
ಸಮಾಜ ಸೇವಕ ವಾಸಂಶೆಟ್ಟಿ ಸತ್ಯನಾರಾಯಣ ಬೈಕ್ ಅಪಘಾತದಲ್ಲಿ ನಿಧನ

ಕೊರೋನಾ ಸಂದರ್ಭದಲ್ಲಿ ಪೊಲೀಸರು, ಸರಕಾರಿ ಅಧಿಕಾರಿಗಳಿಗೆ ಉಚಿತ ಚಹಾ ಸೇವೆ
ವಿದ್ಯಾನಗರದ ಸ್ವಚ್ಛತೆ ಹಾಗೂ ಕುಡಿಯುವ ನೀರು ತೊಂದರೆಗೆ ಸ್ಪಂದಿಸುತ್ತ ಸತ್ಯನಾರಾಯಣ
Social worker Vasanshetty Satyanarayana dies in bike accident

ಗಂಗಾವತಿ:ವಿದ್ಯಾನಗರದಲ್ಲಿ ಬೈಕ್ ಅಪಘಾತದ ಸಂಭವಿಸಿ ವಾಸಂಶೆಟ್ಟಿ ಸತ್ಯನಾರಾಯಣ (56) ಚಿಕಿತ್ಸೆ ಫಲಿಸದೇ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.
ವಾಸಂಶೆಟ್ಟಿ ಸತ್ಯನಾರಾಯಣ ಜನಾನುರಾಗಿ ವ್ಯಕ್ತಿಯಾಗಿದ್ದು ವಿದ್ಯಾನಗರದ ರಸ್ತೆ ಬದಿಯಲ್ಲಿ ಹಲವು ದಶಕಗಳಿಂದ ಇಡ್ಲಿ, ವಡಾ ಹೋಟೇಲ್ ನಡೆಸುತ್ತಿದ್ದರು.
ಸೋಮವಾರ ಸಂಜೆ ವಿದ್ಯಾನಗರದಲ್ಲಿ ರಸ್ತೆ ದಾಟುವ ಸಂದರ್ಭದಲ್ಲಿ ಬೈಕ್ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡಿದ್ದು ಕೂಡಲೇ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಮೃತರು ಒರ್ವ ಪುತ್ರ ಮತ್ತು ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಜ.14 ಬೆಳ್ಳಿಗ್ಗೆ 10.35 ಕ್ಕೆ ವಿದ್ಯಾನಗರದಲ್ಲಿ ಜರುಗಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ
ಕೊರೋನಾ ಸಂದರ್ಭದಲ್ಲಿ ತರಕಾರಿ ಮಾರುಕಟ್ಟೆ ಎಪಿಎಂಸಿಯಲ್ಲಿ ಆರಂಭಕ್ಕೆ ಜಿಲ್ಲಾಧಿಕಾರಿ, ಪೌರಾಯುಕ್ತರು ಹಾಗೂ ಡಿವೈಎಸ್ಪಿಗೆ ಮನವಿ ಸಲ್ಲಿಸಿದ್ದರು.
ಕೊರೋನಾ ವಾರಿಯರ್ ಆಗಿದ್ದರಿಂದ ಅಂದಿನ ಶಾಸಕರಾಗಿದ್ದ ಪರಣ್ಣ ಮುನವಳ್ಳಿ ಸ್ವತಹ ವಿದ್ಯಾನಗರದ ಅವರ ಹೊಟೇಲ್ ತೆರಳಿ ಪತ್ರಕರ್ತರ ಜತೆಗೂಡಿ ಸನ್ಮಾನಿಸಿ ಗೌರವಿಸಿದ್ದರು.
ಸಂತಾಪ: ಸತ್ಯನಾರಾಯಣ ನಿಧನಕ್ಕೆ ಪತ್ರಕರ್ತರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.




