
ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ನ ಪ್ರಚಾರ ಸಮಿತಿಯ ಸಂಯೋಜಕರನ್ನಾಗಿ ಶಿವಕುಮಾರ್ ಎಮ್ ಎಸ್ ದೊಡ್ಡಿ .

Shivakumar MS Doddi has been appointed as the coordinator of the Chamarajanagar District Congress's campaign committee.

ವರದಿ : ಬಂಗಾರಪ್ಪ .ಸಿ.
ಹನೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾ ಸಂಯೋಜಕರನ್ನಾಗಿ ಶಿವಕುಮಾರ್ ಎಮ್ ಎಸ್ ದೊಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಇತ್ತೀಚೆಗೆ ಚಾ.ನಗರ ಕಾಂಗ್ರೆಸ್ ಕಚೇರಿಯಲ್ಲಿ ಸಮಿತಿಯ ರಾಜ್ಯ ಮುಖ್ಯ ಸಂಯೋಜಕರೂ ಆದ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಡಾ.ಎಸ್ ನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ನೇಮಕಾತಿ ಸಭೆಯಲ್ಲಿ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಮಧುಸೂದನ್ ಅವರು ಶಿವಕುಮಾರ್ ಎಮ್ ಎಸ್ ದೊಡ್ಡಿ. ಅವರಿಗೆ ನೇಮಕಾತಿ ಆದೇಶ ಪ್ರತಿ ನೀಡಿದರು. ಈ ಸಂಬಂದವಾಗಿ ಮಾತನಾಡಿದ ಅವರು , ಮಾಜಿ ಶಾಸಕ ಆರ್. ನರೇಂದ್ರಣ್ಣರವರ ಆರ್ಶಿವಾದದಂತೆ ನಮ್ಮಪಕ್ಷಕ್ಕಾಗಿ ಕಾಯವಾಚ ಮನಸ ದುಡಿದು ಪಕ್ಷಕ್ಕೆ ಮತ್ತು ನಮ್ಮ ಮುಖಂಡರಾದ ನರೇಂದ್ರರವರ ಹಾಗೂ ಉದ್ಯಮಿ ಪೊನ್ನಾಚಿ ರಂಗಸ್ವಾಮಿ ರವರ ಬಲ ಪಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಇತರೆ ಹಿರಿಯ ನಾಯಕರು ಪಕ್ಷದ ಸಂಘಟನೆಯ ಕಾರ್ಯವೈಖರಿಯನ್ನು ಮೆಚ್ಚಿ ನನಗೆ ಪ್ರಚಾರ ಸಮಿತಿಯ ಚಾಮರಾಜನಗರ ಜಿಲ್ಲಾ ಸಂಯೋಜಕರನ್ನಾಗಿ ನೇಮಕ ಮಾಡಿದ್ದಾರೆ. ಅದರಂತೆಯೇ ಎಲ್ಲರ ಸಹಕಾರ ಪಡೆದು ಪಕ್ಷದ ಕಾರ್ಯಕ್ರಮಗಳ ಪ್ರಚಾರದ ಜತೆಗೆ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಮುಂಬರುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಎ.ಆರ್ ಕೃಷ್ಣಮೂರ್ತಿ, ಮಾಜಿ ಶಾಸಕ ಆರ್. ನರೇಂದ್ರ, ಶಾಸಕರುಗಳಾದ ಎಮ್ ಗಣೇಶ್ ಪ್ರಸಾದ್ ,ಪುಟ್ಟರಂಗಶೇಟ್ಟಿ , ಚಾಮುಲ್ ನಂಜುಂಡಸ್ವಾಮಿ, ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಕುಂದವರ್ಮ , ಕಾಡಾ ಅಧ್ಯಕ್ಷ ಮರಿಸ್ವಾಮಿ,ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಚಂದ್ರು, ಈಶ್ವರ್ ಹಾಗೂ ಇನ್ನಿತರರು ಹಾಜರಿದ್ದರು.




