
ಅಂಬಿಗರ ಚೌಡಯ್ಯ ಜಯಂತಿ ಆಚರಣೆ : ಪೂವ೯ಭಾವಿ ಸಭೆ

Ambigara Chowdaiah Jayanti Celebration: A gathering of ancestors

ಗಂಗಾವತಿ.. ನಗರದ ತಹಸೀಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ಗಂಗಾಮತ ಸಮಾಜದ ವತಿಯಿಂದ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿಯ ಪೂವ೯ಭಾವಿ ಸಭೆಯನ್ನು ತಹಸೀಲ್ದಾರ ಅವರ ನೇತೃತ್ವದಲ್ಲಿ ಸೋಮವಾರ ನಡೆಸಲಾಯಿತು.
ಗಂಗಾಮತ ಸಮಾಜದ ಅಧ್ಯಕ್ಷರಾದ ಹನುಮೇಶ ಬಟಾರಿ ಮಾತನಾಡಿ, ಪ್ರತಿ ವಷ೯ದಂತೆ ಈ ಬಾರಿಯು ಸಹ ಶ್ರೀ ಶರಣ ಅಂಬಿಗರ ಚೌಡಯ್ಯ ಅವರ ಜಯಂತಿಯನ್ನು ಜನೇವರಿ 21 ರಂದು ನಗರದ ಅಂಬಿಗರ ಚೌಡಯ್ಯ ಸಕ೯ಲನಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುವುದು. ಅದಕ್ಕಾಗಿಯೇ ಸಕಲ ಸಿದ್ಧತೆಯನ್ನು ಈಗಾಗಲೇ ಮಾಡಿಕೊಳ್ಳಲಾಗಿದ್ದು, ಜಯಂತಿಯ ದಿನದಂದು ಗಂಗಾವತಿಯ ಸುಣಗಾರ ಓಣಿಯಲ್ಲಿ ಇರುವ ಗಂಗಾ ದೇವಿಯ ದೇವಸ್ಥಾನದಿಂದ ಅಂಬಿಗರ ಚೌಡಯ್ಯ ಅವರ ಭಾವಚಿತ್ರ ಅಂಬಿಗರ ಚೌಡಯ್ಯ ಸಕ೯ಲವರೆಗೆ ಮೆರವಣಿಗೆಯನ್ನು ಮಾಡಲಾಗುವುದು. ನಂತರ ಸಕ೯ಲನಲ್ಲಿ ಚೌಡಯ್ಯನವರ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ, ಗೌರವಿಸಲಾಗುವುದು. ಪೂಜೆಯ ನಂತರ ವೇದಿಕೆ ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಿದ್ದು, ವೇದಿಕೆಯಲ್ಲಿ ಸಮಾಜದ ಹಿರಿಯರಿಗೆ, ಗಣ್ಯ ವ್ಯಕ್ತಿಗಳಿಗೆ ಗೌರವಿಸಲಾಗುವುದು. ಹಾಗಾಗಿ ತಾಲೂಕು ಆಡಳಿತದ ವತಿಯಿಂದ ಸಂಪೂಣ೯ ಸಹಕಾರ ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು.
ನಂತರ ತಹಸೀಲ್ದಾರ ಯು. ನಾಗರಾಜ ಮಾತನಾಡಿ, ಪ್ರತಿ ವಷ೯ದಂತೆ ಈ ಬಾರಿಯು ಸಹ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆಗಾಗಿ ಸಕ೯ಲನ್ನು ಹೂವುಗಳಿಂದ ಅಲಂಕಾರ ಮಾಡಲಾಗುವುದು, ವೇದಿಕೆ ಕಾಯ೯ಕ್ರಮಕ್ಕೆ ಅವಶ್ಯಕವಾಗಿರುವ ಸಹಕಾರವನ್ನು ತಾಲೂಕು ಆಡಳಿತದ ವತಿಯಿಂದ ನೀಡಲಾಗುವುದು. ಅದೇ ರೀತಿಯಾಗಿ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಜಯಂತಿಯನ್ನು ಆಚರಣೆ ಮಾಡಿಕೊಂಡು ಸಮಾಜದ ವತಿಯಿಂದ ಆಚರಣೆ ಮಾಡುವ ಕಾಯ೯ಕ್ರಮದಲ್ಲಿ ಕೂಡ ಭಾಗವಹಿಸಬೇಕು ಎಂದು ಹೇಳಿದರು.
ಗ್ರೇಡ 2 ತಹಸೀಲ್ದಾರ ಮಹಾಂತಗೌಡ ಪಾಟೀಲ್, ಶಿರಸ್ತೇದಾರ ರವಿಕುಮಾರ ನಾಯಕವಾಡಿ, ನಗರಸಭೆ ವ್ಯವಸ್ಥಾಪಕ ಷಣ್ಮುಖಪ್ಪ ಸಮಾಜದ ಮುಖಂಡರಾದ ಅಂಜಿನಪ್ಪ ಆನೆಗೊಂದಿ, ಬಿ.ನಾಗರಾಜ, ಕಾಪು ಹುಲುಗಪ್ಪ, ವೈ.ಬಿ. ಮನಗೂಳಿ, ಬೈರೇಶ್, ಕುಂಟೋಜಿ ರಾಮಣ್ಣ, ಶಿವಮೂತಿ೯, ಗೋನಾಳ್ ರಮೇಶ, ರಾಜೇಂದ್ರ ಬಟಾರಿ, ಚಂದ್ರಶೇಖರ ಮುಕ್ಕುಂದಿ ಹಾಗೂ ಇತರರಿದ್ದರು.
——–
ಗಂಗಾವತಿಯ ತಹಸೀಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ಗಂಗಾಮತ ಸಮಾಜದ ವತಿಯಿಂದ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿಯ ಪೂವ೯ಭಾವಿ ಸಭೆಯನ್ನು ತಹಸೀಲ್ದಾರ ಅವರ ನೇತೃತ್ವದಲ್ಲಿ ಸೋಮವಾರ ನಡೆಸಲಾಯಿತು.




