ಹೂಲಗೇರಿಯಲ್ಲಿ ಸಿಡಿಮದ್ದು ಸಂಗ್ರಹಣೆಗಾಗಿ ಗೋಡಾನ್ ನಿರ್ಮಾಣಕ್ಕೆ ಆಕ್ಷೇಪಣೆ ಆಹ್ವಾನ
Objections invited to construction of godown for storage of explosives in Hoolageriಕೊಪ್ಪಳ ಜನವರಿ 08 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹೂಲಗೇರಿ ಗ್ರಾಮದ ಸರ್ವೆ ನಂ. 75/*/12 ರಲ್ಲಿ ಸಿಡಿಮದ್ದು (ಸ್ಫೋಟಕ) ಸಂಗ್ರಹಣೆಗಾಗಿ ಗೋಡಾನ್ ನಿರ್ಮಾಣಕ್ಕೆ ಆಕ್ಷೇಪಣೆ ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹೂಲಗೇರಿ ಗ್ರಾಮದ ಸರ್ವೆ ನಂ. 75/*/12ರ ಜಮೀನಿನ ಭೂಮಾಲೀಕರಾದ ಶಶಿಧರ್ ತಂದೆ ಚನ್ನಪ್ಪ ಕುಂಟನಗೌಡ ಸಾ: ಹೂಲಗೇರಾ ತಾ: ಕುಷ್ಟಗಿ ಜಿ. ಕೊಪ್ಪಳ ಇವರಿಂದ ಸಾಯಬಗೌಡ ತಂದೆ ಮಂಜುನಾಥ ಹಟ್ಟಿ, M/s Amit Enterprises ಸಾ: ಗುಬ್ಬೇವಾಡ ತಾ: ಸಿಂಧೋಗಿ, ಜಿ: ವಿಜಯಪುರ ಇವರು, ಈ ಜಮೀನನ್ನು ಖರೀದಿಸಲು ದಿನಾಂಕ: 28/07/2025 ರ ಅಗ್ರಿಮೆಂಟ್ (ಒಡಂಬಡಿಕೆ)ಯನ್ನು ಮಾಡಿಕೊಂಡಿದ್ದು, ಈ ಸರ್ವೆ ನಂ. 75/*/12 ರ ಜಮೀನಿನಲ್ಲಿ ಸಿಡಿಮದ್ದು (ಸ್ಪೋಟಕ) ಸಂಗ್ರಹ ಮಾಡುವ ಸಲುವಾಗಿ ಗೋಡಾನ್ ನಿರ್ಮಿಸಲು ನಿರಾಕ್ಷೇಪಣಾ ಪತ್ರವನ್ನು ನೀಡಲು ಕೋರಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.
ಜಾಹೀರಾತು

ಅದರಂತೆ Explosive Rules 2008 U/S 103 ರನ್ವಯ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹೂಲಗೇರಿ ಗ್ರಾಮದ ಸರ್ವೆ ನಂ.75/*/12 ರಲ್ಲಿ M/s Amit Enterprises ವಿಜಯಪುರ ಇವರ ವತಿಯಿಂದ ಸಿಡಿಮದ್ದು (ಸ್ಫೋಟಕ) ಸಂಗ್ರಹ ಮಾಡುವ ಸಲುವಾಗಿ ಗೋಡಾನ್ ನಿರ್ಮಿಸಲು ಸಾರ್ವಜನಿಕರಿಂದ ಯಾವುದಾದರೂ ಆಕ್ಷೇಪಣೆಗಳಿದ್ದರೆ ತಮ್ಮ ಲಿಖಿತ ಆಕ್ಷೇಪಣೆಯನ್ನು ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ 30 ದಿನಗಳೊಳಗಾಗಿ ಸಲ್ಲಿಸಲು ಸಾರ್ವಜನಿಕರಿಗೆ ಈ ಮೂಲಕ ತಿಳಿಸಲಾಗಿದೆ.
ನಿಗದಿತ ಅವಧಿಯಲ್ಲಿ ಆಕ್ಷೇಪಣೆಗಳು ಸ್ವೀಕೃತವಾಗದಿದ್ದಲ್ಲಿ ಕುಷ್ಟಗಿ ತಾಲ್ಲೂಕಿನ ಹೂಲಗೇರಿ ಗ್ರಾಮದ ಸರ್ವೆ ನಂ. 75/*/12 ರ ಜಮೀನಿನಲ್ಲಿ ಸಿಡಿಮದ್ದು (ಸ್ಫೋಟಕ) ಸಂಗ್ರಹ ಮಾಡುವ ಸಲುವಾಗಿ ಗೋಡಾನ್ ನಿರ್ಮಿಸಲು ನಿರಾಕ್ಷೇಪಣಾ ಪತ್ರವನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.




