
೮೧ ನೇ ದಿನ ಪೂರೈಸಿದ ಧರಣಿ ಸತ್ಯಾಗ್ರಹ; ಸಿಎಂ ಗೆ ಸಹಿ ಸಂಗ್ರಹ ಪತ್ರ
Dharani Satyagraha completes 81st day; Signature collection letter to CM

ಕೊಪ್ಪಳ: ನಗರಸಭೆ ವಾಣಿಜ್ಯ ಸಂಕೀರ್ಣ ಮುಂದೆ ಬಲ್ಡೋಟಾ ತೊಲಗಿಸಿ ಕೊಪ್ಪಳ ಉಳಿಸಿ ಧರಣಿ ಸತ್ಯಾಗ್ರಹಕ್ಕೆ ೮೧ ದಿನ ಮುಗಿದವು. ಕೊಪ್ಪಳ ಹಾಗೂ ಸುತ್ತಲಿನ ಹಳ್ಳಿಗಳಿಗೆ ಕಾರ್ಖಾನೆ ವಿಷಾನಿಲ, ಕಂದು ದೂಳು ಹರಡಿ ಶುದ್ಧವಾಗಿದ್ದ ಪರಿಸರ ಮಾಲಿನ್ಯವಾಗಿದ್ದು ಈ ಕುರಿತು ಬಿಳಿ ಬ್ಯಾನರ್ ನಲ್ಲಿ ಸಾರ್ವಜನಿಕರು ಮಾಡಿದ ಆಗ್ರಹಪೂರ್ವಕ ಸಹಿ ಹೊಂದಿರುವ ಬ್ಯಾನರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಲಾಗುವದು. ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಮೂಲಕ ಮಂಗಳವಾರ ಒಂದು ದಿನ ಸಹಿ ಸಂಗ್ರಹ ಮಾಡಲಾಗುತ್ತದೆ.
ಶಿವಸಂಗಪ್ಪ ವಣಗೇರಿ ಶರಣರ ವಚನಗಳನ್ನು ಹೇಳಿದರು. ಧರಣಿಯಲ್ಲಿ ಹಿರಿಯ ಸಾಹಿತಿ ಎ.ಎಂ. ಮದರಿ, ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರುಗಳಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ರವಿ ಕಾಂತನವರ, ಮಹಾಂತೇಶ ಕೊತಬಾಳ, ಮೂಕಪ್ಪ ಮೇಸ್ತಿç ಬಸಾಪುರ, ಬಸವರಾಜಪ್ಪ ವಿ. ಶೆಟ್ಟರ್, ಜಾನಪದ ಹಾಡುಗಾರ್ತಿ ಈರಮ್ಮ ಉಂಡಿ, ಸುಂಕಮ್ಮ ಪಡಚಿಂತಿ, ರತ್ನಮ್ಮ ದೊಡ್ಡಮನಿ, ಸಂಜೀವಮ್ಮ ಕುಕನೂರು, ಮಹಾದೇವಪ್ಪ ಎಸ್. ಮಾವಿನಮಾಡು, ಬಿ.ಜಿ. ಕರಿಗಾರ, ಮಂಜುನಾಥ ಕವಲೂರು, ಬಸವರಾಜ ಸೋಮನಾಳ, ವಿಜಯ ಮಹಾಂತೇಶ ಹಟ್ಟಿ, ನಿವೃತ್ತ ಪ್ರಾಚಾರ್ಯ ಎಲ್.ಎಫ್. ಪಾಟೀಲ್, ಗಂಗಾಧರ ಖಾನಾಪೂರ, ಶಿವಪ್ಪ ಜಲ್ಲಿ, ಭೀಮಪ್ಪ ಯಲಬುರ್ಗಾ, ಮಖ್ಬುಲ್ ರಾಯಚೂರು ಹಾಗೂ ತೃತೀಯ ಲಿಂಗಿಗಳು ಪಾಲ್ಗೊಂಡರು.





