
ಅಪೆಕ್ಸ್ ಬ್ಯಾಂಕ್ ನಿರ್ದೇಶಕರಿಗೆ ಶುಭ ಕೋರಿ ಸನ್ಮಾನಿಸಿದ ಉದ್ಯಮಿ ಪೊನ್ನಾಚಿ ರಂಗಸ್ವಮಿ

Businessman Ponnachi Rangaswamy felicitates Apex Bank Director

ವರದಿ: ಬಂಗಾರಪ್ಪ .ಸಿ .
ಹನೂರು :ಹನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿ ನಂತರ ತಾಲ್ಲೂಕು ನಿರ್ದೇಶಕರಾಗಿ ಇದೀಗ
ಅಪೆಕ್ಸ್ ಬ್ಯಾಂಕ್ ನಿರ್ದೇಶರಾಗಿ ಆಯ್ಕೆಯಾದ ಹನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಆರ್ ನರೇಂದ್ರರವರಿಗೆ ಶುಭಾಶಯ ತಿಳಿಸಿದ ಉದ್ಯಮಿ ಪೊನ್ನಾಚಿ ರಂಗಸ್ವಾಮಿ
ಬೆಂಗಳೂರಿನ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಸಂತೋಷದ ಸಂಗತಿಯಾಗಿದೆ ,ನಮ್ಮ ಕ್ಷೇತ್ರದಲ್ಲಿ ಅವರು ಮಾಡದಿರುವ ಕೆಲಸಗಳಿಲ್ಲ ಮುಂದಿನ ದಿನಗಳಲ್ಲಿ ಹಲವಾರು ನಾಯಕರುಗಳಿಗೆ ಮಾದರಿಯಾಗಿದ್ದಾರೆ ,ಎಂದು ತಿಳಿಸಿದರು .
ಇದೇ ಸಂದರ್ಭದಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ಆರ್ ನರೇಂದ್ರ ರಾಜುಗೌಡ ರವರು ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಪ್ರಮಾಣ ಪತ್ರ ಸ್ವೀಕರಿಸಿದರು ಇವರಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಮಾಜಿ ಸಚಿವರಾದ ಕೆ ಎನ್ ರಾಜಣ್ಣ ಇನ್ನಿತರರು ಸಹಕರಿಸಿದರು.
ಇದೇ ಸಮಯದಲ್ಲಿ ಡಾಕ್ಟರ್ ರಂಜಿತ್ . ಮುಖಂಡರುಗಳಾದ ಗೋಪಾಲಕೃಷ್ಣ ,ವೆಂಕಟಾಚಲ . ಸೇರಿದಂತೆ ಹಲವಾರು ಹಾಜರಿದ್ದರು .




