
ಹನೂರು ಪಟ್ಟಣದಲ್ಲಿ ಜರುಗುವ ಜನಸಂಪರ್ಕ ಸಭೆಯನ್ನು ಸದುಪಯೋಗ ಪಡಿಸಿಕೊಳ್ಳಲು ತಹಸಿಲ್ದಾರ್ ಶ್ರೀ ಚೈತ್ರ ಮನವಿ .

Tehsildar Shri Chaitra appeals to make good use of the public relations meeting being held in Hanur town.
ವರದಿ: ಬಂಗಾರಪ್ಪ .ಸಿ.
ಹನೂರು : ರಾಜ್ಯ ಸರ್ಕಾರದಿಂದ ನೊಂದವರ ಮನೆಭಾಗಿಲಿಗೆ ಸರ್ಕಾರವು ಹಲವು ಯೋಜನೆಯನ್ನು ಜಾರಿಗೆ ತಂದಿದ್ದು ಅದರ ಸದುಪಯೋಗ ಪಡಿಸಿಕೊಳ್ಳಲು ಸಾರ್ವಜನಿಕರಿಗೆ ಹನೂರು ತಹಸಿಲ್ದಾರ್ ಶ್ರೀ ಚೈತ್ರರವರು ಮನವಿ ಮಾಡಿದರು.
ಚಾಮರಾಜನಗರ ಲೋಕಸಭಾ ಸದಸ್ಯರಾದ ಎಮ್ ಸುನೀಲ್ ಬೋಸ್ ರವರ ಅಧ್ಯಕ್ಷತೆಯಲ್ಲಿ ದಿನಾಂಕ 12 /1/2026 ರಂದು ಸೋಮವಾರ ಮದ್ಯಾಹ್ನ ಎರಡು ಘಂಟೆಗೆ ಹನೂರು ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜನಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ,
ಈ ಸಭೆಗೆ ಸ್ಥಳೀಯ ಶಾಸಕರಾದ ಎಮ್ ಆರ್ ಮಂಜುನಾಥ್ ,ವಿಧಾನ ಪರಿಷತ್ ಸದಸ್ಯರು ,ಜಿಲ್ಲಾಧಿಕಾರಿಗಳು ,ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು,ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷರು ,ತಾಲ್ಲೂಕು ತಹಸಿಲ್ದಾರ್ ,ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿರುವರು ಸಾರ್ವಜನಿಕರು ,ರೈತರು ,ರೈತ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ಇನ್ನಿತರರು ಹೆಚ್ಚಿನ ಸಂಖ್ಯೆಯಲ್ಲಿ ಸಕಾಲದಲ್ಲಿ ಆಗಮಿಸಿ ತಮ್ಮ ಕುಂದುಕೊರತೆಗಳನ್ನು ಬಗೆಹರಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೋಳಿಸಲು ಹನೂರು ತಾಲ್ಲೂಕು ತಹಸಿಲ್ದಾರ್ ರವರಾದ ಶ್ರೀ ಚೈತ್ರ ರವರು ಕೋರಿರುತ್ತಾರೆ.




