
ಬೆಂಗಳೂರು ನಗರ ಜಿಲ್ಲಾ ಡಯಟ್ ಗೆ ಪ್ರಶಿಕ್ಷಾಣಾರ್ಥಿಗಳು ಭೇಟಿ
ಜಾಹೀರಾತು

Trainees visit Bangalore City District Diet
ಬೆಂಗಳೂರು: ಜ.07: ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದ ಎಂ.ಎಡ್ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ನಿನ್ನೆ ಅಂದರೆ ಬುಧವಾರ ಬೆಳಗ್ಗೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗೆ ಕ್ಷೇತ್ರ ಅಧ್ಯಯನ ಅಡಿಯಲ್ಲಿ ಭೇಟಿ ನೀಡಿ, ವಿವಿಧ ವಲಯಗಳ ಬಗ್ಗೆ ವಿಸ್ತೃತವಾಗಿ ಮಾಹಿತಿ ಪಡೆಯಲಾಯಿತು. ಇದೇ ಸಂದರ್ಭದಲ್ಲಿ ಬೆಂಗಳೂರು ವಿವಿಯ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದರವರು, ಹಿರಿಯ ಪ್ರಾಧ್ಯಾಪಕರಾದ ಡಾ. ಎಂ.ಸಿ. ಎರ್ರಿಸ್ವಾಮಿ, ಡಯಟ್ ನ ಪ್ರಾಂಶುಪಾಲರು ಮತ್ತು ಉಪ ನಿರ್ದೇಶಕರಾದ ಶ್ರೀ ಶಿವಪ್ಪ, ಶ್ರೀಮತಿ ಲಕ್ಷ್ಮೀದೇವಿ ಲಾಲಿ, ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.




