
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್
50 thousand to gram panchayat officials who delayed providing information - B. Venkatasingh

ಕೊಪ್ಪಳ ಮಾರ್ಚ್ 02 (ಕರ್ನಾಟಕ ವಾರ್ತೆ): ಸಕಾಲಕ್ಕೆ ಮಾಹಿತಿ ನೀಡಿದೆ ನಿರ್ಲಕ್ಷ್ಯ ವಹಿಸಿದ ಒಬ್ಬ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಮೂವರು ಗ್ರಾಮ ಪಂಚಾಯತ ಕಾರ್ಯದರ್ಶಿಗಳಿಗೆ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಬಿ. ವೆಂಕಟ ಸಿಂಗ್ ಅವರು ತಲಾ 10,000/- ಸಾವಿರ ದಂಡ ವಿಧಿಸಿ ಆದೇಶ ಮಾಡಿದ್ದಾರೆ.
ಮೇಲ್ಮನವಿದಾರರು ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡಿದೆ ಇರುವುದರಿಂದ ಅರ್ಜಿದಾರರು ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದಲ್ಲಿ ಸಲ್ಲಿಸಿದ ದ್ವೀತಿಯ ಮೇಲ್ಮವಿ ವಿಚಾರಣೆ ನಡೆಸಿದಾಗ ಮೇಲ್ಮನವಿದಾರರಿಗೆ ಮಾಹಿತಿ ನೀಡುವಂತೆ ಪ್ರತಿವಾದಿಗಳಾದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತ ಕಾರ್ಯದರ್ಶಗಳಿಗೆ ಪೀಠ ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 18(3) ಎ,ಡಿ ರಡಿ ನಿರ್ದೇಶನ ನೀಡಿ, ತಪ್ಪಿದಲ್ಲಿ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 20(1) ರಡಿ ದಂಡದ ಎಚ್ಚರಿಕೆ ನೀಡಿದರೂ ಪೀಠದ ಆದೇಶ ಪಾಲನೆ ಮಾಡದ ಕಾರಣ ಪ್ರತಿವಾದಿ ಅಧಿಕಾರಿಗಳಾದ ವಡಗೇರಾ ತಾಲ್ಲೂಕಿನ ತಡಬಿಡಿ ಗ್ರಾಮ ಪಂಚಾಯತ ಕಾರ್ಯದರ್ಶಿ ಯಂಕನಗೌಡ, ಗುಂಡಗುರ್ತಿ ಗ್ರಾಮ ಪಂಚಾಯತ ಕಾರ್ಯದರ್ಶಿ ಮಲ್ಲಿಕಾರ್ಜುನ ನಾಯಕ್, ಯಾದಗಿರಿ ತಾಲ್ಲೂಕಿನ ಸೈದಾಪೂರ ಗ್ರಾಮ ಪಂಚಾಯತ ಕಾರ್ಯದರ್ಶಿ ಇಸ್ಮಾಯಿಲ್, ಇವರಿಗೆ ಹಾಗೂ ವಿಜನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ತಾಡರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ದೊಡ್ಡಮನಿ ಅವರಿಗೆ ತಲಾ 10,000/- ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಮಾಡಲಾಗಿದೆ.
ಪ್ರಕರಣದಲ್ಲಿ ಸೈದಾಪೂರ ಗ್ರಾಮ ಪಂಚಾಯತ ಕಾರ್ಯದರ್ಶಿ ಇಸ್ಮಾಯಿಲ್ ಅವರಿಗೆ ಎರಡು ಪ್ರತ್ಯೇಕ ಪ್ರಕಾರಣದಲ್ಲಿ ತಲಾ 10,000/- ಸಾವಿರ ಸೇರಿ 20,000/- ಸಾವಿರ ದಂಡ ವಿಧಿಸಿದೆ ಹಾಗೂ ಮೇಲ್ಮನವಿದಾರಿಗೆ ಮಾಹಿತಿ ನೀಡಲು ಮಾಡಿದ ವಿಳಂಬಕ್ಕಾಗಿ ಮೇಲ್ಮನವಿದಾರರಿಗೆ ರೂ.3000/- ಸಾವಿರ ಪರಿಹಾರ ನೀಡುವಂತೆ ತಡಬಿಡಿ ಗ್ರಾಮ ಪಂಚಾಯತ ಕಾರ್ಯದರ್ಶಿ ಯಂಕನಗೌಡ ಇವರಿಗೆ ಆದೇಶ ಮಾಡಲಾಗಿದೆ.
ಒಟ್ಟು ಐದು ಪ್ರಕರಣಗಳಲ್ಲಿ ಪ್ರತಿವಾದಿಯವರಿಗೆ 50,000/- ಸಾವಿರ ದಂಡ ವಿಧಿಸಿದ್ದು, ಸದರಿ ದಂಡ ಪಾವತಿ ಮಾಡಿ ಮುಂದಿನ ವಿಚಾರಣೆಗೆ ಹಾಜರಾಗಲು ಪುನಃ ಎಚ್ಚರಿಕೆ ನೀಡಿದೆ.




