
ಕುಸಿದ ಟವರ್ ದುರಸ್ತಿಗೊಳಿಸಿ 120 ಗ್ರಾಮಗಳಿಗೆ ಸಕಾಲದಲ್ಲಿ ವಿದ್ಯುತ್ ಪೂರೈಸಿದ ಕೆಪಿಟಿಸಿಎಲ್ ಮತ್ತು ಚೆಸ್ಕಾಂ ತಂಡಕ್ಕೆ ಜಿಲ್ಲೆಯಾದ್ಯಂತ ಅಭಿನಂದನೆಯ ಮಹಾಪೂರ.

Congratulations to the KPTCL and Chescom teams across the district for repairing the collapsed tower and providing electricity to 120 villages in a timely manner.
ವರದಿ : ಬಂಗಾರಪ್ಪ .ಸಿ .
ಹನೂರು : ಹನೂರು ಕ್ಷೇತ್ರದಲ್ಲಿ ಪ್ರತಿಯೋಬ್ಬರಿಗೂ ಕೈಗೆಟುಕುವ ರೀತಿಯಲ್ಲಿ
ಅತ್ಯುತ್ತಮವಾಗಿ ಸ್ಪಂದಿಸಿ
ಗ್ರಾಹಕರಿಗೆ, ರೈತರಿಗೆ ನಿರೀಕ್ಷೆಯಂತೆ ನಿಗದಿತ ಅವಧಿಯೊಳಗೆ ವಿದ್ಯುತ್ ಸರಬರಾಜು ಮಾಡಲು ಕ್ರಮವಹಿಸಿದ ಎಲ್ಲಾ ಅಧಿಕಾರಿ, ನೌಕರರನ್ನು ರೈತ ಮುಖಂಡರು, ಕರ್ನಾಟಕ ಪತ್ರಕರ್ತರ ಸಂಘ, ವಿವಿಧ ಸಂಘ ಸಂಸ್ಥೆಯವರು ಶ್ಲಾಘಿಸಿದರು.
ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿನ
ದಿನಾಂಕ: 12.01.2026 ರಂದು ಸುಮಾರು 80 ಅಡಿಗೂ ಉದ್ದವಿರುವ 66 ಕೆವಿ ಮಾರ್ಗದ ಟವರ್, ಕಣಿವೆ ಆಂಜನೇಯ ದೇವಸ್ಥಾನದ ಬಳಿ, ಎಂಎಂ ಹಿಲ್ಸ್ ರಸ್ತೆಯ ಬಳಿ ಕುಸಿದಿದೆ, ಇದರಿಂದಾಗಿ 66/11 KV
ಬಂಡಳ್ಳಿ, ಅಜ್ಜಿಪುರ, ಕೌದಳ್ಳಿ, ರಾಮಾಪುರ ಮತ್ತು ಮಾರ್ಟಳ್ಳಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯ ಫೀಡರ್ ಗಳಲ್ಲಿನ ಸುಮಾರು 120 ಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಿದೆ. ತಕ್ಷಣವೇ ಕಾರ್ಯ ಪ್ರವೃತ್ತರಾಗಿ 85 ಕ್ಕೂ ಹೆಚ್ಚು ಕೆಪಿಟಿಸಿಎಲ್ ಮತ್ತು ಚೆಸ್ಕಾಂ ಅಧಿಕಾರಿ, ನೌಕರರು ಸತತವಾಗಿ 18 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಮಧ್ಯ ರಾತ್ರಿ 1.00am ಗಂಟೆಗೆ ವಿದ್ಯುತ್ ಸರಬರಾಜು ನೀಡಲು ಸಪಲರಾಗಿದ್ದಾರೆ.
ಕಾರ್ಯ ನಿರ್ವಹಿಸಿದ ಸ್ಥಳಕ್ಕೆ ಚೆಸ್ಕಾಂ ಡೈರೆಕ್ಟ್ ರ್ ದಿವಾಕರ್, ಅಧೀಕ್ಷಕ ಇಂಜಿನಿಯರ್ ಸೋಮಶೇಖರ್, ಕೆಪಿಟಿಸಿಲ್ ಮುಖ್ಯ ಇಂಜಿನಿಯರ್ ನಾಗರಾಜು, ಇಇ ತಬಸ್ಸು, ಶಾಹಿಲಾ ಸಿದ್ದಿಕಿ, ಎಇಇ ರಂಗಸ್ವಾಮಿ,ತಿಪ್ಪೇಸ್ವಾಮಿ,ಚಂದ್ರಶೇಖರ್ ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದು ಯಶಸ್ವಿಯಾಗಿ ನಿರ್ವಹಿಸಿದರು ಇವರ ತಂಡದ ಕಾರ್ಯಕ್ಕೆ ಚಾಮರಾಜನಗರ ಜಿಲ್ಲೆ ಹಾಗೂ ಮೈಸೂರು ಜಿಲ್ಲೆಯ ಜನರು ಸಹ ಹರ್ಷವ್ಯಕ್ತಪಡಿಸಿದ್ದಾರೆ .




