
ವೀರಮಡಿವಾಳರ ಜಯಂತಿ ಹಾಗೂ ಜಿಲ್ಲಾ ಸಂಘದ ಸಮಿತಿ ರಚನೆಯ ಪೂರ್ವಭಾವಿ ಸಭೆ : ವಿಜಯಕುಮಾರ್

Preliminary meeting for the celebration of Veeramadiwala's birth anniversary and the formation of the district association committee: Vijayakumar.
ವರದಿ: ಬಂಗಾರಪ್ಪ .ಸಿ .
ಹನೂರು : ಚಾಮರಾಜನಗರ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ನೂತನ ಸಮಿತಿಯು ಆಯ್ಕೆಯಾಗುವುದರಿಂದ ಹನೂರು ತಾಲ್ಲೂಕಿನಾದ್ಯಂತ ಇರುವ ಸಮುದಾಯದ ಎಲ್ಲಾ ಪಕ್ಷದ ಮುಖಂಡರುಗಳ ಸಮ್ಮುಖದಲ್ಲಿ ಸಭೆಯನ್ನು ಇಂದು ಕರೆಯಲಾಗಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು ಎಂದು ಮುಖಂಡರಾದ ವಿಜಯ ಕುಮಾರ್ ತಿಳಿಸಿದರು.
ಪಟ್ಟಣದ ಆರ್ ಎಮ್ ಸಿ ಆವರಣದಲ್ಲಿ ನಡೆದ
ಹನೂರು ತಾಲ್ಲೂಕು ವೀರಮಡಿವಾಳರ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ ನಮ್ಮ ಜಿಲ್ಲಾ ಸಂಘದ ಅಧ್ಯಕ್ಷರಾದಿಯಾಗಿ ಎಲ್ಲಾ ಸದಸ್ಯರ ನೂತನ ಸಮಿತಿಯನ್ನು ಆಯ್ಕೆಮಾಡಬೇಕಿದೆ ಸದಸ್ಯರು ತಮ್ಮಾ ಅಭಿಪ್ರಾಯಗಳನ್ನು ನಮ್ಮ ಮುಖಂಡರುಗಳಾದ ಡಿ ಆರ್ ಮಹದೇಶ್ , ಅಜ್ಜಿಪುರ ಶಾಂತರಾಜು , ಹೆಸರು ಸೂಚಿಸುವುದರ ಜೊತೆಯಲ್ಲಿ ಹಲವು ಮುಖಂಡರುಗಳು ವಿಜಯಕುಮಾರ್ ಆದ ನನ್ನನ್ನು ಸಹ ತಾಲ್ಲೂಕು ಸಮಿತಿಯಿಂದ ಆಯ್ಕೆ ಮಾಡುವುದರ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಿರ ,ಹಾಗೂ ಮುಂದಿನ ತಿಂಗಳು 1/2/2026. ರಂದು ವೀರ ಮಡಿವಾಳ ಜಯಂತಿಯನ್ನು ಆಚರಿಸಲಾಗುತ್ತದೆ ಅದರ ಜೊತೆಯಲ್ಲಿ ನಮ್ಮ ಸಮುದಾಯ ಭವನದ ಗುದ್ದಲಿ ಪೂಜೆಯನ್ನು ಮಾಡುವ ಸಲುವಾಗಿ ಶಾಸಕರ ಅನುಮತಿಯಂತೆ ಅವರ ಬಿಡುವಿನ ದಿನಾಂಕವನ್ನು ಹೊಂದಿಸಿಕೊಂಡು ಕಾರ್ಯಕ್ರಮವನ್ನು ಮಾಡೋಣ ನಮ್ಮ ಜನಾಂಗದ ಎಲ್ಲಾ ಮುಖಂಡರು ಆಗಮಿಸಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಕ್ಕಾಗಿ ಎಲ್ಲಾರಿಗೂ ಧನ್ಯವಾದಗಳು ಎಂದು ತಿಳಿಸಿದರು.
ಇದೇ ಸಮಯದಲ್ಲಿ ಡಿ ಆರ್ ಮಹದೇಶ್ , ಶಾಂತರಾಜು , ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.




