
Gangavathi: Father and daughter die in bus collision.ಗಂಗಾವತಿ: ಬಸ್ ಡಿಕ್ಕಿ ತಂದೆ ಮಗಳ ಧಾರುಣ

ಸಾವು.

ಗಂಗಾವತಿ ಜ 08 : ಸಾಯಂಕಾಲ ಸುಮಾರು 5 ಗಂಟೆಗೆ ರಾಯಚೂರು ರಸ್ತೆಯ ಡಣಾಪುರ ಕ್ರಾಸ್ ತಿರುವಿನಲ್ಲಿ ವಯಕ್ತಿಕ ಕಾರ್ಯ ನಿಮಿತ್ಯ ಗಂಗಾವತಿಗೆ ಬಂದು ಮರಳಿ ತಮ್ಮ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ತಂದೆ ಮಗಳು ಕಾರಟಗಿ ಕಡೆಯಿಂದ ಬಂದ ಸರ್ಕಾರಿ ಬಸ್ಸು ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ರಾಯಚೂರು ರಸ್ತೆಯ ಡಣಾಪುರ ಕ್ರಾಸ್ ತಿರುವಿನಲ್ಲಿ ಇಂದು ಸಾಯಂಕಾಲ 5 ಗಂಟೆಗೆ ಈಘಟನೆ ನಡೆದಿದೆ.

ಬಡ ಕುಟುಂಬದ ಗಾರೆ ಕೆಲಸ ಮಾಡುತ್ತಿದ್ದ ಖಾಜಾಸಾಬ (55) ಮತ್ತು ಮಗಳು 8 ನೇ ತರಗತಿ ಓದುತ್ತಿದ್ದ ಆಸೀನ್ ಖಾಜಾಸಾಬ (14) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಮೃತರು ಗಂಗಾವತಿ ತಾಲೂಕಿನ ಡಾಣಾಪುರ ಗ್ರಾಮದವರಾಗಿದ್ದು ಘಟನೆಯಿಂದಾಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ವರಸಿದ್ದಿ ಹಾಗೂ ಗ್ರಾಮೀಣ ಠಾಣೆ ಪಿಐ ರಂಗಪ್ಪ ದೊಡ್ಡಮನಿ ಭೇಟಿನೀಡಿ ತನಿಖೆ ಕೈಗೊಂಡಿದ್ದಾರೆ.

