
ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ
Missing person: Request for assistance in finding him/her

Missing person: Request for assistance in finding him/her
ಕೊಪ್ಪಳ ಜನವರಿ 14 (ಕರ್ನಾಟಕ ವಾರ್ತೆ): ಗಂಗಾವತಿಯ ಪಾಟೀಲ್ ನರ್ಸಿಂಗ್ ಹತ್ತಿರದ ರಾಯರ ಓಣಿ ನಿವಾಸಿ 47 ವರ್ಷದ ಶರಣೇಗೌಡ ಸಿಂಗಾಪುರ ಎಂಬ ವ್ಯಕ್ತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಗಂಗಾವತಿ ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಶರಣೇಗೌಡ ಸಿಂಗಾಪುರ ಎಂಬ ವ್ಯಕ್ತಿ 2025ರ ಫೆಬ್ರವತಿ 22 ರಂದು ಸಂಜೆ 7.30 ಗಂಟೆಯ ಸುಮಾರಿಗೆ ಮನೆಯಿಂದ ಹೊರಗಡೆ ಹೋಗಿಬರುವುದಾಗಿ ಹೇಳಿ ಹೋಗಿ ಇಲ್ಲಿಯವರೆಗೂ ಪತ್ತೆಯಾಗಿರುವುದಿಲ್ಲ ಎಂದು ಕಾಣೆಯಾದ ವ್ಯಕ್ತಿಯ ಪತ್ನಿ ಲಲಿತಾ ಸಿಂಗಾಪುರ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 38/2025 ರಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿ ಚಹರೆ ವಿವರ: ಶರಣೇಗೌಡ ಸಿಂಗಾಪುರ್ ವಯಸ್ಸು 47 ವರ್ಷ, 5.6 ಎತ್ತರ ಗೋದಿ ಮೈಬಣ್ಣ, ಕೋಲು ಮುಖ ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಕಾಣೆಯಾದಾಗ ಬಾದಾಮಿ ಬಣ್ಣದ ಫುಲ್ ಶರ್ಟ್ ಚಾಕಲೇಟ್ ಬಣ್ಣದ ಪ್ಯಾಂಟ್ ಹಾಗೂ ಚಾಕ್ಲೇಟ್ ಬಣ್ಣದ ಜಾಕೆಟ್ ಧರಿಸಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡಲು ಬರುತ್ತದೆ.
ಈ ವ್ಯಕ್ತಿ ಯಾರಿಗಾದರು ಕಂಡುಬಂದಲ್ಲಿ ಅಥವಾ ಇತನ ಬಗ್ಗೆ ಮಾಹಿತಿ ದೊರೆತಲ್ಲಿ ಕೊಪ್ಪಳ ಎಸ್.ಪಿ. ದೂ.ಸಂ: 08539-230111, ಗಂಗಾವತಿ ಡಿವೈಎಸ್ಪಿ ದೂ.ಸಂ: 08533-230853, ಗಂಗಾವತಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮೊ.ಸಂ: 9480803752 ಹಾಗೂ ದೂ.ಸಂ: 08533-230633, 08533-230100 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗಂಗಾವತಿ ನಗರ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.


