
ಎಂಬತೈದು ದಿನ ಕಳೆದರು ರೈತರ ಹೋರಾಟ ನಿಂತಿಲ್ಲ ತಿವ್ರಗೋಳಿಸಲ
Eighty-five days have passed, and the farmers’ struggle has not stopped. The organization has called for an escalation.

ಸಂಘಟವರದಿ : ಬಂಗಾರಪ್ಪ .ಸಿ.

ಹನೂರು : ರೈತರಿಗೆ ಕಡಿಮೆ ವೆಚ್ಚದಲ್ಲಿ ನೀರು ಸರಬರಾಜು ಮಾಡುವ ಕೆಲಸ ಮಾಡುವುದನ್ನು ಬಿಟ್ಟು ಶಾಸಕರ ರೈತರಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡಿ ಅವರ ಬೆಂಬಲಿಗರ ಮೂಲಕ ನಮ್ಮ ಹೋರಾಟವನ್ನು ದಿಕ್ಕುತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ರೈತರಾದ ಪೀಟರ್ ರವರು ತಿಳಿಸಿದರು.
ಹನೂರು ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯಲ್ಲಿನ ವಸತಿ ಗೃಹದಲ್ಲಿ ಮಾತನಾಡಿದ ರೈತರಾದ ನಿರ್ಮಲ ಮಾತನಾಡಿ ದಂಟಳ್ಳಿ ಮಾರ್ಗ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿಯಿಂದ ಹೋರಾಟವನ್ನು ತಿವ್ರಗೋಳಿಸುವ ಎಚ್ಚರಿಕೆಯನ್ನು ನೀಡಿದರು. ವಡಕೆಹಳ್ಳ ಗ್ರಾಮದಲ್ಲಿ ದಿನಾಂಕ 31 01 2026 ನೇ ಶನಿವಾರ ಅನಿರ್ದಿಷ್ಟ ಅಹೋರಾತ್ರಿ ರಸ್ತೆತಡೆ ಚಳುವಳಿ ಹಮ್ಮಿಕೊಂಡಿರುವ ರೈತ ಹೋರಾಟಗಾರ ಶೈಲೇಂದ್ರ ಹಾಗೂ ಇನ್ನಿತರ ಹೋರಾಟಗಾರರು ಪತ್ರಿಕಾಗೋಷ್ಠಿ ನಡೆಸಿದರು.
ದಿನಾಂಕ 27 10 2025 ರಿಂದ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಅಂತರ್ಜಲ ಅಭಿವೃದ್ಧಿಗೆ ಏತನೀರಾವರಿ ಸೌಲಭ್ಯ ಕಲ್ಪಿಸುವಂತೆ ಹಾಗೂ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸುವಂತೆ ರೈತರು, ಮಹಿಳೆಯರು , ಮಕ್ಕಳು,ಅಹೋರಾತ್ರಿ ಧರಣಿ ನಡೆಸುತ್ತಿದ್ದು 85 ದಿನ ಕಳೆದರೂ ಈ ಭಾಗದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಂಸದರು, ಶಾಸಕರು, ಜಿಲ್ಲಾಡಳಿತ ಮತ್ತು ಸರ್ಕಾರ ವಿಫಲವಾಗಿವೆ ಈಗಾಗಲೇ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಂಕ್ರಾಂತಿ ಹಬ್ಬದ ಒಳಗೆ ಡಿಪಿಆರ್ ಮಾಡಿಸುವುದಾಗಿ ಮಾತು ಕೊಟ್ಟಿದ್ದರು ಆದರೆ ಅವರುಗಳು ನೀಡಿದ ಸಮಯ ಮುಗಿದಿದ್ದು ಹಾಗೂ ಇಲ್ಲಿನ ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಒಂದು ದಿನಾನೂ ಬೇಟಿ ನೀಡಿ ಸಮಸ್ಯೆ ಆಲಿಸಿಲ್ಲ ಆದ್ದರಿಂದ ಇವರುಗಳ ರೈತವಿರೋಧಿ ನೀತಿಯನ್ನು ಖಂಡಿಸಿ ದಿನಾಂಕ 31 01 2026 ನೇ ಶನಿವಾರ ದಿಂದ ಅನಿರ್ದಿಷ್ಟ ರಸ್ತೆ ತಡೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಈ ರಸ್ತೆ ತಡೆಗೆ ಶಾಸಕರು, ಸಂಸದರು, ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಸಂಪೂರ್ಣ ಹೊಣೆ ಹೊರಬೇಕು ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳು ,ಪಾದಯಾತ್ರಿಗಳುಎಲ್ಲಾ ರೀತಿಯ ವಾಹನ ಚಾಲಕರು ಮಹದೇಶ್ವರ ಬೆಟ್ಟಕ್ಕೆ ಹೋಗಲು ನಿರ್ಧರಿಸಿದ್ದರೆ ತಮ್ಮ ಕಾರ್ಯಕ್ರಮಗಳನ್ನು ಮುಂದಿನ ದಿನಗಳಿಗೆ ಬದಲಾವಣೆ ಮಾಡಿ ಕೊಳ್ಳಬೇಕೆಂದು ಹಾಗೂ ಹೋರಾಟಕ್ಕೆ ಬೆಂಬಲ ಸೂಚಿಸಬೇಕೆಂದು ಮಾಧ್ಯಮದ ಮೂಲಕ ಕೇಳಿಕೊಂಡರು.
ಚುನಾವಣಾ ಸಮಯದಲ್ಲಿ ನೀಡಿದ ಮಾತು ತಪ್ಪಿದ ಶಾಸಕ ಮಂಜುನಾಥ್ ರವರು ನಮಗೆ ನೀಡಿದ ಹಲವಾರು ವಾಗ್ದಾನಗಳನ್ನು ಮಾಡಿದ್ದು ಅದರಲ್ಲಿ ಹಲವಾರು ಸಮಸ್ಯೆಗಳು ಇನ್ನು ಹಾಗೆ ಇದೆ ಎಂದು ಜೋಸೇಪ್ ತಿಳಿಸಿದರು.
ಪತ್ರಿಕಾಗೋಷ್ಠಿಯ ಸಮಯದಲ್ಲಿ ಎಮ್ ಈ ಬಸವರಾಜು, ಬೆಟ್ಟೆಗೌಡ ,ಮೋಳೆರಾಜು , ಪೆರಿಯ ನಾಯಗಮ್ ವಸಂತಕುಮಾರ್, ಲಾರೆನ್ಸ್ , ಆರ್ ಅರ್ಪುದ ರಾಜ್ , ಲೂರ್ದು ಸ್ವಾಮಿ, ಪುಟ್ಟಸ್ವಾಮಿ, ಮರಿಯ ಜೋಸೆಫ್, ಡೇವಿಡ್, ಪೀಟರ್, ಪೌಲ್ ಧರ್ಮರಾಜ್ , ಮಾಜಿ ಯೋಧರಾದ ಅರುಣ್ ಕುಮಾರ್,ಮಾಣಿಕ್ಯಂ , ವಲ್ಲಬದಾಸ್, ಅಂಥೋನಿ,ರಾಜ, ಜಾನ್, ಸಿಂಗ್,ಲಾಸರ್,ಮದಲೈಸ್ವಾಮಿ, , ಜಾನ್ ಜೋಸೆಫ್, ಸಂದನಮೇರಿ,ನಿರ್ಮಲಾ ಮೇರಿ ,ಸಗಾಯಮೇರಿ ರೆಜಿನಾ ಮೇರಿ, ಸೆಲ್ವ ರಾಜ್, ಮುಂತಾದವರು ಉಪಸ್ಥಿತರಿದ್ದರು
ವಂದನೆಗಳೊಂದಿಗೆ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿ.




