
೭೪ ದಿನದ ಹೋರಾಟ ಪೂರೈಸಿದ ಕಾರ್ಖಾನೆವಿರೋಧಿ ಧರಣಿ ಸತ್ಯಾಗ್ರಹಜ. ೧೩ ರ ವಜ್ರ ಮಹೋತ್ಸವಕ್ಕೆ ಕೆ.ಎಸ್.
ಭಗವಾನ್ ಆಗಮನ
ಧರಣಿ ಸತ್ಯಾಗ್ರಹ ಜ. ೧೩ ರ ವಜ್ರ ಮಹೋತ್ಸವಕ್ಕೆ ಕೆ.ಎಸ್. ಭಗವಾನ್ ಆಗಮನಜಾಹೀರಾತು


ಕೊಪ್ಪಳ: ನಗರಸಭೆ ಮುಂದುಗಡೆ ಕೊಪ್ಪಳ ಜಿಲ್ಲಾ
ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತ ರಕ್ಷಣಾ
ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ
ಹಮ್ಮಿಕೊಂಡಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ,
ಮುಕುಂದ್ ಸುಮಿ, ಎಕ್ಸ್ ಇಂಡಿಯಾ, ತನುಷ್, ದೃವದೇಶ
ಸೇರಿದಂತೆ ಅನೇಕ ಪರಿಸರ ಮಾರಕ ಕಾರ್ಖಾನೆ ವಿರೋಧಿ
ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹ ೭೪ ದಿನ ಪೂರೈಸಿತು.
ಜನರು ಅನೇಕ ರೋಗಗಳಿಂದ ಬಳಲುತ್ತಿದ್ದು
ಕೂಡಲೇ ಎಚ್ಚೆತ್ತುಕೊಂಡು ಹೋರಾಟಕ್ಕೆ ಬರುವಂತೆ
ಕರೆ ನಿಡಿದರು. ಧರಣಿಯಲ್ಲಿ ಪ್ರಧಾನ ಸಂಚಾಲಕ
ಅಲ್ಲಮಪ್ರಭು ಬೆಟ್ಟದದೂರು, ಪ್ರಕಾಶಕ ಡಿ.ಎಂ. ಬಡಿಗೇರ,
ಎಸ್. ಬಿ. ರಾಜೂರ, ಸಂಚಾಲಕರಾದ ಮಲ್ಲಿಕಾರ್ಜುನ ಬಿ.
ಗೋನಾಳ, ಮಹಾದೇವಪ್ಪ ಎಸ್. ಮಾವಿನಮಡು, ಮಖ್ಬುಲ್
ರಾಯಚೂರು, ದಾದಾ ಖಲಂದರ್, ವಿಜಯಮಹಾಂತೇಶ ಬಿ.
ಹಟ್ಟಿ, ರಾಮಣ್ಣ ರು. ಬಡಿಗೇರ, ಸದಾಶಿವ ಪಾಟೀಲ್, ಶಿವಪ್ಪ ಜಲ್ಲಿ,
ಜಾಫರ್ ತಟ್ಟಿ, ಚನ್ನವೀರಯ್ಯ ಹಿರೇಮಠ, ಶೌಕತ್ ಅಲಿ
ನಾಗನೂರು, ಜಿ.ಎಸ್. ಕಡೇಮನಿ ಇತರರು ಪಾಲ್ಗೊಂಡರು.
ನಾಳೆ ಮಂಗಳವಾರ ೭೫ನೇ ದಿನದ ಕಾರ್ಖಾನೆ ವಿರೋಧಿ
ಧರಣಿಯ ವಜ್ರ ಮಹೋತ್ಸವವನ್ನು ಬೆಂಬಲಿಸಲು ರಾಜ್ಯದ
ಖ್ಯಾತ ವಿದ್ವಾಂಸರಾದ ಕೆ. ಎಸ್. ಭಗವಾನ್ ಅವರು
ಆಗಮಿಸುತ್ತಿದ್ದಾರೆ.
ಬೆಳಿಗ್ಗೆ ಕೊಪ್ಪಳ ಕಾರ್ಖಾನೆ ಬಾಧಿತ ಗಿಣಿಗೇರಿ,
ಹಿರೇಬಗನಾಳ, ಚಿಕ್ಕಬಗನಾಳ, ಕುಣಿಕೇರಿ, ಕುಣಿಕೇರಿ
ತಾಂಡಾ, ಹಾಲವರ್ತಿ ಗ್ರಾಮಗಳ ಜನರನ್ನು ಕಂಡು
ಸಮಸ್ಯೆ ಕುರಿತು ಸಮಾಲೋಚನೆ ನಡೆಸುತ್ತಾರೆ.
ನಂತರ ಧರಣಿ ಸ್ಥಳಕ್ಕೆ ಬಂದು ೭೫ನೇ ವಜ್ರ
ಮಹೋತ್ಸವ ಹೋರಾಟದಲ್ಲಿ ಪಾಲ್ಗೊಂಡು
ಮಾತನಾಡುವರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಗಾರರು,
ಕೊಪ್ಪಳ ಉಳಿಸುವ ಹಂಬಲ ಇರುವ ಜನರು ಪಾಲ್ಗೊಳ್ಳಲು
ಜಂಟಿ ಕ್ರಿಯಾ ವೇದಿಕೆ ಮನವಿ ಮಾಡಿದೆ.




