
Appeal for help in finding missing boy

ಕೊಪ್ಪಳ ಜನವರಿ 13, (ಕರ್ನಾಟಕ ವಾರ್ತೆ): ನಗರದ ಗವಿಮಠದ ಹಾಸ್ಟೆಲ್ನಲ್ಲಿ ವಾಸವಿದ್ದು ಗವಿಮಠದಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದ ಸಂತೋಷ ತಂ. ರುದ್ರಪ್ಪ ಮದ್ದಿನ ಎಂಬ 15 ವರ್ಷ 11 ತಿಂಗಳ ವಯಸ್ಸಿನ ಬಾಲಕ ಕಾಣೆಯಾಗಿದ್ದು, ಈ ಕುರಿತು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.86/2025 ಕಲಂ:137(2) ಬಿ.ಎನ್.ಎಸ್. ನೇದ್ದರಡಿ ಪ್ರಕರಣ ದಾಖಲಾಗಿದೆ.
ಈ ಬಾಲಕನು ಓದುವುದಿಲ್ಲ ಎಂದು ಹೇಳಿದ ಕಾರಣ ಬಾಲಕನ ತಾಯಿ ಕಮಲಮ್ಮ ರುದ್ರಪ್ಪ ಮದ್ದಿನ ಅವರು ಆತನನ್ನು ಡಿಸೆಂಬರ್ 8 ರಂದು ಮಧ್ಯಾಹ್ನ 12.30 ಗಂಟೆಯ ಸುಮಾರಿಗೆ ವಾಪಸ್ ತಮ್ಮ ಊರಿಗೆ ಕರೆದುಕೊಂಡು ಹೋಗುವಾಗ ಕೊಪ್ಪಳ ಎಪಿಎಂಸಿ ಹತ್ತಿರದಿಂದ ಬಾಲಕನು ಕಾಣೆಯಾಗಿದ್ದು, ಬಾಲಕನನ್ನು ಯಾರೋ ಅಪಹರಣ ಮಾಡಿದ್ದಾರೆ ಎಂದು ಶಂಕಿಸಿ, ದೂರು ದಾಖಲಿಸಲಾಗಿದೆ.
ಬಾಲಕನ ಚಹರೆ ವಿವರ: ಬಾಲಕನು 4.5 ಅಡಿ ಎತ್ತರವಿದ್ದು, ಸಾದಗಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ದಿನ ತಿಳಿ ಹಸಿರು ಬಣ್ಣದ ಡಿಜೈನ್ ಇರುವ ಶರ್ಟ್ ಮತ್ತು ಕಂದು ಬಣ್ಣದ ಪ್ಯಾಂಟ್ ಧರಿಸಿದ್ದನು.
ಮೇಲ್ಕಂಡ ಚಹರೆಯ ಬಾಲಕನ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಮಹಿಳಾ ಪೊಲೀಸ್ ಠಾಣೆ ದೂ.ಸಂ: 08539-221233, ಮಹಿಳಾ ಪೊಲೀಸ್ ಠಾಣೆ ಪಿಐ ಮೊ.ಸಂ: 8073476715, ತನಿಖಾಧಿಕಾರಿ ಶಶಿಕಲಾ ಮ.ಹೆಚ್.ಸಿ.138 ಮೊ.ಸಂ: 8217391502, ಕೊಪ್ಪಳ ಪೊಲೀಸ್ ಕಂಟ್ರೋಲ್ ರೂಂ.ಸA: 9480803700 ಇಲ್ಲಿಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಮಹಿಳಾ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.





