
ವಿರುಪಾಪುರನಗರದಲ್ಲಿ ಹುಲ್ಲೇಶ ಬಂಡಿ ಅವರ ನೇತೃತ್ವದಲ್ಲಿ
ಶ್ರೀ ಸಿದ್ಧರಾಮೇಶ್ವರರ ೮೫೪ನೇ ಜಯಂತಿ ಆಚರಣೆ.
854th Jayanti celebration of Shri Siddarameshwara under the leadership of Hullesha Bandi in Virupapuranagar

ಗಂಗಾವತಿ: ಗಂಗಾವತಿಯ ವಿರುಪಾಪುರ ನಗರದ ವಡ್ಡರ ಓಣಿಯಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕರ್ಮಯೋಗಿ, ಕಾಯಕಯೋಗಿ, ಶ್ರೀ ಸಿದ್ದರಾಮೇಶ್ವರ ೮೫೪ನೇ ಜಯಂತಿಯನ್ನು ಕರ್ನಾಟಕ ರಾಜ್ಯ ಭೋವಿ-ವಡ್ಡರ ಮಹಾಸಭಾದ ಕೊಪ್ಪಳ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಹುಲ್ಲೇಶ ಬಂಡಿ ಅವರ ನೇತೃತ್ವದಲ್ಲಿ ಆಚರಿಸಿ, ನಾಡಿನ ಸಮಸ್ತ ಜನತೆಗೆ ಭೋವಿ ಸಮಾಜದವತಿಯಿಂದ ಮಕರ ಸಂಕ್ರಾAತಿಯ ಶುಭಾಶಯಗಳನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಗಾಳೆಪ್ಪ ಭೋವಿ, ನಾಗರಾಜ್ ಚಳಿಗೇರಿ, ರಾಘವೇಂದ್ರ ಮಲ್ಲಾಪುರ, ಜಿ.ಕೆ ಶ್ರೀಧರ್ ಕೃಷ್ಣಾಪುರ, ದತ್ತ, ರಾಘು, ಮಣಿಕಂಠ, ಆರ್ ಸೋಮಪ್ಪ ಸಾಯಿನಗರ, ಡಿ ರಮೇಶ್ ರಾಘವೇಂದ್ರ, ಕುಮಾರ್ ಸಂಗಾಪುರ, ಯಲ್ಲಪ್ಪ ಸಂಗಾಪುರ ವಿರುಪಾಪುರ ನಗರ, ಗುರುಸ್ವಾಮಿ, ಪರಸಪ್ಪ, ಹುಲುಗಪ್ಪ ಮೇಸ್ತಿç, ಲಕ್ಷö್ಮಣ, ಹುಲುಗಪ್ಪ ಹಳ್ಳಿ, ದುರ್ಗೇಶ್, ಗುರುರಾಜ, ಭೀಮ, ರಾಮ, ವಿಜಯ್, ಗೌಸ್, ಭೀಮರಾಜ ಸೇರಿದಂತೆ ಅನೇಕ ಯುವಕರು ಭಾಗವಹಿಸಿದ್ದರು.



