೇವರ ರಥೋತ್ಸವ ಜರಗವುದು.
ಭಕ್ತರ ಜನಸಾಗರ ಮಧ್ಯ ವಿಜೃಂಭಣೆಯಿಂದ ಜರಗಲಿದೆ ಹಾಗೂ ಜಾತ್ರೆ ಅಂಗವಾಗಿ ಸೋಮುವಾರ ಸೂರ್ಯೋದಯ ಸಮಯದಲ್ಲಿ ಪ್ರಾರಂಭವಾಗಿರುವ ಶಿವ ಸಪ್ತ ಭಜನೆ ಮಂಗಳವಾರ ಬೆಳ್ಳಿಗ್ಗೆ ಮುಕ್ತಾಯಗೊಳ್ಳುವದು ದೇವರಿಗೆ ಹರಿಕೆ ಹೊತ್ತುಕೊಂಡು ನೂರಾರು ಭಕ್ತರು ದೀರ್ಘ ದಂಡ ನಮಸ್ಕಾರ ಹಾಕುವರು ಮತ್ತು ಸುಮಾರು 14 ದಿನಗಳಿಂದ ಶ್ರೀ ಅಮರೇಶ್ವರ ದೇವರ ಕುರಿತು ನಡೆದು ಬಂದ ಪುರಾಣವನ್ನು 15 ನೇ ದಿನಕ್ಕೆ ಬುಧವಾರ ದಿನದಂದು ಮಹಾ ಮಂಗಲಗೊಳ್ಳವುದು ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹಗಳು ಜರುಗಲಿದ್ದು ಹಾಗೂ ಗ್ರಾಮದ ಕಲಾವಿದರು ಸಾಮಾಜಿಕ ಹಾಗೂ ಪೌರಾಣಿಕ ನಾಟಕ ಹಾಡುತ್ತಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.


