
ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಬಿ,ಕೃಷ್ಣಪ್ಪ ಬಣದಿಂದ ಹಾಸನದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ

Karnataka Dalit Sangharsh Samiti Swabhimani Prof. B. Krishnappa faction holds state-level symposium in Hassan
ಕೊಪ್ಪಳ:ಜನವರಿ 9 ರಂದು ರಾಜ್ಯಮಟ್ಟದ ವಿಚಾರ ಸಂಕೀರ್ಣವನ್ನು ಹಾಸನದಲ್ಲಿ ಡಾ.ಬಿ,ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಸ್ವಾಭಿಮಾನಿ ಪ್ರೊ.ಬಿ,ಕೃಷ್ಣಪ್ಪ ಬಣ ಜಿಲ್ಲಾಧ್ಯಕ್ಷ ಪರಶುರಾಮ ಕೆರೆಹಳ್ಳಿ ರವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಶತಮಾನಗಳಿಂದ ಶೋಷಣೆ ದೌರ್ಜನ್ಯಕ್ಕೆ ಒಳಗಾದ ಅಸ್ಪೃಶ್ಯರಿಗೆ ವಿದ್ಯೆ, ಸಂಪತ್ತು, ಅಧಿಕಾರ ನಿರಾಕರಿಸಿ ಅಮಾನುಷವಾಗಿ ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಂಡ ಮನುವಾದಿಗಳಿಗೆ ಸೆಡ್ಡು ಹೊಡೆದು ಪ್ರಬಲ ಹೋರಾಟ ನಡೆಸಿ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಶೋಷಿತರಿಗೆ ಮೀಸಲಾತಿ ಅಳವಡಿಸಿರು ವರು. ಇದರಿಂದಾಗಿ ಅಸ್ಪೃಶ್ಯರಿಗೆ ಶಿಕ್ಷಣ, ಉದ್ಯೋಗ, ರಾಜಕೀಯ, ಅಧಿಕಾರ ದೊರೆಯುವಂತಾಗಿ ಅವರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಯಿತು.
ಇದನ್ನು ಸಹಿಸದ ಮನುವಾದಿಗಳು
ಎಸ್.ಸಿ/ಎಸ್.ಟಿ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದವರಿಗೆ, ಮೀಸಲಾತಿ
ಲಭಿಸದಂತೆ ಸರ್ಕಾರಗಳಿಗೆ ಆಗ್ರಹಿಸಿ
ಮನುವಾದಿಗಳು ಪಿತೂರಿ ನಡೆಸುತ್ತಿದ್ದಾರೆ. ಎಂದು ಪರಶುರಾಮ ಕೆರೆಹಳ್ಳಿ ಹೇಳಿದರು.
ನಂತರ ಮಾತನಾಡಿದ, ಸಂಜಯ ದಾಸ ಕೌಜಗೇರಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗಿ ಕ್ಷೇತ್ರದಲ್ಲಿ ಕೂಡ ಮೀಸಲಾತಿ ಜಾರಿ ಮಾಡಬೇಕಾದ ಅನಿವಾರ್ಯತೆ ಇದೆ. ಸ್ವಾತಂತ್ರ್ಯ ನಂತರ ಇಲ್ಲಿಯವರೆಗೂ ಆಡಳಿತ ನಡೆಸಿದ ಎಲ್ಲಾ ಪಕ್ಷದ ಸರ್ಕಾರಗಳು ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿಯನ್ನು ಜಾರಿ ಮಾಡ ಬೇಕೆಂದು ಹೇಳಿದರು.
