
ಮಕ್ಕಳು ದೇಶದ ಪ್ರಜೆಗಳು : ಗುರಪ್ಪ ನಾಯಕ


ತಾವರಗೇರಾ : ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎಂಬ ಮಾತನ್ನು ಬಳಸುವಂತಿಲ್ಲ, ಇಂದಿನ ಮಕ್ಕಳು ಇಂದಿನ ಪ್ರಜೆಗಳು ಎಂದು ಕರೆಯಬೇಕು ಇದು ಸಂವಿಧಾನದ ಆಶಯ ಎಂದು ಗ್ರಾ. ಪಂ. ಕಾರ್ಯದರ್ಶಿ ಗುರಪ್ಪ ನಾಯಕ ಹೇಳಿದರು.
ಅವರು ಕುಷ್ಟಗಿ ತಾಲೂಕಿನ ತಾವರಗೇರಾ ಸಮೀಪದ ಕಿಲಾರಹಟ್ಟಿ ಗ್ರಾಮ ಪಂಚಾಯತ್ ವತಿಯಿಂದ ಸೋಮವಾರ ಸರ್ಕಾರಿ ಪ್ರೌಢಶಾಲೆ ಕಿಲಾರಹಟ್ಟಿಯಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಉದ್ದೇಶಿಸಿ ಮಾತನಾಡಿದರು.
ಮಕ್ಕಳ ಭೆಡಿಕೆಗಳನ್ನು ಆಲಿಸಿ ಉತ್ತರ ನೀಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಕ್ರಪ್ಪ ಎಂ ರವರು ತಮ್ಮ ಮೂಲಭೂತ ಸಮಸ್ಯೆಗಳನ್ನು ಬರುವ 2026-27 ರ ವಾರ್ಷಿಕ ಕ್ರೀಯಾ ಯೋಜನೆಯಲ್ಲಿ ಅಳವಡಿಸುವ ಮೂಲಕ ಪೂರ್ಣ ಪ್ರಮಾಣದ ಭೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ಗ್ರಾ. ಪಂ. ಅಧ್ಯಕ್ಷ ಶರಣಗೌಡ ಪಾಟೀಲ ತತ್ಷಣ ಈಡೇರಿಸಬಹುದಾದ ಭೇಡಿಕೆಗಳನ್ನು ತಿಂಗಳೊಳಗೆ ಪರಿಹರಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರೌಢಶಾಲೆ ಪ್ರಭಾರಿ ಮುಖ್ಯ ಗುರುಗಳು ಅಂಬ್ರೇಶ ನಾಗಲೀಕರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆ ಗಳ ಶಿಕ್ಷಕರು ಅಂಗನವಾಡಿ ಕಾರ್ಯಕರ್ತೆಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು
ಫೋಟೋ : ತಾವರಗೇರಾ ಸಮೀದ ಕಿಲಾರಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಯಿತು.




