
ಜಿ.ರಾಮಕೃಷ್ಣರವರಿಗೆ
G. Ramakrishna was conferred with thG. Ramakrishna was conferred with the Celebritye Celebrity

ಗೋವಾ ರಾಜ್ಯಪಾಲರಿಂದ ಸೆಲೆಬ್ರಿಟಿ ಪ್ರಶಸ್ತಿ
ಪುರಸ್ಕಾರ
G. Ramakrishna was conferred with the Celebrity Award by the Governor of Goa

ಗಂಗಾವತಿ: ತಾಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಸೇವಾ
ಸಂಸ್ಥೆಯ ಅಧ್ಯಕ್ಷರಾದ ಜಿ. ರಾಮಕೃಷ್ಣರವರಿಗೆ ಇತ್ತೀಚೆಗೆ
ಗೋವಾ ರಾಜ್ಯಪಾಲರಾದ ಗೌರವಾನ್ವಿತ ಪಿ. ಅಶೋಕ ಗಜಪತಿರಾಜು
ಗೋವಾ ರಾಜಭವನದಲ್ಲಿ ಸೆಲೆಬ್ರಿಟಿ ಪ್ರಶಸ್ತಿಯನ್ನು ನೀಡಿ
ಪುರಸ್ಕರಿಸಿದ್ದಾರೆ.
ಕನ್ನಡಪ್ರೇಮಿ ಲಯನ್ ಜಿ. ರಾಮಕೃಷ್ಣರವರು ಸುಮಾರು
೨೧ ವರ್ಷಗಳ ಹಿಂದೆ ತುಂಗಭದ್ರಾ ಕೃಷಿ ಪತ್ತಿನ ಸಹಕಾರ
ಸಂಘವನ್ನು ಸ್ಥಾಪನೆ ಮಾಡಿ, ಸಹಕಾರ ರಂಗದಲ್ಲಿ ರೈತರಿಗಾಗಿ,
ಮಹಿಳೆಯರಿಗಾಗಿ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿ, ಬಡ
ರೋಗಿಗಳಿಗೆ ಉಚಿತ ಶಸ್ತçಚಿಕಿತ್ಸೆ ಕೊಡಿಸಿ, ರೈತರ ಮಕ್ಕಳಿಗೆ
ಪಾಸ್ಪೋರ್ಟ್, ಡ್ರೆöÊವಿಂಗ್ ಲೈಸನ್ಸ್, ಮಹಿಳೆಯರಿಗೆ
ಹೊಲಿಗೆಯಂತ್ರಗಳ ವಿತರಣೆ, ಸ್ವಸಹಾಯ ಸಂಘದ
ಮಹಿಳೆಯರಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ, ರೈತರಿಗೆ ಬಡ್ಡಿರಹಿತ ಸಾಲ
ಕೊಡಿಸುವುದರ ಮೂಲಕ ಬಡವರಿಗೆ, ದೀನರಿಗೆ, ನಿರಾಶ್ರಿತರಿಗೆ,
ವಿದ್ಯಾರ್ಥಿಗಳಿಗೆ ತಮಗೆ ಕೈಲಾದಷ್ಟು ಸಹಾಯ, ಸಹಕಾರಗಳನ್ನು
ಮಾಡುತ್ತಾ ಬಂದಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ ಈ
ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ಈ ಸಮಾರಂಭದಲ್ಲಿ ಪ್ರಜಾಡೈರಿ ಸಂಪಾದಕರಾದ ಸುರೇಶ್
ಅವರು ಉಪಸ್ಥಿತರಿದ್ದರು.




