
ಕಾರಟಗಿ: ಮಧ್ಯಪಾನ, ಇಸ್ಪೀಟು, ಮಟ್ಕಾ ನಿಷೇಧಿಸುವಂತೆ ಗ್ರಾಮಸ್ಥರ ಒತ್ತಾಯ.

Karatagi: Villagers demand ban on alcohol, gambling, and matka.

ಕಾರಟಗಿ: ಗ್ರಾಮದಲ್ಲಿ ಮದ್ಯ ಮಾರಾಟ, ಇಸ್ಪೀಟು ಹಾಗೂ ಮಟ್ಕಾದಂತ ಕಾನೂನು ಬಾಹಿರ ಜೂಜು ದಂದೆಗಳು ಯಾವುದೇ ಆತಂಕವಿಲ್ಲದೆ ನಡೆಯುತ್ತಿವೆ. ಇದು ಅಧಿಕಾರಿಗಳ ಗಮನಕ್ಕಿದ್ದರೂ ಯಾವ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ಉಳೇನೂರು ನಾಗರಿಕರ ಜನಜಾಗೃತಿ ವೇದಿಕೆ ಆರೋಪಿಸಿತು.
ಕಾರಟಗಿ ತಾಲೂಕಿನ ಉಳೇನೂರಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಮೂರು ಗ್ರಾಮಗಳಲ್ಲಿ ಸಾರಾಯಿ ಮಾರಾಟ, ಇಸ್ಪೀಟ್ ಹಾಗೂ ಜೂಜಾಟಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇದರಿಂದ ಸಮಾಜಿಕ ಸ್ವಾಸ್ಥ್ಯ ಮತ್ತು ನೆಮ್ಮದಿ ಹಾಳಾಗುತ್ತಿರುವುದರಿಂದ ಸಂಪೂರ್ಣವಾಗಿ ಈ ಚಟುವಟಿಕೆ ನಿಲ್ಲಬೇಕೆಂದು ಆಗ್ರಹಿಸಿ ಕಾರಟಗಿ ತಹಶೀಲ್ದಾರರಿಗೆ, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿದರು.
“ಉಳೇನೂರು ಗ್ರಾಮದಲ್ಲಿ ಮಧ್ಯಪಾನ, ಇಸ್ಪೀಟು ಮತ್ತು ಓ.ಸಿಯಂತಹ ದುಶ್ಚಟಗಳನ್ನು ಶಾಶ್ವತವಾಗಿ ನಿಷೇಧಿಸಬೇಕು.
ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಅಕ್ರಮವಾಗಿ ಮದ್ಯಪಾನ ಮಾರಾಟ, ಇಸ್ಪೀಟು ಮತ್ತು ಓಸಿಗಳಂತಹ ಕಾನುನು ಬಾಹಿರ ಚಟುವಟಿಕೆ, ದುಶ್ಚಟಗಳು ಹೆಚ್ಚಾಗಿವೆ. ಇತ್ತೀಚಿಗೆ ಊರಿನ ಯುವಕರು ಕುಡಿತಕ್ಕೆ ಬಲಿಯಾಗಿ ಮಾರಕವಾದ ಖಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಇದರಿಂದ ಅನೇಕ ಬಡ ಕುಟುಂಬಗಳು ಬೀದಿಪಾಲಾಗುತ್ತಿವೆ. ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಮದ್ಯಪಾನಕ್ಕೆ ಬಲಿಯಾಗಿದ್ದಾರೆ. ಉನ್ನತ ಶಿಕ್ಷಣ, ಉನ್ನತ ಮೌಲ್ಯಗಳನ್ನು ಕಲಿಯುವ ವಯಸ್ಸಿನಲ್ಲಿ ಮದ್ಯಪಾನದ ದುಶ್ಚಟಕ್ಕೆ ದಾಸರಾಗುತ್ತಿರುವುದು ದುರಂತ” ಬೇಸರ ವ್ಯಕ್ತಪಡಿಸಿದರು.
“ಅಲ್ಲದೆ ಕೆಲವು ಕುಟುಂಬಗಳಲ್ಲಿ ಕುಡಿದು ಕ್ಷುಲ್ಲಕ ಕಾರಣಗಳಿಂದ ಜಗಳವಾಡುವುದರಿಂದ ಕುಟುಂಬದಲ್ಲಿ ನೆಮ್ಮದಿಯಿಲ್ಲದಂತೆ ಮಾಡಿ ಮತ್ತು ಗ್ರಾಮದಲ್ಲಿ ಅಶಾಂತಿಯನ್ನು ಉಂಟುಮಾಡುತ್ತಿದ್ದಾರೆ. ಹೀಗೆ ಮದ್ಯಪಾನದ ದುಶ್ಚಟದಿಂದಾಗಿ ನೂರಾರು ಸಮಸ್ಯೆಗಳು ಗ್ರಾಮದಲ್ಲಿ ತಲೆದೂರುತ್ತಿವೆ. ಮದ್ಯಪಾನದ ಸಮಸ್ಯೆ ಒಂದು ಕಡೆಯಾದರೆ ಸಾರ್ವಜನಿಕರು ಮತ್ತು ಅನೇಕ ಯುವಕರು ಅಕ್ರಮವಾಗಿ ಓಸಿ ಮತ್ತು ಇಸ್ಪೀಟ್ ಆಟಗಳಲ್ಲಿ ತೊಡಗಿಕೊಂಡಿದ್ದಾರೆ. ವಿಪರೀತವಾಗಿ ಓಸಿ ಮತ್ತು ಇಸ್ಪೀಟ್ ಆಟಗಳನ್ನು ಆಡುತ್ತಿರುವುದರಿಂದ, ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೀಡಾಗುತ್ತಿವೆ” ಎಂದರು.
ಉಳೇನೂರು ನಾಗರಿಕರ ಜನ ಜಾಗೃತಿ ವೇದಿಕೆ ಮುಖಂಡರು, ಹಿರಿಯರು ಹಾಗೂ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.




