ಉತ್ತಮ ಆರೋಗ್ಯಕ್ಕಾಗಿ ಕುಸುಬೆ ಎಣ್ಣೆಕಾಳು ಬೆಳೆ: ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಪ್ರಾತ್ಯಕ್ಷಿಕೆ
Safflower oilseed crop for good health: Demonstration from Koppal Agricultural Extension Education Center
ಕೊಪ್ಪಳ ಜನವರಿ 08 (ಕರ್ನಾಟಕ ವಾರ್ತೆ): ಉತ್ತಮ ಆರೋಗ್ಯಕ್ಕಾಗಿ ಕುಸುಬೆ ಎಣ್ಣೆಕಾಳು ಬೆಳೆಯಾಗಿದ್ದು, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಪ್ರಾತ್ಯಕ್ಷಿಕೆಗಳ ಮೂಲಕ ರೈತರಿಗೆ ಅರಿವು ಮೂಡಿಸಲಾಗಿದೆ.
ಕುಸುಬೆ ನಮ್ಮ ರಾಜ್ಯದ ಒಂದು ಪ್ರಮುಖ ಎಣ್ಣೆ ಕಾಳು ಬೆಳೆಯಾಗಿದೆ. ನೆಲಗಡಲೆ ಹಾಗೂ ಸೂರ್ಯಕಾಂತಿ ನಂತರ ಹಿಂಗಾರಿನಲ್ಲಿ ಬರುವ ಮುಖ್ಯ ಎಣ್ಣೆಕಾಳು ಬೆಳೆ ಎಂದರೆ ಕುಸುಬೆ. ಈ ಬೆಳೆಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ಆಳವಾದ ಕಪ್ಪುಮಣ್ಣಿನಲ್ಲಿ ಬೆಳೆಯಲು ಸೂಕ್ತವಾಗಿದ್ದು, ಕಡಿಮೆ ಅವಧಿಯಲ್ಲಿ ಉತ್ತಮ ಆದಾಯ ಕೊಡುವ ಬೆಳೆಯಾಗಿದೆ.
ಗುಜರಾತ, ಮಹಾರಾಷ್ಟ್ರ, ಬಿಹಾರ ರಾಜ್ಯಗಳಲ್ಲಿ ಕರಾಡಿ ಎಂಬ ಹೆಸರಿನಲ್ಲಿ ಈ ಬೆಳೆ ಖ್ಯಾತಿ ಹೊಂದಿದೆ. ಸೂರ್ಯಕಾಂತಿ ಎಣ್ಣೆಕ್ಕಿಂತಲೂ ಆರೋಗ್ಯಕ್ಕೆ ಅದರಲ್ಲೂ, ಹೃದಯ ಸಂಬಂಧಿ ಆರೋಗ್ಯಕ್ಕೆ ಕುಸುಬೆ ಎಣ್ಣೆ ಅತ್ಯುತ್ತಮವಾಗಿದೆ. ಕುಸುಬೆ ಹಿಂಡಿಯುಕೂಡ ಜಾನುವಾರುಗಳಿಗೆ ಪ್ರಯೋಜನಕಾರಿಯಾಗಿದೆ. ಮಳೆಯ ಆಶ್ರಯದಲ್ಲಿ ಉತ್ತಮವಾಗಿ ಬರುವ ಈ ಬೆಳೆ ನೀರಾವರಿ ಇದ್ದಲ್ಲಿ ಉತ್ತಮ ನಿರ್ವಹಣೆಯೊಂದಿಗೆ ಹೆಚ್ಚಿನ ಲಾಭಕೊಡಬಲ್ಲದು. ಮಳೆ ಆಶ್ರಯದಲ್ಲಿ ಕಡಿಮೆ ಗೊಬ್ಬರಗಳ ಬಳಕೆಯಲ್ಲಿ, ಕಡಿಮೆ ಖರ್ಚಿನಲ್ಲಿ ಈ ಬೆಳೆಯನ್ನು ಬೆಳೆಯಬಹುದಾಗಿದೆ. ಕೊಪ್ಪಳ ಜಿಲ್ಲೆಯಾದ್ಯಂತ ಸುಮಾರು 3000 ಎಕರೆ ಪ್ರದೇಶದಲ್ಲಿ ಕುಸುಬೆಯನ್ನು ಬೆಳೆಯಲಾಗುತ್ತಿದ್ದು, ಕುಕನೂರು ತಾಲೂಕಿನಲ್ಲಿ ಸುಮಾರು 1000 ಎಕರೆಯಷ್ಟು ಪ್ರದೇಶದಲ್ಲಿ ಎರೆ ಭೂಮಿಯಲ್ಲಿ ಬೆಳೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಿಂದ ಆಯ್ದ ರೈತರಿಗೆ ಕುಸುಬೆ ಬೆಳೆ (ತಳಿ :ಐ.ಎಸ್.ಎಫ್. 764) ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಎರೆಹಂಚಿನಾಳ ಹಾಗೂ ಮಾದಿನೂರು ಗ್ರಾಮಗಳಲ್ಲಿ ಹಮ್ಮಿಕೊಳ್ಳಾಗಿದ್ದು, ರೈತರಿಂದ ಉತ್ತಮ ಪ್ರತಿಕ್ರಿಯೆ ಬಂದಿರುತ್ತದೆ.
