
ಶ್ರೀ ಶಾರದಾ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭ
Anniversary ceremony of Shri Sharada Temple

ಗಂಗಾವತಿ.:ನಗರ ಶಂಕರ ಮಠದಲ್ಲಿ ಶುಕ್ರವಾರದಂದು
ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀ ತೀಥ೯ ಮಹಾಸ್ವಾಮಿಗಳ ತತ್ಕರಕಮಲ ಸಂಜಾತ
ಜಗದ್ಗುರು ಶ್ರೀ ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮಿಗಳ ಇವರ ಅಮೃತ ಹಸ್ತದಿಂದ ಗಂಗಾವತಿಯ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಜರುಗಿದ
ಶ್ರೀ ಶಾರದಾಂಬಾ ,ಶ್ರೀ ಶಕ್ತಿ ಗಣಪತಿ ಹಾಗೂ ಶ್ರೀ ಚಂದ್ರ ಮೌಳೀಶ್ವರ ಸಹೀತ ಶ್ರೀ ಶಂಕರಾಚಾಯ೯ ಮೂತಿ೯ಗಳ ಪ್ರತಿಷ್ಠಾಪನಾ ಎಂಟನೇಯ ವಾಷಿ೯ಕೋತ್ಸವವನ್ನು ಇದೇ ಶ್ರೀ ಶಕೆ 1947ನೇ ಶ್ರೀ ವಿಶ್ವಾವಸು ನಾಮ ಸಂವತ್ಸರ ಫಾಲ್ಗುಣ ಶುಧ್ಧ ಎಕಾದಶೀ ಶುಕ್ರವಾರ
ದಿನಾಂಕ 27/02/2026 ರಂದು
ಆಚರಿಸಲಾಗುತ್ತಿದ್ದು ತಾವು ಸಪರಿವಾರದೊಂದಿಗೆ ಆಗಮಿಸಿ ಜಗನ್ಮಾತೆ ಶ್ರೀ ಶಾರದಾಂಬಾ ದೇವಿಯ ಕೃಪೆಗೆ,ಹಾಗೂ ಶಂಕರ ಭಗತ್ಪಾದರ ಮತ್ತು ಉಭಯ ಪರಮಪೂಜ್ಯ ಶ್ರೀಗಳ ಪರಮಾನುಗ್ರಹಕ್ಕೆ ಪಾತ್ರರಾಗಬೆಕೆಂದು ಧರ್ಮದರ್ಶಿ ನಾರಾಯಣರಾವ್ ತಿಳಿಸಿದ್ದಾನೆ





