
ವಿಶೇಷ ಚೇತನರ ಹಿತ ಕಾಯಲು ಬದ್ಧ:ಶರಣಗೌಡ ಪಾಟೀಲ್

Committed to safeguarding the welfare of the differently-abled: Sharanagouda Patil
ಕುಷ್ಟಗಿ : ತಾಲೂಕಿನ ಕಿಲಾರಹಟ್ಟಿ ಗ್ರಾಮ ಪಂಚಾಯಿತಿ ಯಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ ನಡೆಯಿತು.
ಜ. 8 ಗುರುವಾರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು.
ಸಭೆ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ಶರಣಗಗೌಡ ಪೋಲೀಸ ಪಾಟೀಲ ಮಾತನಾಡಿ ನಮ್ಮ ಅಧಿಕಾರ ಅವಧಿ ಇನ್ನೇನು ತಿಂಗಳಾಂತ್ಯದಲ್ಲಿ ಮುಗಿಯಬಹುದು, ಆದರೆ ವಿಶೇಷ ಚೇತನರ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಸದಾಕಾಲ ಬದ್ದ ಎಂದರು.
ಸಭೆಯ ಮುಖ್ಯ ಅತಿಥಿಯಾಗಿ ಜುಮಲಾಪುರ ಗ್ರಾಮ ಪಂಚಾಯತ್ ಗ್ರಾಮೀಣ ಅಂಗವಿಕಲ ಪುನರ್ವಸತಿ ಕಾರ್ಯಕರ್ತ ಆದಪ್ಪ ಮಾಲಿಪಾಟೀಲ ಮಾತನಾಡಿ ವಿಶೇಷ ಚೇತನರ ಅಧಿನಿಯಮ 2016 ಕುರಿತು ವಿಸ್ತೃತವಾಗಿ ಹೇಳಿದರು ಅಲ್ಲದೇ, ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಶೇಕಡಾ 5% ಅನುದಾನ ಅಥವಾ ಸೌಲಭ್ಯ ಪಡೆಯಲು ಸಾಂಘಿಕವಾಗಿ ಸಮನ್ವಯತೆಯಿಂದ ಪಡೆದುಕೊಳ್ಳಬೇಕು ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶಂಕ್ರಪ್ಪ ರವರು ಮಾತನಾಡಿ ತಮಗಾಗಿ ನಮ್ಮ ಗ್ರಾಮ ಪಂಚಾಯತ್ ನಲ್ಲಿ ಶೇಕಡಾ 5% ಅನುದಾನ 1 ಲಕ್ಷ ಐದು ಸಾವಿರ ಇದ್ದು, ತಮ್ಮೆಲ್ಲರ ಅಭಿಪ್ರಾಯದಂತೆ ಅನುದಾನ ಬಳಸಲು ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗುರಪ್ಪ ನಾಯಕ ರವರು ವಿ ಆರ್ ಡಬ್ಲ್ಯೂ ಭವನ ನಿರ್ಮಾಣ ಮಾಡುವುದಕ್ಕೆ ನಿಮ್ಮ ಒಪ್ಪಿಗೆ ಇದೆಯೇ ಎಂದರು ಅದಕ್ಕೆ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರೂ ಸಮ್ಮತಿ ಸೂಚಿಸಿದರು.
ಕಿಲಾರಹಟ್ಟಿ ಗ್ರಾಮ ಪಂಚಾಯತ್
ಗ್ರಾಮೀಣ ಅಂಗವಿಕಲ ಪುನರ್ವಸತಿ ಕಾರ್ಯಕರ್ತ ರಾಯನಗೌಡ ಪಾಟೀಲ್ ವಂದನಾರ್ಪಣೆ ಮಾಡಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಹನಮಂತ ಮಡ್ಡೇರ,
ಕರವಸೂಲಿಗಾರ ಚತ್ರಪ್ಪ ಕಾಟಿಗಲ್, ಗ್ರಂಥಾಲಯ ಮೇಲ್ವಿಚಾರಕ ಹನಮಗೌಡ, ವಿಶೇಷ ಚೇತನರಾದ ಹನಮಂತ ರಾಂಪುರ, ದುರಗಪ್ಪ ಕಿಲಾರಹಟ್ಟಿ, ಹನಮೇಶ ನಾರಿನಾಳ, ಭಾಗ್ಯ ಶ್ರೀ ಕಳಮಳ್ಳಿ ಸೇರಿದಂತೆ ಇತರರು ಇದ್ದರು.
08-ಕೆಎಸಟಿ-1
ಫೋಟೋ: ಕಿಲಾರಹಟ್ಟಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ವಿಶೇಷ ಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ ಆಯೋಜಿಸಲಾಗಿತ್ತು.