ನಂತರ ಮಾತನಾಡಿದ ಕ.ಕ.ವಿಭಾಗೀಯ ಸಂಚಾಲಕರಾದ ಹನುಮಂತಪ್ಪ ನಾಯಕ್ ವಡ್ಡರಹಟ್ಟಿ ಮಾತನಾಡಿ ಡಾ.ಬಿ,ಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ಕೊಟ್ಟಿದ್ದಾರೆ ಆ ಸಂವಿಧಾನವನ್ನ ನಾವು ಉಳಿಸೋಣ, ರಕ್ಷಣೆ ಮಾಡೋಣ, ಅನ್ಯಾಯಕ್ಕೆ ಒಳಗಾದ ದಲಿತ ಜನರಿಗೆ ನ್ಯಾಯವನ್ನು ಕೊಡಿಸೋಣ ಸಂಘಟನೆಯನ್ನ ಬಲಪಡಿಸೋಣ ಎಂದು ಹೇಳಿದರು. ಮಾರುತಿ ಪೂಜಾರ್ ಬಿಕ್ಕನಹಳ್ಳಿ ಮಾತನಾಡಿ, ಎಸ್ ಸಿ ಎಸ್ ಟಿ ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಯುವಕರಲ್ಲಿ ಮೊದಲು ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣ, ಸಂಘಟನೆ ಹೋರಾಟ ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ನಿರುದ್ಯೋಗಗಳು, ಉದ್ಯೋಗವಂತರಾಗಬೇಕು, ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಸ್ವಾಭಿಮಾನಿ ಪ್ರೊ. ಬಿ,ಕೃಷ್ಣಪ್ಪ ಬಣ ಈ ಎಲ್ಲಾ ಸಂಘಟನೆಯ ಜಿಲ್ಲಾ ಮತ್ತು ತಾಲೂಕ, ಹೋಬಳಿ, ಗ್ರಾಮ ಘಟಕ ಪದಾಧಿಕಾರಿಗಳು ಹಾಗೂ ರಾಜ್ಯ ಸಮಿತಿ ಪದಾಧಿಕಾರಿಗಳು, ಕೇಂದ್ರ ಮತ್ತು ರಾಜ್ಯ
ಸರ್ಕಾರಗಳಿಗೆ ಒತ್ತಾಯಿಸಲು ದಿನಾಂಕ:- 9/01/2026 ರಂದು ಹಾಸನದಲ್ಲಿ ರಾಜ್ಯಮಟ್ಟದ ವಿಚಾರ ಸಂಕೀರ್ಣವನ್ನು ಡಾ. ಬಿ,ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂಧರ್ಭದಲ್ಲಿ ಹನಮಂತಪ್ಪ
ನಾಯಕ ಗಂಗಾವತಿ ಕ.ಕ.ವಿಭಾಗೀಯ ಸಂಚಾಲಕರು, ನೂರ ಅಹ್ಮದ್ ಸಂತ್ರಾಸ್ ಕನಕಗಿರಿ ಸಂ.ಸಂಚಾಲಕರು. ಅಹ್ಮದ್ ಮೇಸ್ತ್ರಿ ಕನಕಗಿರಿ ಸಂ.ಸಂಚಾಲಕರು. ಅಂದಪ್ಪ ಅಡಪದ್ ತಾಲೂಕ ಸಂ.ಸಂಚಾಲಕರು. ಸಂಜಯ್ ದಾಸ್ ಕೌಜಗೇರಿ ಅಲೆಮಾರಿಯ ಸಂಘಟನೆ ಜಿಲ್ಲಾಧ್ಯಕ್ಷರು, ನಾಗರಾಜ್ ಹೊನ್ನಕೇರಿ ದಲಿತರಕ್ಷಣಾ ವೇದಿಕೆ ಅಧ್ಯಕ್ಷರು, ಲಲಿತಾ ಮಜ್ಗಿ ಗಿಣಿಗೇರಿ, ಸಂಕಾರ್ಯದರ್ಶಿ, ಗಾಳೇಶ ದೇವರಮನಿ, ಮಾರುತಿ ಪೂಜಾರ ಬಿಕ್ಕನಹಳ್ಳಿ , ರಾಮಲಿಂಗ ಶಾಸ್ತ್ರೀ ಕಣಕಣಕಲ್, ಗಾಯಿತ್ರಿ ಸಿದ್ದಪ್ಪ ಹೊಸಮನಿ,ಗವಿಸಿದ್ದಪ್ಪ ಬೇದವಟ್ಟಿ, ಪರಸಪ್ಪ ಕಲಕೇರಿ, ಮಹೇಶ್ ಮಠದ ಬಿಸರಹಳ್ಳಿ, ಕನಕಪ್ಪ ವನಬಳ್ಳಾರಿ, ಗವಿ ಪೂಜಾರ ಬಿಸರಹಳ್ಳಿ , ಇನ್ನಿತರರು ಉಪಸ್ಥಿ ತರಿದ್ದರು.




