
ಶಿಕ್ಷಣ ವಿಭಾಗದಿಂದ ವಿವೇಕಾನಂದ ಜಯಂತಿ ಆಚರಣೆ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕೊಪ್ಪದ ಅಭಿಮತ

ವಿವೇಕಾನಂದರ ಜೀವನ ಪಯಣವು ಯುವ ಸಮೂಹಕ್ಕೆ ಮಾದರಿ
Dr. Vanishree Koppa's comments on the Vivekananda Jayanti celebration and talent show program by the Education Department
ಬೆಂಗಳೂರು: ಜ.14: ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದಿಂದ ವಿವೇಕಾನಂದ ಜಯಂತಿ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಸಿ. ಎರ್ರಿಸ್ವಾಮಿರವರು ವಿವೇಕಾನಂದರ ಜೀವನವು ಅದ್ಭುತ ಯಶಸ್ಸಿನಿಂದ ಕೂಡಿತ್ತು. ಅವರು ಅಪ್ರತಿಮ ಬುದ್ದಿವಂತರಾಗಿದ್ದರು. ಇವರ ಆದರ್ಶಗಳು, ಪ್ರಸ್ತುತ ಯುವ ಪೀಳಿಗೆಗೆ ಪ್ರೇರಕ. ಇಂದಿನ ವಿದ್ಯಾರ್ಥಿಗಳು ಗ್ರಂಥಾಲಯ ಭೇಟಿ ನೀಡಿ ಜ್ಞಾನವನ್ನು ವೃದ್ದಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ವಿವೇಕಾನಂದರ ಶೈಕ್ಷಣಿಕ ಕೊಡುಗೆಗಳು ಪ್ರಸ್ತುತ ಸಮಾಜಕ್ಕೆ ಪೂರಕವಾಗಿವೆ. ಭಾರತದ ಭವ್ಯ ಭವಿಷ್ಯ ಯುವ ಜನತೆ ಮೇಲೆ ನಿಂತಿದೆ. ವಿವೇಕಾನಂದರ ಜೀವನ ಪಯಣವೂ ಯುವ ಸಮೂಹಕ್ಕೆ ಮಾದರಿ. Arise, awake and stop not till the goal is reached ಎನ್ನುವ ವಿವೇಕ ವಾಣಿಯನ್ನು ಯುವ ಜನತೆ ಪಾಲಿಸಿದರೆ ಜೀವನದಲ್ಲಿ ಯಶಸ್ಸು ಸಾಧ್ಯ, ಪ್ರತಿ ವರ್ಷದಂತೆ ನೂತನ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರತಿಭಾ ಪ್ರದರ್ಶನ ಕುರಿತು ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ. ಆತ್ಮವಿಶ್ವಾಸದಿಂದ ಅವಕಾಶಗಳನ್ನು ಬಳಸಿಕೊಳ್ಳಿ ಎಂದು ತಿಳಿಸಿದರು.
ಕೊನೆಯಲ್ಲಿ ಪ್ರಥಮ ವರ್ಷದ ಪ್ರಶಿಕ್ಷಾಣಾರ್ಥಿಗಳು ವಿವಿಧ ರೀತಿಯ ಸಾಂಸ್ಕೃತಿಕ, ನೃತ್ಯ, ಹಾಡು, ಮಿಮಿಕ್ರಿ, ಏಕಾಭಿನಯ, ವಿಭಿನ್ನ ಕಲೆಗಳ ಪ್ರದರ್ಶನ ಮುಂತಾದ ಪ್ರತಿಭೆಗಳನ್ನು ಪ್ರದರ್ಶಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ವಿವಿಯ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದ, ಪ್ರಾಧ್ಯಾಪಕ ಡಾ. ಎಂ.ಸಿ. ಎರ್ರಿಸ್ವಾಮಿ, ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾರ್ಥಿಗಳಾದ ಜಲಜಾಕ್ಷಿ, ಕವಿತಾ ಕೆ.ಆರ್, ಶಶಿಕುಮಾರ್ ಬಿ, ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಾಣಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
ಪೋಟೋ ಕ್ಯಾಪ್ಷನ್ 1:
ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದಿಂದ ರಾಷ್ಟ್ರೀಯ ಯುವ ದಿನಾಚರಣೆಯ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ವಿಭಾಗದ ಅಧ್ಯಾಪಕರ ವೃಂದ, ಪ್ರಶಿಕ್ಷಣಾರ್ಥಿಗಳಿಂದ ಪುಷ್ಪ ನಮನ ಸಲ್ಲಿಸಿದರು.
ಪೋಟೋ ಕ್ಯಾಪ್ಷನ್ 2:
ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದರವರು ಮಾತನಾಡಿದರು.




