
Chandrashekar Mukkundi elected as Taluka President of Karnataka Working Journalists Association, Shivappa Nayak elected as Executive Director

ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘದ ತಾಲೂಕ ಅಧ್ಯಕ್ಷರಾಗಿ ಚಂದ್ರಶೇಖರ ಮುಕ್ಕುಂದಿ , ಕಾಯ೯ದಶಿ೯ಯಾಗಿ ಶಿವಪ್ಪ ನಾಯಕ ಆಯ್ಕೆ

ಗಂಗಾವತಿ:ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘದ ತಾಲೂಕಿನ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಮುಕ್ಕುಂದಿ ಹಾಗೂ ಕಾಯ೯ದಶಿ೯ಯಾಗಿ ಶಿವಪ್ಪ ನಾಯಕಾರನ್ನ ಆಯ್ಕೆ ಮಾಡಿ
ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಹಳ್ಳಿಕೇರಿ ಹಾಗೂ ಜಿಲ್ಲಾ ಪ್ರಧಾನ ಕಾಯ೯ದಶಿ೯ ವೈ.ನಾಗರಾಜ, ಸಂಘದ ರಾಜ್ಯ ಕಾಯ೯ಕಾರಣಿ ಸಮಿತಿ ವೀರಣ್ಣ ಕಳ್ಳಿಮನಿ ಅವರು ಆಯ್ಕೆ ಮಾಡಿ, ಆದೇಶ ಹೊರಡಿಸಿದ್ದಾರೆ.
ವಿಜಯ ಕನಾ೯ಟಕ ವರದಿಗಾರರಾದ ಚಂದ್ರಶೇಖರ ಮುಕ್ಕುಂದಿ ಅವರು ಸುಮಾರು 10 ವಷ೯ಗಳಿಂದ ಗಂಗಾವತಿಯಲ್ಲಿ ವಿಜಯ ಕನಾ೯ಟಕದ ತಾಲೂಕು ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘದಲ್ಲಿ ಸಕ್ರೀಯ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿರುವುದು ಅಷ್ಟೇ ಅಲ್ಲದೆ ಕಳೆದ ಅವಧಿಯಲ್ಲಿ ಸಂಘದ ಜಿಲ್ಲಾ ಕಾಯ೯ಕಾರಣಿ ಸದಸ್ಯರಾಗಿ ಕೂಡ ಸೇವೆಯನ್ನು ಸಲ್ಲಿಸಿದ್ದಾರೆ.
ಅದೇ ರೀತಿಯಾಗಿ ತಾಲೂಕು ಕಾಯ೯ದಶಿ೯ಯಾಗಿ ಆಯ್ಕೆಯಾದ ಶಿವಪ್ಪ ನಾಯಕ ಅವರು ಎಟಿವಿ ಚಾನೆಲನಲ್ಲಿ ಸುಮಾರು 21 ವಷ೯ಗಳಿಂದ ಸೇವೆಯನ್ನು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಸಂಘದ ಸಕ್ರೀಯ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿ, ಕಳೆದ ಅವಧಿಯಲ್ಲಿ ಜಿಲ್ಲಾ ಕಾಯ೯ಕಾರಣಿ ಸದಸ್ಯರಾಗಿ ಕೂಡ ಸಂಘದಲ್ಲಿ ಕೆಲಸ ಮಾಡಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ, ನೂತನ ಅಧ್ಯಕ್ಷ, ಕಾಯ೯ದಶಿ೯ಯಾಗಿ ಆಯ್ಕೆ ಮಾಡಲಾಗಿದೆ.

