
ನಾಳೆ ಬೆಂಗಳೂರು ವಿವಿ: ಶಿಕ್ಷಣ ವಿಭಾಗದಲ್ಲಿ ಸುಗ್ಗಿ ಸಂಭ್ರಮ ಆಯೋಜನೆ

Bangalore University tomorrow: Harvest festival organized in the Education Department

ಬೆಂಗಳೂರು: ಜ.19: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಶಿಕ್ಷಣ ವಿಭಾಗದಿಂದ ಆಯೋಜಿಸಿರುವ ‘ಸುಗ್ಗಿ ಸಂಭ್ರಮ’, ಸಂಸ್ಕೃತಿ, ಶ್ರಮ ಮತ್ತು ಸಡಗರ ಕಾರ್ಯಕ್ರಮವನ್ನು ಸೋಮವಾರ ಬೆಳಗ್ಗೆ 10.30ಕ್ಕೆ ಶಿಕ್ಷಣ ವಿಭಾಗದಲ್ಲಿ ಆಚರಿಸಲಾಗುತ್ತದೆಂದು ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದರವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸುಗ್ಗಿ ಸಂಭ್ರಮದ ಅಂಗವಾಗಿ ವಿವಿಧ ರೀತಿಯ ಕಾರ್ಯಕ್ರಮಗಳಾದ ಇದೇ ಮಂಗಳವಾರದಂದು ಹಿರಿಯ ಪ್ರಶಿಕ್ಷಾಣಾರ್ಥಿಗಳಿಂದ ಕಿರಿಯ ಪ್ರಶಿಕ್ಷಾಣಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆ, ಬುಧವಾರದಂದು ಕ್ರೀಡಾ ಸ್ಪರ್ಧೆಗಳು ನಡೆಯಲಿದೆ.
ಈ ಕಾರ್ಯಕ್ರಮವನ್ನು ಗೌರವ ಉಪಸ್ಥಿತಿಯಲ್ಲಿ ಶಿಕ್ಷಣ ವಿಭಾಗ ಡಾ. ವಾಣಿಶ್ರೀ ಕೊಪ್ಪದರವರು, ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜಕರು, ಡಾ. ಎಂ.ಸಿ. ಎರ್ರಿಸ್ವಾಮಿ, ಪ್ರಾಧ್ಯಾಪಕರು ಮತ್ತು ಬೆಂಗಳೂರು ವಿವಿಯ ವಿವಿಧ ಬೋಧಕ – ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾರ್ಥಿಗಳು, ಶಿಕ್ಷಣ ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ಎಂ.ಇಡಿ ಪ್ರಶಿಕ್ಷಾಣಾರ್ಥಿಗಳು ಮತ್ತಿತರರು ಭಾಗವಹಿಸಲಿದ್ದಾರೆಂದು ಶಿಕ್ಷಣ ವಿಭಾಗದ ಸಂಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



