
ರೈತ ಹೋರಾಟಗಾರರಿಗೆ ಮಣಿದ ಅಧಿಕಾರಿವರ್ಗ ಕಾವೇರಿ ನದಿ ದಡಕ್ಕೆ ಬೇಟಿ ,

The authorities, who gave in to the farmer activists, went to the banks of the Cauvery River
ವರದಿ: ಬಂಗಾರಪ್ಪ .ಸಿ.

ಹನೂರು :ವಡಕೆಹಳ್ಳ ಏತನೀರಾವರಿ ಯೋಜನೆ ಸಂಬಂಧ ನೀರಾವರಿ ಇಲಾಖೆಯ ಅಧಿಕಾರಿಗಳ ಜೊತೆ ಹೋರಾಟಗಾರರಿಂದ ಕಾವೇರಿ ನದಿಗೆ ಬೇಟಿ.
ದಿನಾಂಕ 27 10 2025 ರಿಂದ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಅಂತರ್ಜಲ ಅಭಿವೃದ್ಧಿಗೆ ಏತನೀರಾವರಿ ಸೌಲಭ್ಯ ಕಲ್ಪಿಸುವಂತೆ ಹಾಗೂ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸುವಂತೆ ರೈತರು, ಮಹಿಳೆಯರು , ಮಕ್ಕಳು,ಅಹೋರಾತ್ರಿ ಧರಣಿ ನಡೆಸುತ್ತಿದ್ದು 86 ನೇ ದಿನಕ್ಕೆ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಉಮೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಮಕೃಷ್ಣ ರವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ನಂತರ ರೈತ ಮುಖಂಡರುಗಳ ಜೊತೆ ತೆರಳಿ ಸ್ಥಳಗಳನ್ನು ಪರಿಶೀಲನೆ ನಡೆಸಿದರು, ಈಗಾಗಲೇ ಕಳೆದ 86 ದಿನಗಳಿಂದ ದಂಟಳ್ಳಿ ಏತನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಯುತ್ತಿದ್ದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯೋಜನೆ ಜಾರಿ ಮಾಡುವಲ್ಲಿ ವಿಪಲವಾಗಿರುವುದರಿಂದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿಫಲತೆ ಖಂಡಿಸಿ ದಿನಾಂಕ 31 01 2026 ನೇ ಶನಿವಾರದಿಂದ ಅನಿರ್ದಿಷ್ಟ ಅಹೋರಾತ್ರಿ ರಸ್ತೆ ತಡೆ ಚಳುವಳಿಗೆ ರೈತ ಸಂಘ ಕರೆ ನೀಡಿದ್ದು ನೆನ್ನೆ ಕೂಡ ಸಂಸದರ ಸಭೆಯಲ್ಲಿ ರಸ್ತೆ ತಡೆ ವಿಚಾರವನ್ನು ತಿಳಿಸಲಾಗಿತ್ತು ಈ ದಿವಸ ಅಧಿಕಾರಿಗಳು ನದಿಗೆ ಬೇಟಿ ಕೊಟ್ಟಿರುವುದು ಸ್ವಲ್ಪ ಮಟ್ಟಿಗೆ ಖುಷಿ ತಂದಿರುತ್ತದೆ ಎಂದು ತಿಳಿಸಿದರು .
ಅಧಿಕಾರಿಗಳ ಜೊತೆ ಶೈಲೇಂದ್ರ,ಎಂ ಇ ಬಸವರಾಜು,ಮೋಳೆ ರಾಜು,ಕೆ ಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷ ಗಿರೀಶ್, ಆರ್ ಅರ್ಪುದ ರಾಜ್ ಮಾಜಿ ಯೋಧರಾದ ಮರಿಯಾ ಜೋಸೆಫ್, ಪೌಲ್ ಧರ್ಮರಾಜ್, ಕುರಟ್ಟಿ ಹೊಸೂರು ಪುಟ್ಟಸ್ವಾಮಿ ,ಡೇವಿಡ್,ಸಿರಿಲ್, ವಲ್ಲಬದಾಸ್,ಚಾರ್ಲೀಸ್, ಜಾನ್ ಜೋಸೆಫ್, ವಡಕೆಹಳ್ಳ ಡೇವಿಡ್,ಇಮಾನುವೇಲು, ಫ್ರಾನ್ಸಿಸ್,ಜೋಸ್ವ, ಪೆರಿಯ ನಾಯಗ, ತಮಿಳ್,ಡ್ಯಾನಿ, ನಿತೀಶ್,ಸೂಸೈಯಮ್ಮಾಳ್ ಮುಂತಾದವರು ಭಾಗವಹಿಸಿದ್ದರು




