
ತೆರಿಗೆ ಆಂದೋಲನ ಕಾರ್ಯ ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿಯವರಿಂದ ಪರಿಶೀಲನೆ

Tax campaign work reviewed by ZP Deputy Secretary T. Krishnamurthy
ಗಂಗಾವತಿ : ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿಸುವಂತೆ ಜಿಪಂ ಉಪ ಕಾರ್ಯದರ್ಶಿಗಳು ಶ್ರೀ ಟಿ.ಕೃಷ್ಣಮೂರ್ತಿ ಅವರು ಹೇಳಿದರು.
ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ನಡೆಸುತ್ತಿರುವ ಕರ ವಸೂಲಾತಿ ಆಂದೋಲನ ಸ್ಥಳಕ್ಕೆ ಭಾನುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ಜ.30 ರಿಂದ ಕರವಸೂಲಾತಿ ಆಂದೋಲನ ಶುರು ಮಾಡಲಾಗಿದೆ. ಸತತ 10 ದಿನಗಳವರೆಗೆ ಆಂದೋಲನ ನಡೆಯಲಿದೆ. ಎಲ್ಲ ಗ್ರಾಪಂ ನವರು ಆಂದೋಲನ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ ಕರ ವಸೂಲಾತಿ ಮಾಡಬೇಕು ಎಂದರು.
ಎಲ್ಲಾ ಸಾರ್ವಜನಿಕ ಮಳಿಗೆಗಳು, ರೈಸ್ ಮಿಲ್ ಗಳು, ಪೆಟ್ರೋಲ್ ಬಂಕ್ ಗಳು, ಖಾಸಗಿ ಶಾಲೆ-ಕಾಲೇಜುಗಳು, ವಾಣಿಜ್ಯ ಆಸ್ತಿಗಳ ತೆರಿಗೆ ಸೇರಿದಂತೆ ಇತರೆ ಎಲ್ಲಾ ಸಣ್ಣ/ದೊಡ್ಡ ವ್ಯಾಪಾರಿಗಳು ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಸಹಕಾರ ನೀಡಿ ಪರವಾನಗಿ ನವೀಕರಿಸಿಕೊಳ್ಳಬೇಕು. ಸಾರ್ವಜನಿಕರು ಪ್ರತಿ ವರ್ಷ ತಮ್ಮ ತೆರಿಗೆ ಪಾವತಿಸಿ ಗ್ರಾಮಾಭಿವೃದ್ಧಿಗೆ ಸಹಕರಿಸಬೇಕು ಎಂದರು.
ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ, ಕರವಸೂಲಿಗಾರ ಆಂಜನೇಯ ಇದ್ದರು.




