
ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯತಿಗಳಿಗೆ ಪ್ರಶಸ್ತಿ: ಅರ್ಜಿ ಆಹ್ವಾನ
Award for child marriage-free Gram Panchayats: Applications invited

ಕೊಪ್ಪಳ ಜನವರಿ 16 (ಕರ್ನಾಟಕ ವಾರ್ತೆ): 2024-25ನೇ ಸಾಲಿನ ಬಾಲ್ಯವಿವಾಹ “ಶೂನ್ಯ ಸಹಿಷ್ಣುತೆ” ಹೊಂದಿರುವ (ಬಾಲ್ಯವಿವಾಹ ಮುಕ್ತ) ಗ್ರಾಮ ಪಂಚಾಯತಿಗಳಿಗೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರದ ಆದೇಶದನ್ವಯ 2024-25ನೇ ಸಾಲಿನ ಬಾಲ್ಯವಿವಾಹ, ಶೂನ್ಯ ಸಹಿಷ್ಣುತೆ ಹೊಂದಿರುವ (ಬಾಲ್ಯವಿವಾಹ ಮುಕ್ತ) ಅರ್ಹ ಗ್ರಾಮ ಪಂಚಾಯತಿಗಳಿಗೆ ಪ್ರತಿ ಜಿಲ್ಲೆಯಿಂದ ಒಂದು ಗ್ರಾಮ ಪಂಚಾಯತ್ಗೆ 25,000 ರೂ. ಗಳಂತೆ ಪ್ರಶಸ್ತಿ ನೀಡಲು ಸಿದ್ಧಪಡಿಸಿರುವ ಮಾನದಂಡಗಳಂತೆ ಜಿಲ್ಲಾ ಮಟ್ಟದ ಪರಿಶೀಲನೆ ಹಾಗೂ ಶಿಫಾರಸ್ಸು ಸಮಿತಿ ರಚಿಸಿ ಅರ್ಹ ಗ್ರಾಮ ಪಂಚಾಯತ್ಗಳಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಪ್ರಶಸ್ತಿಗಾಗಿ ಅರ್ಹ ಗ್ರಾಮ ಪಂಚಾಯತಿಗಳು ಸಂಬಂಧಪಟ್ಟ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ರವರ ಕಾರ್ಯಾಲಯದಿಂದ ಪ್ರಸ್ತಾವನೆ ನಮೂನೆ (ಅರ್ಜಿ) ಸ್ವೀಕರಿಸಿ ಜನವರಿ 23ರ ಒಳಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಡಳಿತ ಭವನ, ವಾರ್ತಾ ಇಲಾಖೆ ಎದುರುಗಡೆ, ಕೊಪ್ಪಳ ರವರ ಕಛೇರಿಗೆ ಸಲ್ಲಿಸಬೇಕು. ಜಿಲ್ಲೆಯ ಅರ್ಹ ಗ್ರಾಮ ಪಂಚಾಯತ್ಗಳು ನಿಗದಿತ ಅವಧಿಯೊಳಗೆ ಪ್ರಸ್ತಾವನೆ ಸಲ್ಲಿಸಿ, ಪ್ರಶಸ್ತಿ ಪಡೆದು ಜಿಲ್ಲೆಗೆ ಕೀರ್ತಿ ತರುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿರುತ್ತಾರೆ ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