ಎಕರೆಗೆ ಬೀಜ ಪ್ರಮಾಣ 3 ರಿಂದ 4 ಕಿಲೋ ಗ್ರಾಂ. ಇದ್ದು, ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 15ನೇ ತಾರೀಖಿನವರೆಗೂ ಬೀಜ ಬಿತ್ತನೆ ಮಾಡುವುದು ಸೂಕ್ತ. ಎಕರೆಗೆ 16 ಕೆ.ಜಿ. ಸಾರಜನಕ, 16 ಕೆ.ಜಿ. ರಂಜಕ ಹಾಗೂ 5 ಕೆ.ಜಿ. ಪೊಟ್ಯಾಶ್ ರಾಸಾಯನಿಕ ಗೊಬ್ಬರಗಳ ಜೊತೆಗೆ 10 ಕೆ.ಜಿ. ಗಂಧಕ ಮತ್ತು 6 ಕೇ.ಜಿ. ಎಷ್ಟು ಸತು ಒದಗಿಸಿದರೆ ಉತ್ತಮ ಫಸಲು ಪಡೆಯುವ ಸಾಧ್ಯತೆ ಇರುತ್ತದೆ. ಗಂಧಕವನ್ನು ಜಿಪ್ಸಂ ರೂಪದಲ್ಲಿ ಕಡಿಮೆ ಖರ್ಚಿನಲ್ಲಿ ಕೊಡಬಹುದಾಗಿದೆ. ಬೀಜೋಪಚಾರವಾಗಿ ಒಂದು ಎಕರೆ ಬಿತ್ತನೆ ಬೀಜಕ್ಕೆ 200 ಗ್ರಾಂ. ಅಜೋಸ್ಪಿರಿಲಂ ಬಳಸುವುದು ಸೂಕ್ತ. ಇದಕ್ಕೆ ಪೂರ್ವದಲ್ಲಿ ಬೀಜಗಳನ್ನು ಶೇಕಡ 2ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ 12 ಗಂಟೆಗಳ ಕಾಲ ನೆನೆಸಿ ಬಿತ್ತನೆ ಮಾಡುವುದು ಸೂಕ್ತ. ಸಾಲಿನಿಂದ ಸಾಲಿಗೆ 45 ಸೆಂಟಿಮೀಟರ್ ಮತ್ತು ಬೀಜದಿಂದ ಬೀಜಕ್ಕೆ 30 ಸೆಂಟಿಮೀಟರ್ ಅಂತರದಲ್ಲಿ ಜೋಡು ಸಾಲು ಮಾಡಿ ಬಿತ್ತುವುದು ಉತ್ತಮ. ತಳಿಗಳನ್ನು ಆಧರಿಸಿ 120 ರಿಂದ 130 ದಿನಗಳಲ್ಲಿ ಕಟಾವಿಗೆ ಬರುವ ಕುಸುಬೆ ಬೆಳೆ ಒಂದು ಲಾಭದಾಯಕ ಮಳೆಯಾಶ್ರಿತ ಬೆಳೆಯಾಗಿದೆ. ಎಕರೆಗೆ 3 ರಿಂದ 5 ಕ್ವಿಂಟಲ್ ಇಳುವರಿ ಪಡೆಯಬಹುದಾಗಿದ್ದು, ಸದ್ಯದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ಗೆ 8600 ರೂ. ಇರುತ್ತದೆ.
*ಪ್ರಮುಖ ಕೀಟಗಳು:* ಕರಿ ಹೇನು- ಇದರ ಹತೋಟಿಗಾಗಿ ಡೈಮೆಥೊಯೇಟ್ 30 ಈ.ಸಿ ಎನ್ನುವ ಕೀಟನಾಶಕವನ್ನು 1.7 ಮಿ.ಲಿ. ಪ್ರತಿ ಲೀಟರ್ ನೀರಿಗೆ ಬಳಸಿ ಸಿಂಪಡಿಸಬೇಕು. ಎಲೆ ತಿನ್ನುವ ಕೀಟ ಕಾಣಿಸಿದಲ್ಲಿ ಕ್ವಿನಾಲ್ಫಾಸ್ 25 ಇ.ಸಿ. ಅಥವಾ ಇಮಾಮ್ಯಾಕ್ಟೀನ್ ಬೆಂಝೋಯೇಟ್ ಎನ್ನುವ ಕೀಟನಾಶಕವನ್ನು 0.40 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಪ್ರಮುಖ ರೋಗಗಳಾದ ಎಲೆ ಮಚ್ಚೆ ಮತ್ತು ಎಲೆ ಚುಕ್ಕಿ ರೋಗಗಳು ಕಂಡುಬಂದಲ್ಲಿ ಮ್ಯಾಂಕೋಜೆಮ್ 75 ಡಬ್ಲೂ. ಪಿ. 2 ಗ್ರಾಂಅಥವಾ ಸಾಫ್ ಎನ್ನುವ ಸಂಯುಕ್ತ ಶಿಲೀಂದ್ರ ನಾಶಕವನ್ನು 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ನಿರ್ವಹಣೆ ಇಲ್ಲದ ಈ ಬೆಳೆ ಬೇಸಿಗೆ ಹಂಗಾಮಿನಲ್ಲಿ, ಮಳೆಯಾಶ್ರಯದಲ್ಲಿ ಉತ್ತಮ ಲಾಭದಾಯಕ ಬೆಳೆಯಾಗಿದ್ದು, ರೈತರು ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳಾದ ವಿಸ್ತರಣಾ ಮುಂದಾಳು ಡಾ. ಎಂ.ವಿ.ರವಿ ಮೊ.ನಂ. 9480247745 ಮತ್ತು ಸಹಾಯಕ ಪ್ರಾಧ್ಯಾಪಕ ವಾಮನಮೂರ್ತಿ ಮೊ.ನಂ. 8217696837, ಇವರನ್ನು ಸಂಪರ್ಕಿಸಬಹುದು.

ಜಾಹೀರಾತು