
70 ವರ್ಷ ವಯಸ್ಸಾದ ನಂತರ, ಸರಿಯಾಗಿ, ದಿನಾಲೂ ಮಲವಿಸರ್ಜನೆ ಆಗಲು ಸೂಕ್ತವಾದ ಕ್ರಮಗಳೇನು?

What are the best steps to have a regular bowel movement after the age of 70?

ಹಿರಿಯ ನಾಗರೀಕರಾಗುತ್ತಾ, ದಿನಂಪ್ರತಿ ಒಂದೊಂದು ತೊಂದರೆಗಳು ಬರುತ್ತಿರುತ್ತದೆ! ಇದು ಎಲ್ಲರಿಗೂ ಬರುವಂತಹ ಸಮಸ್ಯೆಯೇ!ಆದುದರಿಂದ ಚಿಂತೆಗೆಡದೇ…
1.ನೀರನ್ನು ಹೆಚ್ಚಾಗಿ ಕುಡಿಯುತ್ತಿರಿ
2..ಮುದ್ದೆಯನ್ನು ಕಡಿಮೆ ಮಾಡಿ, ಅದನ್ನೇಸ್ವಲ್ಪ ನೀರು ಬೆರೆಸಿ, ಗಂಜಿಮಾಡಿ ಕುಡಿಯಿರಿ
3. ಪಚ್ಚ ಬಾಳೆ ಹಣ್ಣನ್ನು, ದಿನಕ್ಕೆ ಕನಿಷ್ಠ 2 ರಿಂದ 3 ಹಣ್ಣನ್ನು ತಿನ್ನಿರಿ
4.ನಿಧಾನವಾಗಿಯಾದರೂ, ಸ್ವಲ್ಪ ನಡೆಯಿರಿ
5.ಇತರರ ಚಿಂತೆಯನ್ನು ಮರೆತು, ನೀವು ಸುಖದಿಂದ, ಎಲ್ಲರೊಡನೆಯೂ ನಗು ನಗುತ್ತಾ ಕಾಲ ಕಳೆಯಿರಿ6.ಧಾರಾವಾಹಿಗಳನ್ನು
6.ಈ ಧಾರಾವಾಹಿಯನ್ನು ನೋಡಬೇಡಿ! ನಿಮ್ಮ ಕಾಲದ ಸಂಗೀತ, ಹಾಸ್ಯಗಳನ್ನು..ನೋಡಿರಿ
7.ನಿಮ್ಮ ಮಕ್ಕಳು, ಸೊಸೆ, ಸಂಬಂಧಿಕರು, ಸ್ನೇಹಿತರೊಡನೆ ಸಂತೋಷದಿಂದ ಮಾತನಾಡಿ ಕಾಲ ಕಳೆಯಿರಿ!
8.ನಾನು ನನ್ನ ಕಾಲದಲ್ಲಿ..ಹೀಗಿದ್ದೆ, ಹಾಗಿದ್ದೆ…ಇದೆಲ್ಲವನ್ನೂ ಬದಿಗೊತ್ತಿ, ಎಲ್ಲರೊಡನೆಯೂ, ಅವರ ಚಿಂತೆಯನ್ನು ಬಗೆಹರಿಸಿ!
9.ಕರವಾಣಿ ( ಮೊಬೈಲ್) ನಲ್ಲಿ ಇರುವ, ಕೋರವನ್ನು ಓದಿ! ಸಾಧ್ಯವಾದರೆ ಪ್ರತಿಕ್ರಿಯಿಸಿ ಬರೆಯಿರಿ
10.ನಿಮ್ಮ ಕಾಲದ ಹಾಸ್ಯ ಚೇಷ್ಟೆ, ಶಾಲೆಗೆ ಚಕ್ಕರ್ ಹೊಡೆದು, ಸಿನಿಮಾ..ಅವರಿರೊಡನೆ ಹರಟೆ ಹೊಡೆಯುತ್ತಿದ್ದ ಘಟನೆಗಳನ್ನು ಇತರರೊಡನೆ ಕಾಲ ಕಳೆಯಿರಿ!ಇದ್ಯಾವುದೂ ಮಾಡದೆ, ಯಾವಾಗಲೂ ಓಡುತ್ತಿರುವುದು, ಯಾರೋಡಣೆಯೂ ಬೇರೆಯದೇ ಇರುವಾಗ, ನಮ್ಮ ಪಚನ ಕ್ರಿಯೆಗಳು ಕೆಲಸಮಾಡದೆ, ಯಾರೊಡನೆಯೂ ತೊಂದರೆಗಳನ್ನು ಹೇಳಿಕೊಳ್ಳದೆ..ಲವ ಲವಿಕೆಯಿಂದ ಇರುವುದನ್ನು ಅಭ್ಯಾಸ ಮಾಡಿಕೊಳ್ಳಿ! ಯಾರಿಗೂ ತಿಳಿ ಹೇಳುವುದೂ, ಮಾರ್ಗ ದರ್ಶನ ಎಂದು ಸಮಯವನ್ನರಿಯದೇ,ನಿಮ್ಮ ಕಾಲದ ಅನುಭವಗಳನ್ನು ಹೇಳಿಕೊಳ್ಳದೆ..ಎಲ್ಲರೊಡನೆ ಬೆರೆಯುವಂತಾದರೆ, ಅದುವೇ ಸಾಕು!ಧನ್ಯವಾದಗಳು!



