
ನಾಳೆ ಹೆಚ್.ಆರ್.ಶ್ರೀನಾಥ್ ಶಷ್ಟಿ ಪೂರ್ತಿ ಅಭಿನಂದನಾ ಸಮಾರಂಭ

H.R. Srinath Shashti Poorti felicitation ceremony tomorrow

ಗಂಗಾವತಿ: ಕಲ್ಯಾಣ ಕರ್ನಾಟಕ ಭಾಗದ ಅಪ್ರತಿಮ ನಾಯಕ ಮಾಜಿ ಸಂಸದ ಹೆಚ್.ಜಿ.ರಾಮುಲು
ರವರ ಪುತ್ರ ಸರಳತೆಯ ಸಕಾರ ಮೂರ್ತಿ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಕೆಪಿಸಿಸಿ ರಾಜ್ಯ
ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶ್ರೀನಾಥ್ ಇವರಿಗೆ ಜನೆವರಿ ೨೯ ಗುರುವಾರ ಬೆಳಗ್ಗೆ ೧೦.೩೦ಕ್ಕೆ
ನಗರದ ರಾಯಚೂರು ರಸ್ತೆಯ ಶ್ರೀ ಇಂಟರ್ ನ್ಯಾಷನಲ್ ಫಂಕ್ಷನ್ ಹಾಲ್ನಲ್ಲಿ
ಅಭಿಮಾನಿಗಳು ಅದ್ಧೂರಿ ಅಭಿನಂದನಾ ಸಮಾರಂಭ ಏರ್ಪಡಿಸಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ
ಸಂಖ್ಯೆಯಲ್ಲಿ ನಾಗರೀಕರು ಆಗಮಿಸಿ ಯಶಸ್ವಿಗೊಳಿಸಲು ಸಂಘಟಕರು ಕೋರಿದ್ದಾರೆ.
ಕಾರ್ಯಕ್ರಮದಲ್ಲಿ ಸರ್ವ ಸಮಾಜದ ಮಠಾಧೀಶರು, ಗಣ್ಯರು, ಮಾಜಿ ಸಚಿವರು, ಹಾಲಿ ಸಚಿವರು,
ಶಾಸಕರು ಮಾಜಿ ಶಾಸಕರು ವರ್ತಕರು, ವಿವಿಧ ಸಂಘಟನಗಳು ಮುಖಂಡರು,
ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ ೧೦.೩೦ಕ್ಕೆ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದ್ದು, ೧೧.೦೦
ಗಂಟೆಗೆ ನಾಗರೀಕರಿಂದ ಅಭಿನಂದನೆ ಸಲ್ಲಿಸಲಾಗುತ್ತಿದೆ ನಂತರ ಮಧ್ಯಾಹ್ನ ೧೨.೦೫ಕ್ಕೆ
ಮಠಾಧೀರಿಂದ ಆಶೀರ್ವಚನ, ಗಣ್ಯರಿಂದ ಅಭಿನಂದನಾ ನುಡಿ ಜರುಗತ್ತಿದ್ದು ಮಧ್ಯಾಹ್ನ ೧
ಗಂಟೆಗೆ ಭೋಜನಾ ವ್ಯವಸ್ಥೆ ಏರ್ಪಡಿಸಲಾಗಿದೆ.



