
ಹಲ್ಲೆ ಆರೋಪಗಳು ಬಿಜೆಪಿಯ
ಹತಾಶೆಯ ಸ್ಥಿತಿ : ಜ್ಯೋತಿ ಬೇಸರ

Assault allegations are a sign of BJP's desperation: Jyoti is upset
ಕೊಪ್ಪಳ: ಬಳ್ಳಾರಿ, ಕೊಪ್ಪಳ, ಹುಬ್ಬಳ್ಳಿ ಗಲಾಟೆಯ
ಘಟನೆಗಳನ್ನು ರಾಜಕೀಯ ಲಾಭಕ್ಕೆ ಜಟಿಲಗೊಳಿಸಿ
ಹಲ್ಲೆಯ ಆರೋಪ ಮಾಡುತ್ತಿರುವದು ಬಿಜೆಪಿಯ
ಹತಾಶೆಯ ಮನಸ್ಥಿತಿಯ ಕಾರಣಕ್ಕೆ ಬಂದವುಗಳು ಎಂದು
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ.
ಗೊಂಡಬಾಳ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿಜೆಪಿಗೆ ಸದ್ಯ
ಮಾಡಲು ಕೆಲಸವಿಲ್ಲ, ದೇಶದಲ್ಲಿ ಈಗಾಗಲೇ ಬರೀ ಸುಳ್ಳು
ಹೇಳುವ ಮೂಲಕ, ಜನ ಮತ್ತು ವ್ಯವಸ್ಥೆಯನ್ನು
ಕಲುಷಿತಗೊಳಿಸಿ ಅಧಿಕಾರ ಪಡೆದುಕೊಂಡಿದ್ದು,
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಸಿದ್ದರಾಮಯ್ಯ ಹಾಗೂ
ಡಿಕೆ ಶಿವಕುಮಾರ ಅವರ ಸಮರ್ಥ ಆಡಳಿತ, ಐದು ಜನಪರ
ಬದುಕಿಗೆ ಆಸರೆಯಾದ ಗ್ಯಾರಂಟಿ ಯೋಜನೆಗಳ ಲಾಭ
ಜನರಿಗೆ ದಿನೇ ದಿನೇ ಅರ್ಥವಾಗುತ್ತಿರುವ ಹಿನ್ನೆಲೆಯಲ್ಲಿ
ಮುಂದೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ
ಹತಾಶೆಯಿಂದ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ
ಎಂದು ಹೇಳಿದ್ದಾರೆ.
ಹುಬ್ಬಳ್ಳಿಯ ಮಹಿಳೆಯ ಬಟ್ಟೆ ತೆಗೆಸಿದ ಪ್ರಕರಣ
ಕೇವಲ ಒಂದು ನಾಟಕ, ಆಕೆ ಅನಾಚಾರ ಮತ್ತು
ಹನಿಟ್ರಾö್ಯಪ್‌ಗಳಲ್ಲಿ ಸಿಕ್ಕಿ ಹಾಕಿಕೊಂಡ ಮತ್ತು
ಪುರುಷನೊಬ್ಬನಿಗೆ ಅನಾಮತ್ತಾಗಿ ತಳಿಸುತ್ತಿರುವ
ವಿಡಿಯೋ ವೈರಲ್ ಆದ ತಕ್ಷಣ ಕೇಂದ್ರ ಸಚಿವ ಪ್ರಹ್ಲಾದ
ಜೋಷಿ ಅವರು ಆ ಮಹಿಳೆ ಮೂಲತಃ ಕಾಂಗ್ರೆಸ್‌ನವರು
ಎಂದು ತಿರುಗಿ ಬಿದ್ದಿದ್ದರೆ, ಇತ್ತ ಬಿಜೆಪಿ ಮಹಿಳಾ ಮೋರ್ಛಾ
ರಾಜ್ಯದಾದ್ಯಂತ ಮಹಿಳಾ ದೌರ್ಜನ್ಯ ಎನ್ನುತ್ತಿದೆ. ಅನಾಚಾರದ
ಹಿನ್ನೆಲೆ ಇರುವ ಇಂತಹ ಮಹಿಳೆಯರಿಂದ ಕಾಂಗ್ರೆಸ್
ಪ್ರತಿಷ್ಠೆ ಕೆಡಿಸಲು ಬಿಜೆಪಿ ಹವಣಿಸುತ್ತಿದೆ.
