ಜ. 18 ರಂದು ಕೊಪ್ಪಳದಲ್ಲಿ `ನಮ್ಮೊಳಗೊಬ್ಬ ಗಾಂಧಿ’ ಪ್ರದರ್ಶನ ಕಾರ್ಯಕ್ರಮ
Jan. 18th “One of Us” Gandhi exhibition program in Koppal
ಕೊಪ್ಪಳ ಜನವರಿ 16 (ಕರ್ನಾಟಕ ವಾರ್ತೆ): ಶಿವಮೊಗ್ಗ ರಂಗಾಯಣ ಹಾಗೂ ಕೊಪ್ಪಳದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಾ.ಡಿ.ಎಸ್.ಚೌಗಲೆ ವಿರಚಿತ ನಾಟಕ `ನಮ್ಮೊಳಗೊಬ್ಬ ಗಾಂಧಿ’ ಪ್ರದರ್ಶನ ಕಾರ್ಯಕ್ರಮವನ್ನು ಜನವರಿ 18ರ ಭಾನುವಾರ ಸಂಜೆ 6.30ಕ್ಕೆ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ ಅವರು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸುವರು. ಸಾಂಸ್ಕೃತಿಕ ಚಿಂತಕರು ಹಾಗೂ ಹಿರಿಯ ಸಾಹಿತಿಗಳಾದ ಅಲ್ಲಮ ಪ್ರಭು ಬೆಟ್ಟದೂರು ಅವರು ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ರಾಮ್ಎಲ್ ಅರಸಿದ್ಧಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಡಾ.ಸಿದ್ದಯ್ಯ ಮರಾಣಿಕ್ ಟ್ರಸ್ಟ್(ರಿ) ಕೊಪ್ಪಳ ಅಧ್ಯಕ್ಷರಾದ ಅಜಮೀರ್ ನಂದಾಪೂರ್, ಸಾಹಿತಿ ಸಾವಿತ್ರಿ ಮುಜುಮ್ದಾರ್, ಯುವ ಸಾಹಿತಿ ಮಹೇಶ್ ಶ್ ಬಳ್ಳಾರಿ, ಕನ್ನಡಾಭಿಮಾನಿ ಅಮೀನ ಸಾಹೇಬ ಮುಲ್ಲಾ ಪಾಲ್ಗೊಳ್ಳುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್ ಅವರು ಉಪಸ್ಥಿತಿವಹಿಸುವರು.
`ನಮ್ಮೊಳಗೊಬ್ಬ ಗಾಂಧಿ’ ನಾಟಕದ ಪ್ರದರ್ಶನವು ಚಿದಂಬರರಾವ್ ಜಂಬೆ ಅವರ ನಿರ್ದೇಶನ, ಶಿವಮೊಗ್ಗ ರಂಗಾಯಣದ ರೆಪರ್ಟರಿ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ ಹಾಗೂ ಸಾಹಿತ್ಯ, ಸಾಂಸ್ಕೃತಿಕ, ಕಲಾ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಗವಿಸಿದ್ದ ಎನ್. ಬಳ್ಳಾರಿ ಅವರ ಸಹಕಾರದೊಂದಿಗೆ ನಡೆಯಲಿದೆ ಎಂದು ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಸಿ., ನಿರ್ದೇಶಕ ಪ್ರಸನ್ನ ಡಿ. ಸಾಗರ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