ಇನ್ನು ಕೊಪ್ಪಳದ ರೈಲ್ವೆ ಕಾರ್ಯಕ್ರಮದಲ್ಲಿ
ಕೇಂದ್ರ ಸಚಿವ ಸೋಮಣ್ಣ ಅವರ ಮೇಲೆ ಕಾಂಗ್ರೆಸ್
ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ, ಇದನ್ನು ಸಚಿವ ಶಿವರಾಜ
ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ ಮತ್ತು ಶಾಸಕ
ರಾಘವೇಂದ್ರ ಹಿಟ್ನಾಳ ಅವರೇ ಮಾಡಿಸಿದ್ದಾರೆ ಎಂದು
ಬೆಂಗಳೂರು ವರೆಗೆ ಹೋರಾಟಕ್ಕೆ ಇಳಿದಿದ್ದಾರೆ. ಇದೆ¯ಂಟಟ
ಅತ್ಯAತ ಕ್ಷÄಲ್ಲಕ ಮತ್ತು ಅಧಿಕಾರದ ಹಪಾಹಪಿತನಕ್ಕೆ
ಸಾಕ್ಷಿಯಾಗಿದೆ. ಸಚಿವರು, ಸಂಸದರು ಮತ್ತು ಶಾಸಕರು
ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು
ಮಾಡುತ್ತ ಜನಪ್ರಿಯರಾಗಿದ್ದು, ಇಲ್ಲದ ವಿಷಯ ತಂದು
ಅವರ ಹೆಸರು ಕೆಡಿಸಲು ಇಂತಹ ಪ್ರಯೋಗ
ಮಾಡುತ್ತಿದ್ದಾರೆ, ಅವರಿಗೆ ಮಾಡಲು ಸಾಕಷ್ಟು ಕೆಲಸಗಳಿವೆ
ಇಂತಹ ಕೆಲಸ ಮಾಡುವುದೇ ಬಿಜೆಪಿಯ ಹಳೆಯ ಚಾಳಿ.
ಶಿಷ್ಟಾಚಾರ ಉಲ್ಲಂಘನೆ ಆಗಿದ್ದಕ್ಕೆ ಸಹಜವಾಗಿ
ಕಾರ್ಯಕರ್ತರಿಗೆ ನೋವಾಗಿ ಕೂಗಾಡಿದ್ದಕ್ಕೆ ಬಡಿದೇ ಬಿಟ್ಟರು
ಎಂದು ಹೇಳುವದು ಸರಿಯಲ್ಲ ಎಂದಿದ್ದಾರೆ.
ಇನ್ನು ಬಳ್ಳಾರಿಯಲ್ಲಿ ಜನಾರ್ಧನರಡ್ಡಿ ಅವರು
ಕಾಲಿಡುತ್ತಲೇ ಜಗಳಗಳು, ಗಲಾಟೆಗಳು
ಪ್ರಾರಂಭವಾಗಿದ್ದು, ಸದಾ ಕಾಂಟ್ರವರ್ಸಿ ಮತ್ತು ತಮಗೆ
ಸಂಬAಧವೇ ಇಲ್ಲದ ಮಾತುಗಳಿಂದ ಪ್ರಚಾರದಲ್ಲಿ ಇರಲು
ಪ್ರಯತ್ನ ಮಾಡುವ ಜನಾರ್ಧನರಡ್ಡಿಯವರಿಂದಲೇ ಬಳ್ಳಾರಿ
ಮತ್ತು ಕೊಪ್ಪಳದಲ್ಲಿ ಶಾಂತಿ ಭಂಗವಾಗುತ್ತಿವೆ,
ಇವರನ್ನು ಕಾನೂನು ಮೂಲಕ ಹದ್ದುಬಸ್ತಿನಲ್ಲಿ
ಇಡಬೇಕು ಎಂದು ಜ್ಯೋತಿ ಒತ್ತಾಯಿಸಿದ್ದಾರೆ.




